Advertisement
ಬಿಜೆಪಿ ಸರ್ಕಾರ ಕೋವಿಡ್ ನಿರ್ವಹಣೆ ಹೆಸರಿನಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಲೂಟಿ ಮಾಡಿರುವ ಬಗ್ಗೆ ರಾಜ್ಯ ಉತ್ಛ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ಶ್ವೇತಪತ್ರ ಹೊರಡಿಸಬೇಕು. ಇಲ್ಲವಾದರೆ ಬೂತ್ ಹಂತದಿಂದಲೂ ರಾಜ್ಯದಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Related Articles
Advertisement
ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ಕೊರೊನಾ ನಮಗೆ ಸಂಕಟವಾದರೆ ಬಿಜೆಪಿಯವರಿಗೆ ಹಬ್ಬವಾಗಿದೆ. ಬಿಜೆಪಿ ಸರ್ಕಾರ ಜನರು ಹಾಗೂ ಪ್ರತಿಪಕ್ಷಗಳ ಮಾತುಗಳಿಗೆ ಕಿವಿಗೊಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದರು. ಈಗ ಮತ್ತೆ ಅದೇ ಪರಿಸ್ಥಿತಿ ಬರುತ್ತಿದೆ ಎಂದು ಭವಿಷ್ಯ ನುಡಿದರು.
ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು ಕೋವಿಡ್ ಗೆ ಮಾಡಿರುವ ವೆಚ್ಚದ ವಿವರ ಕೊಡುತ್ತಿಲ್ಲ. ಕೇವಲ 25-30 ಸಾವಿರ ರೂಪಾಯಿ ಮಾತ್ರ ಕೋವಿಡ್ ಗೆ ಖರ್ಚು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ನೆಪದಲ್ಲಿ ಜನರನ್ನು ಸುಮ್ಮ ಸುಮ್ಮನೆ ಕರೆದೊಯ್ದು ಕೂಡಿ ಹಾಕುತ್ತಿದ್ದಾರೆ. ಔಷಧಿ, ಬಿಸಿನೀರು ಹಾಗೂ ಊಟಕ್ಕೂ ಸಮರ್ಪಕ ವ್ಯವಸ್ಥೆ ಇಲ್ಲ. ಇಂತಹ ಕೆಲಸ ಮಾಡುತ್ತಿರುವವರು ಜೈಲಿಗೆ ಹೋಗುವವರೆಗೂ ಬಿಡುವುದಿಲ್ಲ. ಬಿಜೆಪಿಯವರಿಗೆ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುವುದೇ ಬಿಜೆಪಿಯ ಸಂಸ್ಕಾರ ಎಂಬಂತಾಗಿದೆ. ಪ್ರತಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರೇ ಕಳಪೆ ಹಾಗೂ ಬಳಕೆಯಾದ ವೆಂಟಿಲೇಟರ್ ಗಳನ್ನು ದುಬಾರಿ ವೆಚ್ಚಕ್ಕೆ ಖರೀದಿ ಮಾಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ದಿಕ್ಕು ದೆಸೆ, ದೂರದೃಷ್ಟಿ, ಸಂವೇದನಾಶೀಲತೆ ಇಲ್ಲದಂತಾಗಿದೆ. ಸಚಿವರಲ್ಲಿ ಸಮನ್ವಯತೆ ಇಲ್ಲ. ಕೋವಿಡ್, ಖರ್ಚು-ವೆಚ್ಚದ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಲು ತಯಾರಿಲ್ಲ. ಕೋವಿಡ್ ನೆಪದಲ್ಲಿ ಸರ್ಕಾರದ ಆಸ್ತಿ ಮಾರಾಟ ಮಾಡಲು ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿದೆ. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಆರ್‌ಬಿಐನಿಂದ 8 ಸಾವಿರ ಕೋಟಿ ಸಾಲ ಪಡೆಯುವ ಮೂಲಕ ರಾಜ್ಯದ ಸಾಲದ ಹೊರೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕರಾದ ಎಚ್.ಪಿ. ರಾಜೇಶ್, ಡಿ.ಜಿ. ಶಾಂತನಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಪಂ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಸಂಕಷ್ಟ ಎದುರಿಸುತ್ತಿರುವಾಗಲೂ ಜನರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ನಿಧಿಗೆ ಹಣ ನೀಡಿದ್ದಾರೆ. ಆದರೆ ಸಚಿವರು ಕೋವಿಡ್ ನಿರ್ವಹಣೆ ಹೆಸರಿನಲ್ಲಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ನಾವೇನೂ ಅವ್ಯವಹಾರ ನಡೆಸಿಲ್ಲ ಎಂದು ಮಂತ್ರಿ ಮಂಡಲದವರು ಹೇಳುತ್ತಿದ್ದಾರೆ, ಆದರೆ ಲೆಕ್ಕ ಮಾತ್ರ ತೋರಿಸ್ತಿಲ್ಲ. ಮಾಫಿಯಾ ರೀತಿ ಹೊರಟಿದ್ದಾರೆ. ಆದಷ್ಟು ಬೇಗ ಭ್ರಷ್ಟ ಸರ್ಕಾರ ತೊಲಗಲಿ.ಡಾ| ಶಾಮನೂರು ಶಿವಶಂಕರಪ್ಪ, ಶಾಸಕರು ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ರಾಮ ಮಂದಿರ ಕಟ್ಟುವ ಅಗತ್ಯವಾದರೂ ಏನಿತ್ತು, ರಾಮ ಮಂದಿರ ಬೇಕಿರುವುದು ನಿಜ, ಆದರೆ ಈ ಸಂದರ್ಭದಲ್ಲಿ ಬೇಕೇ, ನೂರಾರು ಕೋಟಿ ರೂ.ಗಳ ಖರ್ಚು ಮಾಡಬೇಕೇ?
ಎಸ್. ರಾಮಪ್ಪ, ಶಾಸಕರು