ಬೆಂಗಳೂರು: ಮಾದಕ ವಸ್ತು ಸಾಗಣೆ ಜಾಲದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿಯ ನಾಯಕರ ಬಗ್ಗೆ ಸರಣಿ ಟ್ವೀಟ್ ಮೂಲಕ ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿ ಬಿಜೆಪಿ ಪಕ್ಷವನ್ನು ಪ್ರಶ್ನಿಸಿದೆ.
ಟ್ವಿಟ್ಟರ್‌ನಲ್ಲಿ “ಅಮಲಿನ ಕಮಲ’ (ಬಿಜೆಪಿ ಡ್ರಗ್ ಪೆಡ್ಲರ್) ಹೆಸರಿನ ಪೋಸ್ಟ್‌ಗಳ ಪ್ರತಿ ಪ್ರಕರಣದ ಮಾಹಿತಿ ನೀಡಲಾಗಿದೆ. ಜತೆಗೆ ಆರೋಪಿಗಳು ಬಿಜೆಪಿ ನಾಯಕರ ಜತೆ ಇರುವ ಫೋಟೋ ಹಾಕಲಾಗಿದೆ.
ಕರ್ನಾಟಕ ಕಾಂಗ್ರೆಸ್ ಟ್ವೀಟ್‌ಗಳು: “ದೇಶದ ಉದ್ದಗಲದಲ್ಲಿ ಡಗ್ಸ್ ಜಾಲದಲ್ಲಿರುವುದೇ ಬಿಜೆಪಿ. ಕರ್ನಾಟಕದ ಸ್ಟಾರ್ ಪ್ರಚಾರಕಿಗೆ ಡ್ರಗ್ಸ್ ನಂಟು, ಬಂಗಾಳದ ನಾಯಕಿಗೆ ಕೊಕೇನ್ ಗಂಟು. ದೇಶದಲ್ಲೆಡೆ ಮಾದಕ ದ್ರವ್ಯಗಳ ಜಾಲವನ್ನು ನಡೆಸುತ್ತಾ ಯುವ ಜನರ ಬದುಕು ಮುಗಿಸುತ್ತಿದೆ ಅಮಲಿನ ಕಮಲ.’
“ಬಿಜೆಪಿಯ ಅನಧಿಕೃತ ವಕ್ತಾರೆ ಕಂಗನಾ ರಾಣಾವತ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ. ಸ್ವತಃ ಈಕೆಯೇ ಡ್ರಗ್ಸ್ ಸೇವನೆಯನ್ನು ಒಪ್ಪಿದ್ದು ಸುದ್ದಿಯಾಗಿತ್ತು. ಆಕೆಯ ಪರ ಇಡೀ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಲೋಕಸತ್ಯ. ಅಮಲಿನ ಕಮಲ ಲೀಲೆಗಳು ಒಂದೆರೆಡಲ್ಲ’. “ಮಣಿಪುರದ ಬಿಜೆಪಿ ಮುಖಂಡನ ಭಾರೀ ಪ್ರಮಾಣದ ಡ್ರಗ್ಸ್ ದಂಧೆ. ಪೊಲೀಸರು 27 ಕೋಟಿ ರೂ. ಮೊತ್ತದ ಡ್ರಗ್ಸ್‌ನೊಂದಿಗೆ ಆತನನ್ನು ಬಂಧಿಸುತ್ತಾರೆ.
ಮಣಿಪುರದ ಮುಖ್ಯಮಂತ್ರಿ ಪೊಲೀಸರಿಗೆ ಧಮ್ಕಿ ಒತ್ತಡ ಹಾಕುತ್ತಾರೆಂದರೆ ಡ್ರಗ್ಸ್ ಜಾಲಕ್ಕೆ ಅಮಲಿನ ಕಮಲ ಕುಮ್ಮಕ್ಕು ಎಷ್ಟಿದೆ ಯೋಚಿಸಿ.’ “ನಟಿ ಹಾಗೂ ಬಿಜೆಪಿಯ ಸ್ಟಾರ್ ಪ್ರಚಾರಕಿ ಡ್ರಗ್ಸ್ ದಂಧೆಯ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು. ಈಕೆಯನ್ನು ರಕ್ಷಿಸಲು ಹಲವು ಬಿಜೆಪಿ ನಾಯಕರು ಮಂತ್ರಿಗಳು ಲಾಬಿ ನಡೆಸಿದ್ದರು. ಅಮಲಿನ ಕಮಲ ಪಕ್ಷದಲ್ಲಿ ಡ್ರಗ್ಸ್ ದಂಧೆ ಮೋರ್ಚಾ ಇದೆಯಾ ಎನ್ನುವ ಅನುಮಾನ ಮೂಡುತ್ತಿದೆ.’
“ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಗುಜರಾತಿ ನಿಂದ ಮಣಿಪುರದವರೆಗೆ ದೇಶಾದ್ಯಂತ ಡ್ರಗ್ಸ್ ಜಾಲ ಹಡುವುದರಲ್ಲಿ ಅಮಲಿನ ಕಮಲ ಪಾತ್ರ ದೊಡ್ಡದು. ಹಾಸ್ಯನಟಿ ಭಾರತಿ ಸಿಂಗ್ ಡ್ರಗ್ಸ್ ಸೇವನೆ ಸಾಗಣೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು. ಈಕೆಗೂ ಬಿಜೆಪಿಗೂ ನಿಕಟ ಸಂಪರ್ಕ ಮತ್ತು ಸ್ಟಾರ್ ಪ್ರಚಾರಕಿಯಾಗಿದ್ದರು.’
“ತಮಿಳುನಾಡಿನ ಬಿಜೆಪಿ ಮುಖಂಡ ಅದೈಕ್ಕಲರಾಜ್ 1,800 ಕೆ.ಜಿ. ಅಫೀಮು ಸಾಗಣೆಯಲ್ಲಿ ಬಂಧಿಸಲ್ಪಟ್ಟಿದ್ದರು. ತಮ್ಮ ಬಂಡವಾಳ ಬಯಲಾಗುತ್ತಿದ್ದಂತೆ ಬಿಜೆಪಿ ಆತನ ಉಚ್ಛಾಟನೆ ನಾಟಕವಾಡಿತ್ತು. ದೇಶದ ಯುವ ಜನರನ್ನು ದಾರಿ ತಪ್ಪಿಸುವುದೇ ಬಿಜೆಪಿ ಕಾಯಕ.’ “ಕಲಬುರಗಿಯಲ್ಲಿ ಭಾರಿ ಪ್ರಮಾಣದ ಗಾಂಜಾ ದಂಧೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಬಂಧನವಾಗಿತ್ತು. ಬಿಜೆಪಿ ನಾಯಕರು ಆತನ ರಕ್ಷಣೆಗಾಗಿ ಪ್ರಯತ್ನ ನಡೆಸಿದ್ದರು. ಇದು “ಅಮಲಿನ ಕಮಲ’ದ ಮಾದಕ ಜಾಲ ದೇಶಾದ್ಯಂತ, ಹಬ್ಬಿರುವುದಕ್ಕೆ ಸಾಕ್ಷಿ.’