Advertisement

ಪಕ್ಷ ಸಂಘಟಿಸಲು ಮಹಿಳಾ ಮೋರ್ಚಾ ಶ್ರಮ

12:50 PM Aug 30, 2020 | Suhan S |

ಚಾಮರಾಜನಗರ: ಬೂತ್‌ಮಟ್ಟದಿಂದ ಬಿಜೆಪಿಯನ್ನು ಗಟ್ಟಿಗೊಳಿಸಲು ಮಹಿಳಾ ಮೋರ್ಚಾ ಶ್ರಮಿಸಬೇಕು ಎಂದು ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ ಸಲಹೆ ನೀಡಿದರು.

Advertisement

ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇವಲ ಒಂದು ವಿಸಿಟಿಂಗ್‌ ಕಾರ್ಡ್‌ ಗೋಸ್ಕರ ಪಕ್ಷದ ಜವಾಬ್ದಾರಿ ಸೀಮಿತವಾಗದೇ ಚಾಮರಾಜನಗರ ಜಿಲ್ಲೆಯಲ್ಲಿ ಹೊಸದಾಗಿ ಜವಾಬ್ದಾರಿ ಹೊತ್ತಿರುವವರು ಪ್ರತಿ ಹಳ್ಳಿಹಳ್ಳಿಗೂ ಪ್ರವಾಸ ಮಾಡಿ ಪಕ್ಷದ ಸಂಘಟನೆಯನ್ನು ಹೆಚ್ಚು ಮಾಡಬೇಕಿದೆ ಎಂದರು.

ಒಗ್ಗಟ್ಟಿನಿಂದ ಕೆಲಸ ಮಾದರಿಯಾಗಲಿ: ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಿಳಿಸಿಕೊಡಬೇಕು. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯುವಂತೆ ಪಣತೊಟ್ಟು ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಹೇಳಿದರು. ಸಬಲೀಕರಣಕ್ಕೆ ಆದ್ಯತೆ: ಜಿಲ್ಲಾಧ್ಯಕ್ಷ ಆರ್‌.ಸುಂದರ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಹೆಚ್ಚು ಒತ್ತು ನೀಡಿದೆ ಎಂದರು.

ಮಾತೃಶಕ್ತಿಯಾಗಿಲಿ: ವಿಭಾಗೀಯ ಪ್ರಮುಖ್‌ ಮೈ.ವಿ.ರವಿಶಂಕರ್‌ ಮಾತನಾಡಿ, ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆಯಾದ ಗೀತಾ ವಿವೇಕಾನಂದ ಅವರು ಪಕ್ಷದ ಅನೇಕ ಜವಾಬ್ದಾರಿಗಳನ್ನು ಬಹಳ ಯಶ್ವಸಿಯಾಗಿ ನಿರ್ವಹಿಸಿದ್ದು, ಮಹಿಳಾ ಮೋರ್ಚಾದ ಸಂಘಟನೆಗೆ ರಭಸಕೊಡಲಿದ್ದಾರೆ. ಪಕ್ಷದ ತಳಮಟ್ಟದ ಸಂಘಟನೆಗೆ ಮಹಿಳಾ ಮೋರ್ಚಾ ಮಾತೃಶಕ್ತಿ ಯಾಗಿ ಇರಬೇಕಿದೆ ಎಂದರು.

ಗೆಲುವು ಸಾಧಿಸಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಧಾಮಲ್ಲಣ್ಣ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಮೋರ್ಚಾವನ್ನು ಬೂತ್‌ ಮಟ್ಟದಿಂದ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮಟ್ಟದಲ್ಲಿ ಸಂಘಟನೆ ಮಾಡಲಾಗುತ್ತದೆ ಎಂದರು.

Advertisement

ಸಭೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿ ಮಂಗಳಮ್ಮ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಜಯಶಂಕರ್‌, ಕಮಲಮ್ಮ, ಉಷಾರಾಣಿ, ಮಹದೇವಿ, ನಗರಸಭಾ ಸದಸ್ಯರಾದ ಮಮತ ಬಾಲಸುಬ್ರಹ್ಮಣ್ಯ, ಗಾಯತ್ರಿ ಚಂದ್ರಶೇಖರ್‌, ಜಿಲ್ಲಾ ಮಾಧ್ಯಮ ಪ್ರಮುಖ್‌ ಎನ್‌.ಮಂಜುನಾಥ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next