Advertisement

Siddaramaiah ರಾಜೀನಾಮೆಗೆ ಬಿಜೆಪಿ ಆಗ್ರಹ

12:25 AM Sep 11, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ವ್ಯಾಪಕ ಅಕ್ರಮದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಪಾತ್ರದ ಬಗ್ಗೆ ಜಾರಿ ನಿರ್ದೇಶನಾಲಯ ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

Advertisement

ವಾಲಿ¾ಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಮಧ್ಯಾಂತರ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಮಾಜಿ ಸಚಿವ ನಾಗೇಂದ್ರ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ನಾಗೇಂದ್ರ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ. 21 ಕೋಟಿ ರೂ.ಗಳನ್ನು ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ವಾಲ್ಮೀಕಿ ಹಗರಣ ಸರಕಾರಿ ಪ್ರಾಯೋಜಿತ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಆರೋಪಿಸಿದ್ದಾರೆ.

ರಾಜ್ಯ ಸರಕಾರ ರಚಿಸಿದ ಎಸ್‌ಐಟಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ನಾಗೇಂದ್ರ ಹೆಸರನ್ನು ಉದ್ದೇಶಪೂರ್ವಕವಾಗಿ ಬಚ್ಚಿಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರ ಮೂಗಿನ ನೇರದಲ್ಲಿ ಈ ಎಲ್ಲ ತಪ್ಪುಗಳು ಹಾಗೂ ಅವ್ಯವಹಾರ ನಡೆದಿದ್ದು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಐತಿಹಾಸಿಕ ಅನ್ಯಾಯ ಎಸಗಲಾಗಿದೆ. ಸಿದ್ದರಾಮಯ್ಯನವರೇ ನೈತಿಕತೆ ಎಂಬ ಪದ ನಿಮ್ಮ ಡಿಕ್ಷನರಿಯಲ್ಲಿದ್ದರೆ ಕೂಡಲೇ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.

Advertisement

ವಜಾ ಮಾಡಿ
ವಾಲ್ಮೀಕಿ ನಿಗಮದ 21 ಕೋಟಿ ಮೊತ್ತವನ್ನು ಬಳ್ಳಾರಿ ಚುನಾವಣೆಗೆ ಖರ್ಚು ಮಾಡಿದ್ದಾಗಿ ಇ.ಡಿ. ತನ್ನ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಬಳ್ಳಾರಿ ಸಂಸದರ ಸ್ಥಾನದಿಂದ ತುಕಾರಾಂ ಅವರನ್ನು ಚುನಾವಣ ಆಯೋಗವು ಕೂಡಲೇ ವಜಾ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಒತ್ತಾಯಿಸಿದ್ದಾರೆ.

ಇದು ಅಂತಾರಾಜ್ಯ ಭ್ರಷ್ಟಾಚಾರ ಪ್ರಕರಣ. ಸಿದ್ದರಾಮಯ್ಯ ಮತ್ತು ಶಿವಕುಮಾರರ ಇನ್ವೆಸ್ಟಿಗೇಶನ್‌ ಟೀಂ (ಎಸ್‌ಐಟಿ) ನಾಗೇಂದ್ರ ಹೆಸರನ್ನು ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಅವರಿಗೆ ಕ್ಲೀನ್‌ ಚಿಟ್‌ ಕೊಡಲಾಗಿತ್ತು. ಎಸ್‌ಐಟಿ ಮೂಲಕ ಮಾಜಿ ಸಚಿವರನ್ನು ಉಳಿಸುವ ಪ್ರಯತ್ನ ನಡೆದಿತ್ತು. ಸರ್ಕಾರದ ಹಸ್ತಕ್ಷೇಪ, ಬೆಂಬಲ ಇಲ್ಲದೆ, ವಾಲ್ಮೀಕಿ ನಿಗಮದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂದು ಆರೋಪಿಸಿದರು.

ಸಂಚು
ರಾಜ್ಯ ಸರಕಾರ ರಚಿಸಿದ ಎಸ್‌ಐಟಿ ಚಾರ್ಜ್‌ಶೀಟ್‌ಗೂ ಇಡಿ ಆರೋಪ ಪಟ್ಟಿಗೂ ಅಜಗಜಾಂತರವಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ರಾಜ್ಯ ಸರಕಾರ ಸಂಚು ನಡೆಸಿತ್ತು. ಇದಕ್ಕಾಗಿ ಪೊಲೀಸ್‌ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next