Advertisement

ಬಿಜೆಪಿ ಜಿಲ್ಲಾ ಉಸ್ತುವಾರಿಗಳ ನೇಮಕ

06:35 AM Aug 12, 2018 | |

ಬೆಂಗಳೂರು:ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಂಬಂಧ ಬಿಜೆಪಿ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ್ದು, ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಚಾಮರಾಜನಗರ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

Advertisement

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರ ಪ್ರವಾಸದಲ್ಲಿರುವ ವಿಜಯೇಂದ್ರಕ್ಕೆ ಇದೀಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಚಾಮರಾಜನಗರ ಉಸ್ತುವಾರಿ ವಹಿಸಲಾಗಿದೆ. ಇವರ ಜತೆ ರಾಜೇಂದ್ರ ಎಂಬುವರನ್ನು  ಉಸ್ತುವಾರಿಯಾಗಿ ನೇಮಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ  ಬೆಳಗಾವಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್‌. ಈಶ್ವರಪ್ಪ ಅವರಿಗೆ ಉತ್ತರ ಕನ್ನಡ, ಆರ್‌.ಅಶೋಕ್‌ ಅವರಿಗೆ ಕೊಡಗು ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

ಉಳಿದಂತೆ, ಹಾಸನ-ಸಿ.ಟಿ.ರವಿ, ಮಂಡ್ಯ-ಅಶ್ವಥ್‌ನಾರಾಯಣಗೌಡ, ಮೈಸೂರು-ಎನ್‌.ವಿ.ಫ‌ಣೀಶ್‌, ದಕ್ಷಿಣ ಕನ್ನಡ- ಸುನಿಲ್‌ಕುಮಾರ್‌, ಉದಯಕುಮಾರ್‌ ಶೆಟ್ಟಿ, ಉಡುಪಿ-ಪ್ರತಾಪ್‌ ಸಿಂಹ ನಾಯಕ್‌, ಗದಗ-ಮಹೇಶ್‌ ಟೆಂಗಿನಕಾಯಿ, ಕೊಪ್ಪಳ-ಶ್ರೀರಾಮುಲು, ರಾಯಚೂರು-ರಘುನಾಥ್‌ ರಾವ್‌ ಮಲ್ಕಾಪುರೆ, ಬೀದರ್‌ -ಶಶಿಲ್‌ ನಮೋಶಿ, ತುಮಕೂರು- ವಿ.ಸೋಮಣ್ಣ, ಚಿತ್ರದುರ್ಗ- ವೈ.ಎ.ನಾರಾಯಣಸ್ವಾಮಿ, ದಾವಣಗೆರೆ- ಆಯನೂರು ಮಂಜುನಾಥ್‌, ಹಾವೇರಿ-ಎಂ.ನಾಗರಾಜ್‌, ವಿಜಯಪುರ- ಲಕ್ಷ್ಮಣ ಸವದಿ, ಬಾಗಲಕೋಟೆ- ಅರವಿಂದ ಲಿಂಬಾವಳಿ, ಯಾದಗಿರಿ-ಅಮರ್‌ನಾಥ ಪಾಟೀಲ್‌, ಕಲಬುರಗಿ- ರವಿಕುಮಾರ್‌.ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ಸಂಗಣ್ಣ ಕರಡಿಗೆ ಟಿಕೆಟ್‌
ಕೊಪ್ಪಳ:
ಲೋಕಸಭಾ ಚುನಾವಣೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

Advertisement

ಆ ಮೂಲಕ ಹಾಲಿ ಸಂಸದ ಸಂಗಣ್ಣಗೆ ಟಿಕೆಟ್‌ ಪಕ್ಕಾ ಎಂದು ಬಹಿರಂಗ ಸಭೆಯಲ್ಲಿಯೇ ಘೋಷಿಸಿದರು. ಶನಿವಾರ
ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಸಂಸದ ಸಂಗಣ್ಣ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು 2 ಬಾರಿ ಹೇಳುವ ಮೂಲಕ ಅವರಿಗೆ ಟಿಕೆಟ್‌ ಪಕ್ಕಾ ಎನ್ನುವ ಮುನ್ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next