Advertisement

ಅಲೆಮಾರಿ ಜನಾಂಗಕ್ಕೆ ಬಿಜೆಪಿ ಕೊಡುಗೆಗೆ ಮೆಚ್ಚುಗೆ

08:19 PM Jun 20, 2022 | Team Udayavani |

ಬೆಂಗಳೂರು: ರಾಜ್ಯದಾದ್ಯಂತ ಇರುವ ಎಸ್ಸಿ ಹಾಗೂ ಎಸ್ಟಿ ಅಲೆಮಾರಿ ಜನಾಂಗದ ಮುಖಂಡರು ಹಾಗೂ ಪ್ರತಿನಿಧಿಗಳು ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಎಸ್‌.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿದ್ದರು.

Advertisement

ಬ್ರಿಟಿಷ್‌ ಆಡಳಿತ ಕಾಲದಲ್ಲಿ ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯಗಳನ್ನು ಕ್ರಿಮಿನಲ್‌ ಟ್ರೈಬ್‌ ಎಂದು ಗುರುತಿಸಿದ್ದನ್ನು ತೆಗೆದುಹಾಕಲು (ಕ್ರಿಮಿನಲೈಫ‌ಷನ್‌ ಆಫ್ ನೊಮಾಡಿಟಿಕ್‌ ಟ್ರೈಬ್ಸ್’)  ಹಿಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಪ್ರಯತ್ನಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಕಡೆಗಳಲ್ಲಿ ಹಾಗೂ  ವಿವಿಧ ಕೆಟಗರಿಗಳಲ್ಲಿ ಹಂಚಿಹೋಗಿರುವ ಸಮುದಾಯಗಳ ಪ್ರತಿನಿಧಿಗಳು ಅವರ ಬುಡಕಟ್ಟುಗಳ ವೈಶಿಷ್ಟ್ಯತೆಯನ್ನು, ಸಂಸ್ಕೃತಿ ಆಚರಣೆಗಳನ್ನು, ಸಂಪ್ರದಾಯಗಳ ಕುರಿತಾದ ಮಾಹಿತಿಯನ್ನು ಸಂತಸದಿಂದ ಹಂಚಿಕೊಂಡರು.

ಬಡತನ, ಅನಕ್ಷರತೆ,  ಸಾಮಾಜಿಕ ಹಿಂದುಳಿಯುವಿಕೆ, ಅವಕಾಶಗಳ ಕೊರತೆ ಮುಂತಾದ ಹಲವಾರು ಆತಂಕಗಳ ನಡುವೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮೂಲವೃತ್ತಿಯಿಂದ ವಿಮುಖರಾಗುತ್ತಿರುವ ಯುವಜನಾಂಗ, ಸಮಾಜ ಎದುರಿಸುತ್ತಿರುವ ಸಂಕಟಗಳನ್ನು ತೋಡಿಕೊಂಡರು. ಸಣ್ಣ ಸಣ್ಣ ಅಲೆಮಾರಿ ಸಮುದಾಯಗಳಾಗಿರುವ ಕಾರಣಕ್ಕೆ ಸರಕಾರದ ಸೌಲಭ್ಯಗಳು, ಮೀಸಲಾತಿ ನಮನ್ನು ತಲುಪುತ್ತಿಲ್ಲ. ಹಾಗಾಗಿ ಒಳಮೀಸಲಾತಿ ಸೇರಿದಂತೆ ವಿವಿಧ ಅವಕಾಶಗಳನ್ನು ಸರಕಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಪರಿಶಿಷ್ಟ ಪಂಗಡದಲ್ಲಿ 51 ಪರಿಶಿಷ್ಟ ಜಾತಿಯಲ್ಲಿ 23 ಹಂಚಿಹೋಗಿರುವ ಈ ಸಮುದಾಯಗಳು ತಾವು ಎದುರಿಸುತ್ತಿರುವ ಮತಾಂತರ, ನೆಲೆ ಮತ್ತು ವಸತಿ ಸಮಸ್ಯೆ,  ಶಿಕ್ಷಣ, ಔದ್ಯೋಗಿಕ ಹಾಗೂ ರಾಜಕೀಯದಲ್ಲಿ ಪ್ರಾತಿನಿಧ್ಯವಿಲ್ಲದೆ ಇರುವುದರ ಕಡೆಗೂ ಗಮನ ಸೆಳೆದ ಈ ಪ್ರತಿನಿಧಿಗಳು ಸಮುದಾಯದ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.

ವಿಧಾನ ಪರಿಷತ್‌ ಸದಸ್ಯರೂ ಆದ ಛಲವಾದಿ ನಾರಾಯಣಸ್ವಾಮಿ, ಸಮಾಜದ ನಾಯಕರಾದ ಲೋಹಿತ್‌ ರಂಗಾಪುರ, ಆದರ್ಶ್‌ ಯಲ್ಲಪ್ಪ, ಡಾ. ಕೃಷ್ಣಮೂರ್ತಿ ಕೆ.ವಿ,  ಮಂಜುನಾಥ್‌, ಕುಳ್ಳಯ್ಯಪ್ಪ, ಬಸವರಾಜು ಅವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next