Advertisement

BJP; ನಡ್ಡಾ, ನಿರ್ಮಲಾ ವಿರುದ್ಧ ಕೇಸ್‌: ಕೋರ್ಟ್‌ ಆದೇಶ, ವಿಜಯೇಂದ್ರ, ನಳಿನ್‌ಗೂ ಸಂಕಷ್ಟ

01:28 AM Sep 28, 2024 | Vishnudas Patil |

ಬೆಂಗಳೂರು: ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಮಾಡಿ­ದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾ­ರಾಮನ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾ­ಲಯ ಆದೇಶಿಸಿದೆ.

Advertisement

ಚುನಾವಣಾ ಬಾಂಡ್‌ ಮೂಲಕ ಇವರು ಸುಮಾರು 8000 ಕೋಟಿ ರೂ ಸುಲಿಗೆ ಮಾಡಿದ್ದಾರೆಂದು ಅರ್ಜಿದಾರ, ಜನಾಧಿಕಾರ ಸಂಘರ್ಷ ಪರಿಷತ್‌ ಸಹ ಅಧ್ಯಕ್ಷ ಆದರ್ಶ್‌ ಆಯ್ಯರ್‌ ಕೋರ್ಟಿಗೆ ದೂರು ನೀಡಿ ದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕೇಂದ್ರ ಸಚಿವ ರಾದ ನಿರ್ಮಲಾ ಸೀತಾರಾಮನ್‌, ಜೆ.ಪಿ. ನಡ್ಡಾ, ದಿಲ್ಲಿಯ ಇಡಿ ಅಧಿಕಾರಿಗಳು, ಆಗಿನ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ಕಟೀಲು, ಆಗಿನ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಭಾರತೀಯ ಜನತಾ ಪಾರ್ಟಿಯ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವರದಿ ನೀಡುವಂತೆ ತಿಲಕನಗರ ಠಾಣೆ ಪೊಲೀಸರಿಗೆ ಕೋರ್ಟ್‌ ಆದೇಶಿಸಿದೆ.

ವಿವಿಧ ಕಾರ್ಪೊರೆಟ್‌ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳನ್ನು ಬೆದರಿಸಿ ಚುನಾವಣ ಬಾಂಡ್‌ಗಳನ್ನು ಪಡೆ ಯುವ ಮೂಲಕ 8000 ಕೋಟಿ ರೂ.ಸುಲಿಗೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರ ಲಾಗಿತ್ತು. ಹಣಕಾಸು ಸಚಿವರಾಗಿದ್ದ ನಿರ್ಮಲಾ ತಮ್ಮ ಸಾಂವಿಧಾನಿಕ ಹುದ್ದೆಯನ್ನು ಬಳಸಿ ಇ.ಡಿ. ಅಧಿಕಾರಿಗಳು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಮಟ್ಟದಲ್ಲಿ ಆಗಿನ ರಾಜ್ಯ ನಳಿನ್‌ ಕುಮಾರ್‌ ಕಟೀಲು ಮೂಲಕ ಹಣ ಸಂಗ್ರಹಿಸಿದ್ದಾರೆ. ಬಾಂಡ್‌ಗೆ ಹಣ ನೀಡದ ಕಂಪೆನಿಗಳ ವಿರುದ್ಧ ಇಡಿ ಮೂಲಕ ದಾಳಿ ನಡೆಸಲು ಸಚಿವರು ಪ್ರಚೋದಿಸಿದ್ದಾರೆ. ಇ.ಡಿ. ದಾಳಿಗೆ ಹೆದರಿ ಹಲವು ಕಾರ್ಪೊರೆಟ್‌ ಕಂಪೆನಿಗಳು ಕೋಟ್ಯಂತರ ಮೌಲ್ಯದ ಬಾಂಡ್‌ಗಳನ್ನು ಖರೀದಿಸಬೇಕಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ.

ಎಪ್ರಿಲ್‌ 2019, ಆಗಸ್ಟ್‌ 2022 ಹಾಗೂ 2023ರ ನವೆಂಬರ್‌ ಅವಧಿಯಲ್ಲಿ ವೇದಾಂತ ಮತ್ತು ಸ್ಟರಲೈಟ್‌ ಕಂಪನಿಗೆ ಬೆದರಿಕೆ ಹಾಕಿ ಸುಮಾರು 230 ಕೋಟಿ ರೂ ಬಾಂಡ್‌ ಖರೀದಿ ಮಾಡುವಂತೆ ಮಾಡಿದ್ದಾರೆ. ಹಾಗೆಯೇ ಅರಬಿಂದೋ ಫಾರ್ಮ ಕಂಪೆನಿಗೆ ಇಡಿ ಮೂಲಕ ದಾಳಿ ನಡೆಸಿ 49.5 ಕೋಟಿ ರೂಗಳನ್ನು ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ದೂರಿದ್ದಾರೆ.

ಈ ಕುರಿತು 2024ರ ಮಾರ್ಚ್‌ನಲ್ಲಿ ತಿಲಕನಗರ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಏಪ್ರಿಲ್‌ ತಿಂಗಳಲ್ಲಿ ಡಿಸಿಪಿಗೆ ದೂರು ನೀಡಿದ್ದರೂ ಪ್ರÁvೂàಜನವಾಗಿಲ್ಲ ಎಂದು ತಮ್ಮ ದೂರಿನಲ್ಲಿ ಅರ್ಜಿದಾರರು ಹೇಳಿದ್ದಾರೆ.

Advertisement

ಈ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ, ದೂರನ್ನು ತಿಲಕ್‌ನಗರ ಪೊಲೀಸರಿಗೆ ಕಳುಹಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಿದೆಯಲ್ಲದೆ, ವಿಚಾರಣೆಯನ್ನು ಅ.10ಕ್ಕೆ ಮುಂದೂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next