Advertisement

ಬಿಜೆಪಿ ಸಂಸ್ಕೃತಿ ಬಹಿರಂಗ: ಡಿ.ಕೆ.ಶಿವಕುಮಾರ್‌

11:58 PM Jan 04, 2022 | Team Udayavani |

ಬೆಂಗಳೂರು: ರಾಮನಗರದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಆಡಿರುವ ನುಡಿಮುತ್ತಗಳಿಂದ ಅವರ ಸಂಸ್ಕೃತಿ ದರ್ಶನ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಕೇವಲ ರಾಜ್ಯಾದ್ಯಂತ ಅಲ್ಲ, ಇಡೀ ದೇಶಾದ್ಯಂತ ಪ್ರತಿಭಟನೆ ಮಾಡಲಿ. ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯ ಮಂತ್ರಿಗಳು, ಆರ್‌. ಅಶೋಕ್‌ ಸಹಿತ ಅನೇಕ ಬಿಜೆಪಿ ನಾಯಕರು ಅಶ್ವತ್ಥನಾರಾಯಣ ಅವರ ಮಾತುಗಳನ್ನು ಪ್ರಮಾಣೀಕರಿಸಿ ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಭಡ್ತಿ ನೀಡಲಿ ಎಂದು ಲೇವಡಿ ಮಾಡಿದರು.

ಜನರಿಂದಲೇ ಉತ್ತರ
ರಾಮನಗರ ರಿಪಬ್ಲಿಕ್‌ ಆಗಲು ಬಿಡುವುದಿಲ್ಲ ಎಂಬ ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದಕ್ಕೆ ಜನರು ಉತ್ತರ ನೀಡುತ್ತಾರೆ ಎಂದರು.

ಏನೇ ಆದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ: ಡಿ.ಕೆ.ಶಿವಕುಮಾರ್‌
ಮೇಕದಾಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಎಲ್ಲ ರೀತಿಯ ಆರೋಗ್ಯ ಸುರûಾ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಹಿತ ನಾಯಕರ ಜತೆ ಪೂರ್ವಭಾವಿ ಸಭೆ ನಡೆಸಿದ ಅವರು, 100 ವೈದ್ಯರು, 10 ಆ್ಯಂಬುಲೆನ್ಸ್‌ ಸಹಿತ ವೈದ್ಯಕೀಯ ತಂಡ ಇರಲಿದೆ ಎಂದರು.

Advertisement

ಇದನ್ನೂ ಓದಿ:ಕೋವಿಡ್ ಹೆಚ್ಚಳ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ 2 ವಾರ ಶಾಲೆ ಬಂದ್

ಕೊರೊನಾ ನಿಯಮಾವಳಿ ಪ್ರಕಾರವೇ ಯಾತ್ರೆ ನಡೆಯಲಿದೆ. ರಾಜ್ಯದ ಎಲ್ಲ ಕಡೆಗಳಿಂದಲೂ ಕಾರ್ಯಕರ್ತರು, ಮುಖಂಡರು ಬರಲಿದ್ದಾರೆ ಎಂದು ಹೇಳಿದರು.ಪ್ರತಿ ದಿನ ಒಂದೊಂದು ಜಿಲ್ಲೆಯವರು ಬರಲಿದ್ದಾರೆ. 9ರಿಂದ 19 ರ ವರೆಗೂ ಪಾದಯಾತ್ರೆ ನಡೆಯಲಿದ್ದು, ಇದುವರೆಗೂ 4,800 ಜನರು ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ಬಹಿರಂಗ ಸಭೆ ಮಾಡ ಬಹುದು, ಜನಾಶೀರ್ವಾದ ಯಾತ್ರೆ ಮಾಡ ಬಹುದು. ನಾವು ನೀರಿಗಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಅಡ್ಡಿ ಯಾಕೆ? ಅವರು ಬೇಕಾದರೆ ಬಂಧಿಸಲಿ, ಪ್ರಕರಣವಾದರೂ ದಾಖಲಿಸಲಿ, ಪಾದಯಾತ್ರೆ ನಡೆದೇ ನಡೆಯುತ್ತದೆ ಎಂದು ಹೇಳಿದರು.

ಕುತ್ತಿಗೆ ಕೊಯ್ದು ಕುತಂತ್ರ ರಾಜಕಾರಣ ಮಾಡುತ್ತಾರೆ ಎಂಬ ಅಶ್ವತ್ಥನಾರಾಯಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ. ನಾನು ಎಂತೆಂಥವರ ಜತೆಗೋ ರಾಜಕಾರಣ ಮಾಡಿ ದ್ದೇನೆ. ನೋಡೋಣ ಎಂದು ತಿಳಿಸಿದರು.

ಅಶ್ವತ್ಥನಾರಾಯಣ ಅವರ ದೊಡ್ಡ ದೊಡ್ಡ ಮಾತು ಆಡಿದ್ದಾರೆ. ಪಾಪ, ಅವರೂ ನಮ್ಮ ಬ್ರದರ್‌ ಅಲ್ವಾ? ಅಶ್ವತ್ಥ ನಾರಾಯಣ ಅಣ್ಣಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next