Advertisement

ಬಿಜೆಪಿ-ಕಾಂಗ್ರೆಸ್‌ ಆಡಳಿತ ಸಾಧನೆ ಪ್ರಚಾರಕ್ಕೆ ಸೀಮಿತ

11:44 AM Jan 19, 2018 | |

ಬೀದರ: ಬಿಜೆಪಿ, ಕಾಂಗ್ರೆಸ್‌ ಹತ್ತು ವರ್ಷ ಆಡಳಿತದ ಸಾಧನೆ ಪ್ರಚಾರಕ್ಕೆ ಸೀಮಿತವಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸಿದ ಎರಡು ಪಕ್ಷಗಳ ವೈಫಲ್ಯ ನೋಡಿ ಜನ ಜೆಡಿಎಸ್‌ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ 20 ತಿಂಗಳ ನನ್ನ ಕೆಲಸ ಜನರ ಮನದಲ್ಲಿ ಉಳಿದಿದೆ ಎಂದರು. 

Advertisement

ಬರುವ ವಿಧಾನಸಭೆ ಚುನಾವಣೆ ನಮಗೆ ದೊಡ್ಡ ಸವಾಲು. ಎರಡು ರಾಷ್ಟ್ರೀಯ ಪಕ್ಷಕ್ಕೆ ಹೋಲಿಸಿದಾಗ ಆರ್ಥಿಕ,
ಸಂಘಟನೆಯಲ್ಲಿ ಜೆಡಿಎಸ್‌ ಪಕ್ಷ ಹಿಂದಿದೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಇದ್ದು, ಇತರ ಕ್ಷೇತ್ರಗಳಲ್ಲಿಯೂ ಇದಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ತಿಳಿಸಿದರು.

ಬೀದರನಲ್ಲಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ನನ್ನ ಕಣ್ತೆರೆಸುವ ಕೆಲಸ ಮಾಡಿರುವುದು ಅಭಿನಂದನಾರ್ಹರು.
ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆ ಮತ್ತು ಸರ್ಕಾರದ ಕಾರ್ಯಕ್ರಮ ಜಾರಿಯಲ್ಲಿನ ಲೋಪಗಳನ್ನು ವಿದ್ಯಾರ್ಥಿಗಳು ಅನಾವರಣ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ- ಪಿಯುಸಿ ಫಲಿತಾಂಶದಲ್ಲಿ ಇಲ್ಲಿನ ಮಕ್ಕಳು ಹಿಂದೆ ಇದ್ದರೂ ವಿಚಾರವಂತಿಕೆ, ತಿಳಿವಳಿಕೆಗೆ ಮುಂದುವರಿದ ದೊಡ್ಡ ನಗರಕ್ಕಿಂತ ಮೇಲು. ಇಲ್ಲಿನ ಮಕ್ಕಳ ಸಲಹೆಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ಮುಖಂಡರಾದ ನಸೀಮ ಪಟೇಲ, ಬಸವರಾಜ ಪಾಟೀಲ ಹಾರೂಗೇರಿ ಇದ್ದರು ಮಂಡ್ಯದಲ್ಲಿನ ಕಾರ್ಖಾನೆಗೆ ಆರ್ಥಿಕ ನೆರವು ನೀಡುವ ಸರ್ಕಾರ ಜಿಲ್ಲೆಯ ಅತಿ ಹಳೆಯ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬರುವ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆಯುತ್ತೇನೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವೆ. 
 ಎಚ್‌.ಡಿ. ಕುಮಾರಸ್ವಾಮಿ ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next