Advertisement

ಗೋಹತ್ಯೆಗೆ ಕಠಿಣ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

02:15 AM Dec 03, 2021 | Team Udayavani |

ಕೋಟೇಶ್ವರ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಹಿಂದುಳಿದ ವರ್ಗಗಳ ಮಂಡಲವಾರು ಪ್ರಮುಖರ ಸಮಾವೇಶ ಗುರುವಾರ ಕೋಟೇಶ್ವರದಲ್ಲಿ ನಡೆಯಿತು.

Advertisement

ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶವನ್ನು ಉದ್ಘಾಟಿಸಿ ಮಾತ ನಾಡಿ, ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಕೆಲವು ದುಷ್ಕರ್ಮಿಗಳು ಅಕ್ರಮ ವಾಗಿ ಗೋವುಗಳ ಸಾಗಾಟ, ಹತ್ಯೆಯನ್ನು ಮುಂದುವರಿಸಿರುವುದು ಖಂಡ ನೀಯ. ಅಂಥವರ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೋಹತ್ಯೆ ನಿಷೇಧದ ಬಗ್ಗೆ ಕಾನೂನು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಯೋಜನೆಗಳ ಸದುಪಯೋಗ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. 226 ಮುಖ್ಯ ಜಾತಿ, 800 ಉಪಜಾತಿ ಹೊಂದಿರುವ ಹಿಂದುಳಿದ ವರ್ಗ ದವರು ಒಟ್ಟಾಗಬೇಕು. ಸರಕಾರದ ಯೋಜನೆಗಳ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನ ಪಡೆಯುವುದರೊಡನೆ ಬಿಜೆಪಿ ಬಹುಮತ ಗಳಿಸುವುದು. ಆ ನಿಟ್ಟಿನಲ್ಲಿ ಪ್ರತಿಯೋರ್ವರೂ ಶ್ರಮಿಸಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ಮಾತನಾಡಿ, ಸಮುದಾಯ ವನ್ನು ಒಗ್ಗೂಡಿಸಿ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅವರನ್ನು ಬೆಳೆಸಬೇಕೆಂದರು.

ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್‌, ಪ್ರಧಾನ ಕಾರ್ಯದರ್ಶಿ ಸುರೇಶಬಾಬು, ಉಪಾಧ್ಯಕ್ಷ ಅಶೋಕ ಮೂಲ್ಕಿ, ಕಾರ್ಯದರ್ಶಿ ವಿಟಲ ಪೂಜಾರಿ, ದ.ಕ. ಜಿಲ್ಲೆಯ ಎಂ.ಸಿ. ನಾರಾಯಣ, ಉ.ಕ. ಜಿಲ್ಲೆಯ ರವಿ ನಾಯಕ್‌, ಆಹಾರ ನಿಗಮ ಉಪಾಧ್ಯಕ್ಷ ಕಿರಣ್‌ ಕುಮಾರ್‌ ಕೊಡ್ಗಿ, ಜಿಲ್ಲಾ ಪ್ರಮುಖ್‌ ರಾಜೇಶ ಕಾವೇರಿ, ರಾಜೇಂದ್ರ ನಾಯಕ್‌, ಜಿಲ್ಲಾ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

ಇದನ್ನೂ ಓದಿ:ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಫಣಿಯೂರು ಸ್ವಾಗತಿಸಿದರು. ಸತೀಶ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು. ಅರುಣ್‌ ಕುಮಾರ್‌ ಬಾಣ ವಂದಿಸಿದರು.

ರಾಜ್ಯ ಪ್ರಮುಖರ ಸಭೆ
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್‌ ಸುವರ್ಣ ಮಾತನಾಡಿ, ಸಮುದಾಯ ಇನ್ನಷ್ಟು ಬಲಿಷ್ಠವಾಗಬೇಕು. ಅವರಲ್ಲಿ ಶಕ್ತಿ ತುಂಬಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ರಾಜ್ಯ ಪ್ರಮುಖರ ಬೃಹತ್‌ ಸಭೆ ಕರೆಯಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next