Advertisement

ಬಿಜೆಪಿ ಜಾತಿ ಆಧಾರದ ಮೇಲೆ ಹುದ್ದೆ ನೀಡುವುದಿಲ್ಲ: ಈಶ್ವರಪ್ಪ

10:28 AM Sep 09, 2019 | Team Udayavani |

ಬೆಳಗಾವಿ : ಬಿಜೆಪಿಯಲ್ಲಿ ಯಾವುದೇ ಹುದ್ದೆಗಳನ್ನು ಜಾತಿ ಆಧಾರದ ಮೇಲೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿಯಲ್ಲಿ ಹುದ್ದೆ ನೀಡುವ ವಿಚಾರದಲ್ಲಿ
ಪಕ್ಷದ ವರಿಷ್ಠರು ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಹಿರಿಯರು ತೆಗೆದುಕೊಂಡ ತೀರ್ಮಾನಕ್ಕೆ ತಾವು ಬದ್ಧ ಎಂದರು.

Advertisement

ಶಿವಮೊಗ್ಗದಲ್ಲಿ ನಾನು ಗೆದ್ದು ಬಂದಿದ್ದೇನೆ, ಅಲ್ಲಿ ಕುರುಬ ಸಮುದಾಯದ ಜನರು ಕಡಿಮೆ ಇದ್ದಾರೆ, ಎಲ್ಲಾ ಸಮಾಜದವರು ಸೇರಿದರೆ ಅದು ಸರ್ಕಾರ. ಪಕ್ಷ ಕುರುಬ, ಲಿಂಗಾಯತ, ಬ್ರಾಹ್ಮಣ ಅಂತಾ ನಿರ್ಧಿರಿಸಲ್ಲ.

ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಸಿಎಂ ಪುತ್ರ ವಿಜಯೆಂದ್ರ ಹಸ್ತಕ್ಷೆಪ ಮಾಡುತ್ತಿರುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಕೇಳಿದ ಪ್ರಶ್ನೆಗೆ ಈ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ ಎಂದರು.

ನೆರೆ ಹಾವಳಿಯಿಂದ ತತ್ತರಿಸಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಹಣದ ನೆರವು ಸಿಗಲಿದೆ. ದೇಶದ 18 ರಾಜ್ಯದಲ್ಲಿ ಪ್ರವಾಹ ಬಂದಿದ್ದು ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದ ಈಶ್ವರಪ್ಪ ಹೇಳಿದರು.

ಚಿಕ್ಕೋಡಿಯಲ್ಲಿ 10 ಸಾವಿರ ಚೆಕ್ ಕೊಟ್ಟಿದ್ದೇ ಸಾಕು ಎಂಬ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ನಾನು ಹಾಗೇ ಹೇಳಿಯೇ ಇಲ್ಲ, ನನ್ನ ವಿರುದ್ಧ ಕಾಂಗ್ರೆಸನವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಬೆಂಬಲಿಗರು ಈ ರೀತಿ ಮಾಡಿದ್ದಾರೆ..

Advertisement

ನೆರೆ, ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದ ಈಶ್ವರಪ್ಪ ಕಿಡಿಕಾರಿದರು.

ಈಗ ಸರ್ಕಾರ 10 ಸಾವಿರ ನೀಡಿದೆ, ಇನ್ನೂ 50 ಸಾವಿರ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ರಮೇಶ ಜಾರಕಿಹೊಳಿ ಹೇಳಿದ ಆಪರೇಷನ್ ಕಮಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿಯವರು ಆಪರೇಷನ್ ಕಮಲ ನಡೆಸಿಲ್ಲ.
ರಮೇಶ ಜಾರಕಿಹೊಳಿ ನಡೆಸಿರಬಹುದು, ರಮೇಶ್ ಜಾರಕಿಹೊಳಿ ಸ್ನೇಹಿತರು ರಾಜೀನಾಮೆ ಕೊಟ್ಟಿದ್ದಕ್ಕೆ ನಮ್ಮ ಸರ್ಕಾರಬಂದಿದೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಈಗಲೂ ನಮ್ಮ ಸಂಪರ್ಕದಲ್ಲಿ ಇಲ್ಲ.ಅತೃಪ್ತರು ಯಾರು ಇದ್ದಾರೆ ಅವರು ಒಟ್ಟಾಗಿ ಇರಬಹುದು ಅದು ನಮಗೆ ಸಂಬಂಧವಿಲ್ಲ. ಇನ್ನೂ 10-15 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ಅದು ರಮೇಶ ಜಾರಕಿಹೊಳಿ ಅವರಿಗೆ ಗೊತ್ತಿರಬಹುದು. ಅದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next