Advertisement

ಸಿಎಂ ವಿರುದ್ಧ ಬಿಎಸ್‌ವೈ ಕಿಡಿ:ನಾಳೆ ರಾಜ್ಯಾಧ್ಯಂತ ಬಿಜೆಪಿ ಪ್ರತಿಭಟನೆ

12:28 PM Nov 20, 2018 | |

ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲು ಮುಂದಾಗಿದ್ದು , ಬುಧವಾರ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಸರ್ಕಾರದ ವಿರುದ್ದ ಭಾರಿ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.ಲಕ್ಷಾಂತರ ರೈತರನ್ನು ಸೇರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. 

Advertisement

ಮಂಗಳವಾರ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದ್ದಾರೆ. 

ಕುಮಾರಸ್ವಾಮಿ ಅವರಿಗೆ ನನ್ನ ಪ್ರಶ್ನೆ , ಹೆಣ್ಣು ಮಗಳು ನಾಲಾಯಕ್‌ ಅಂದಿದ್ದಕ್ಕೆ ಸಿಟ್ಟು ಬಂತು. ಪ್ರತೀ ಬಾರಿ ಉಕ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ  ರಾಜಕೀಯ ಎಂದು  ಪ್ರಜಾತಂತ್ರ ವ್ಯವಸ್ಥೆ ಅಪಮಾನ ಮಾಡುತ್ತಿರುವುದು ಯಾಕೆ ಎಂದರು. 

ಮಹಾರಾಷ್ಟ್ರದ ಬಿಜೆಪಿ ಸರ್ಕಾರ ರೈತರಿಗೆ ಕಬ್ಬಿಗೆ  2900 ರೂ ದರ  ಮತ್ತು 200 ರೂಪಾಯಿ ಬೆಂಬಲ ಬೆಲೆ ಕೊಡುತ್ತಿದೆ ಅದನ್ನು ನೋಡಿಕೊಂಡು ಬನ್ನಿ  ಎಂದರು. 

ಮಾತೆತ್ತಿದರೆ ಮೋದಿ ಅವರನ್ನು ಟೀಕೆ ಮಾಡುತ್ತಿರಲ್ಲಾ , ಗುಜರಾತ್‌ನಲ್ಲಿ  ಕಬ್ಬಿಗೆ 3,200 ರಿಂದ 4,200 ರೂಪಾಯಿ ಎಫ್ಆರ್‌ಪಿ ನೀಡಲಾಗುತ್ತಿದೆ.ಅದನ್ನು ನೋಡಿಕೊಂಡು ಬನ್ನಿ ಎಂದರು.

Advertisement

ಸಮಯ ಸಾಧಕರು!
ದೇವೇಗೌಡರು ಮತ್ತು  ಕುಮಾರಸ್ವಾಮಿ ಅತ್ಯಂತ ದೊಡ್ಡ ಸಮಯ ಸಾಧಕರು. ನಾನು ಅವರ ಮನೆಗೆ ಹೋಗಿದ್ದೇನೆ ಅಂತೆ. ನಾಚಿಕೆ ಆಗಬೇಕು ನಿಮಗೆ. ಧರಂ ಸಿಂಗ್‌ಗೆ ಕೈಕೊಟ್ಟು ಬಂದವರು ನೀವು, ಆ ಬಳಿಕ ನಮಗೂ ಕೈಕೊಟ್ಟಿರಿ. ಒಬ್ಬ ಪ್ರಧಾನಿ ಆಡುವ ಮಾತಾ ಇದು? ರಾಮಕೃಷ್ಣ  ಹೆಗಡೆ ಅವರಿಗೆ ಚಪ್ಪಲಿಯಲ್ಲಿ ಹೊಡೆಸಿದವರು ಯಾರು? ಬಳಿಕ ಆದೇ ರಾಮಕೃಷ್ಣ ಹೆಗಡೆ ಅವರ ಕಾಲು ಹಿಡಿದು ಜನತಾ ದಳದ ಅಧ್ಯಕ್ಷರಾದವರು ಯಾರು? ಆ ಬಳಿಕ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಹೊರ ಹಾಕಿದ್ದು ಯಾರು? ಎಂದು ಪ್ರಶ್ನೆಗಳ ಮಳೆ ಗೈದರು. 

Advertisement

Udayavani is now on Telegram. Click here to join our channel and stay updated with the latest news.

Next