ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತ ತೀವ್ರ ಚರ್ಚೆಯ ನಡುವೆ, ಯಾವುದೇ ಕಾಂಕ್ರೀಟ್ ಪ್ರಸ್ತಾಪವಿಲ್ಲದ ಕಾರಣ ಅದರ ಬಗ್ಗೆ ಚರ್ಚೆ ಕೇವಲ ಗಾಳಿಪಟ ಹಾರಾಟದಂತೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ಜನರಿಗೆ ಸಂಬಂಧಿಸಿದ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಹಾಕಿದ “ಗೂಗ್ಲಿ” ಇದು ಎಂದು ಆರೋಪಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಚಿನ್ ಪೈಲಟ್, ಸ್ಥಾಯಿ ಸಮಿತಿಗಳಲ್ಲಿ ಅಥವಾ ಸಂಸತ್ತಿನಲ್ಲಿ ಯುಸಿಸಿಯಲ್ಲಿ ಏನೂ ಇಲ್ಲ. ಮಾತುಕತೆ ಕೇವಲ “ವಾಕ್ಚಾತುರ್ಯದ ರಾಜಕೀಯ ಭಾಷಣ” ವನ್ನು ಆಧರಿಸಿದೆ ಎಂದು ಹೇಳಿದರು.
ಯುಸಿಸಿ ಬಗ್ಗೆ ಯಾವುದೇ ಕಾಂಕ್ರೀಟ್ ಪ್ರಸ್ತಾಪವಿಲ್ಲ. ಅದನ್ನು ಬಿಜೆಪಿ ನೇತೃತ್ವದ ಕೇಂದ್ರವು “ರಾಜಕೀಯ ಸಾಧನ” ವಾಗಿ ಬಳಸುತ್ತಿದೆ ಎಂದು ಸಚಿನ್ ಪೈಲಟ್ ಹೇಳಿದರು.
ಇದನ್ನೂ ಓದಿ:Movie review: ಮಸ್ತ್ ಜರ್ನಿಯ ‘ನ್ಯಾನೋ ನಾರಾಯಣಪ್ಪ’
22 ನೇ ಕಾನೂನು ಆಯೋಗವು ಜೂನ್ 14 ರಂದು ರಾಜಕೀಯವಾಗಿ-ಸೂಕ್ಷ್ಮ ವಿಷಯದ ಕುರಿತು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಸ್ಟೇಕ್ ಹೋಲ್ಡರ್ ಗಳಿಂದ ಅಭಿಪ್ರಾಯಗಳನ್ನು ಪಡೆಯುವ ಮೂಲಕ ಯುಸಿಸಿ ಬಗ್ಗೆ ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿತು.