Advertisement

ರಾಜಸ್ಥಾನ ರಾಜಕೀಯ; ದೂರವಾಣಿ ಕದ್ದಾಲಿಕೆ ಆರೋಪ, ಸಿಬಿಐ ತನಿಖೆಗೆ ಬಿಜೆಪಿ ಪಟ್ಟು

01:33 PM Jul 18, 2020 | Nagendra Trasi |

ಜೈಪುರ್: ರಾಜಸ್ಥಾನ ರಾಜಕೀಯ ಬಿಕ್ಕಟ್ಟು, ಆಡಿಯೋ ಟೇಪ್ ವಿಚಾರದಲ್ಲಿ ಕಾಂಗ್ರೆಸ್ ತೀವ್ರ ವಾಗ್ದಾಳಿ, ಆರೋಪ ನಡೆಸುತ್ತಿರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ಕೂಡಾ ತಿರುಗೇಟು ನೀಡಿದೆ. ಒಂದು ವೇಳೆ ಗೆಹ್ಲೋಟ್ ಸರ್ಕಾರ ರಾಜಕಾರಣಿಗಳ ದೂರವಾಣಿ ಕದ್ದಾಲಿಸುವ ತಂತ್ರಗಾರಿಕೆಗೆ ಮೊರೆ ಹೋಗಿದ್ದರೆ ಅದು ಅಸಾಂವಿಧಾನಿಕ ಎಂದು ಹೇಳಿದೆ.

Advertisement

ಅಂತರ್ಜಾಲ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ರಾಜಸ್ಥಾನ ಕಾಂಗ್ರೆಸ್ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಮಾಹಿತಿ ನೀಡುವ ಮೊದಲು ಸಂಬಿತ್ ಕಾಂಗ್ರೆಸ್ ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರು.

*ಒಂದು ವೇಳೆ ದೂರವಾಣಿ ಕದ್ದಾಲಿಸಿದ್ದರೆ…ಅದಕ್ಕೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಲೇಬೇಕು.

*ಒಂದು ವೇಳೆ ದೂರವಾಣಿ ಕದ್ದಾಲಿಸಿದ್ದರೆ, ಇದೊಂದು ಸೂಕ್ಷ್ಮ ಹಾಗೂ ಕಾನೂನು ಸಂಬಂಧಿತ ವಿಚಾರವಲ್ಲವೇ?

*ರಾಜಸ್ಥಾನ ಸರ್ಕಾರ ದೂರವಾಣಿ ಕದ್ದಾಲಿಸಿದೆಯಾದರೆ, ನಿಜಕ್ಕೂ ಕಾಂಗ್ರೆಸ್ ಸಮರ್ಪಕವಾದ ಕ್ರಮ ಅನುಸರಿಸಿದೆಯೇ?

Advertisement

*ತಮ್ಮ ಬಿಕ್ಕಟ್ಟಿನಿಂದ ರಕ್ಷಿಸಿಕೊಳ್ಳಲು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅಸಾಂವಿಧಾನಿಕ ಹಾದಿಯನ್ನು ಹಿಡಿದಿದೆಯೇ? ದೂರವಾಣಿ ಕದ್ದಾಲಿಕೆಯಂತಹ ಪ್ರಕರಣದಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.

*ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಮುಖಂಡರನ್ನು ರಾಜಸ್ಥಾನ ಸರ್ಕಾರ ಗೌಪ್ಯವಾಗಿ ದೂರವಾಣಿ ಕದ್ದಾಲಿಸುತ್ತಿದೆಯೇ?

*ಇದು ರಾಜಸ್ಥಾನದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಂತೆ ಅಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next