Advertisement

ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲಾಗಿಲ್ಲ

12:45 PM Oct 22, 2020 | Suhan S |

ಕಾರವಾರ: ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. ಎನ್‌ಪಿಎಸ್‌ ರದ್ದತಿ ಹಾಗೂ ಮೊದಲಿನ ಹಾಗೆ ಪಿಂಚಣಿ ಸೌಲಭ್ಯ ನೀಡಿ ಎನ್ನುವುದು ಶಿಕ್ಷಕರ ಪ್ರಮುಖ ಬೇಡಿಕೆಯಾಗಿತ್ತು. ಇದರ ಪರ ಹೋರಾಟ ಮುಂದುವರಿಸುವೆ.

Advertisement

ನಿವೃತ್ತಿ ನಂತರ ಮೊದಲಿನ ಹಾಗೆ ಪಿಂಚಣಿ ಕೊಡುವ ಬೇಡಿಕೆ ಈಡೇರಿಸಲಾಗಲಿಲ್ಲ. ಆದರೆ ಸದನದಲ್ಲಿ ಪ್ರಶ್ನೆ ಕೇಳಿದ್ದೇನೆ ಎಂದು ಪಶ್ಚಿಮಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ವಿ. ಸಂಕನೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನನಗೆ ಒಂದು ಅಧಿವೇಶನದಲ್ಲಿ ಮಾತ್ರ ಭಾಗವಹಿಸಲುಅವಕಾಶ ಸಿಕ್ಕಿತ್ತು. ನಂತರ ನನ್ನ ಅಧಿಕಾರದ ಅವಧಿ ಮುಗಿದಿತ್ತು. ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗೂ ಅದಕ್ಕೆ ಸದನದಲ್ಲಿ ಕೇಳಿದ ಪ್ರಶ್ನೆ, ಉತ್ತರಗಳ ಪುಸ್ತಕ ಸಹ ತಂದಿರುವೆ ಎಂದರು.

ಈಗ ಮತ್ತೆ ಚುನಾವಣೆಗೆ ನಿಂತಿದ್ದು, ಪದವೀಧರರಾಗಿರುವ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಮತದಾರರಾಗಿದ್ದಾರೆ. ಅವರ ಬೆಂಬಲದ ಜೊತೆ ನಿರುದ್ಯೋಗಿ ಪದವೀಧರರ ಬೆಂಬಲ ಸಿಗಲಿದೆ ಎಂಬ ಆಶಾಭಾವನೆ ಇದೆ ಎಂದರು.ಸ್ವಯಂ ಉದ್ಯೋಗಕ್ಕೆ ಕೇಂದ್ರ ಸರ್ಕಾರದ ಯೋಜನೆಗಳಿವೆ. ಅಲ್ಲದೇ ಗುತ್ತಿಗೆ ಆಧಾರದ ಉಪನ್ಯಾಸಕರಿಗೆ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಅನುದಾನ ಸಹಿತ ಶಾಲಾ ಕಾಲೇಜುಗಳಲ್ಲಿ ನಿಧನ ಹೊಂದಿದ ಹಾಗೂ ನಿವೃತ್ತಿಯಾದ ಹುದ್ದೆಗಳನ್ನು ತುಂಬಲು ಸರ್ಕಾರದಿಂದ ಅನುಮತಿ ಕೊಡಿಸಿದ್ದೇನೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.90 ಲಕ್ಷ ಹುದ್ದೆ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿದರೆ ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ನಿಲ್ಲಲಿದೆ ಎಂದರು.

ಸರ್ಕಾರದಲ್ಲಿ ಆರ್ಥಿಕ ಸಂಕಷ್ಟದ ಕಾರಣ ಅನೇಕ ಸಮಸ್ಯೆಗಳು ಹಾಗೇ ಇವೆ. ಮತ್ತೆ ನಾನು ಆಯ್ಕೆಯಾದರೆ ಎನ್‌ಪಿಎಸ್‌ ರದ್ದತಿಸೇರಿದಂತೆ, ನಿರುದ್ಯೋಗಿ ಪದವೀಧರರಿಗೆ ಸ್ಪಂದಿಸುವೆ ಎಂದು ಸಂಕನೂರು ಹೇಳಿದರು.

Advertisement

ಬಿಜೆಪಿಗಾಗಿ ಕೆಲಸ ಮಾಡಿರುವೆ: ಚುನಾವಣೆ ಬಂದಾಗ ಬಿಜೆಪಿ ನಾಯಕರು ಬೇಕು. ಗೆದ್ದ ನಂತರಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಕನೂರು ಗದಗ ಜಿಲ್ಲೆಯ ಜವಾಬ್ದಾರಿಯನ್ನು ಪಕ್ಷ ವಹಿಸಿತ್ತು. ಅಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಿ ನಾಲ್ವರು ಬಿಜೆಪಿ ಶಾಸಕರನ್ನು ಆರಿಸಿ ತರಲಾಯಿತು. ಜಿಲ್ಲೆಯ ಹೊರಗೆ ಒಂದು ವಿಧಾನಸಭಾ ಕ್ಷೇತ್ರದ ಚುನಾವಣಾ ಜವಾಬ್ದಾರಿ ಪಕ್ಷ ನೀಡಿತ್ತು. ಅದನ್ನು ಸಹ ಮಾಡಿರುವೆ ಎಂದು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್‌, ಗಣಪತಿ ಉಳ್ವೆàಕರ್‌, ಮಾಧ್ಯಮ ವಕ್ತಾರ ನಾಗರಾಜ ನಾಯ್ಕ, ರಾಜೇಶ್‌ ನಾಯ್ಕ ಸಿದ್ಧರ, ಕಿಶನ್‌ ಕಾಂಬಳೆ ಮುಂತಾದವರು ಇದ್ದರು.

ಕಾಲೇಜುಗಳಲ್ಲಿ ಸಂಕನೂರು ಮತಯಾಚನೆ

ಹೊನ್ನಾವರ: ವಿಧಾನ ಪರಿಷತ್ತಿಗೆ ಅ.28 ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ವಿ. ಸಂಕನೂರು ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಮೋಹನ ಶೆಟ್ಟಿ ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಸ್‌ಡಿಎಂ ಪಪೂ ಹಾಗೂ ಪದವಿ ಮಹಾವಿದ್ಯಾಲಯಕ್ಕೆ ತೆರಳಿ ಮತ ನೀಡುವಂತೆ ಪ್ರಚಾರ ನಡೆಸಿದರು.ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಆಡಳಿತ ನಡೆಸುತ್ತಿರುವುದರಿಂದ ಈ ಬಾರಿ ಪದವೀಧರ ಕ್ಷೇತ್ರದ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದ್ದು, ಪುನಃ 6 ವರ್ಷ ಆಯ್ಕೆ ಮಾಡಬೇಕೆಂದು ಕೇಳಿಕೊಂಡರು.

ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಮುಖಂಡರಾದ ಎಂ.ಜಿ.ನಾಯ್ಕ, ಲೋಕೇಶಮೇಸ್ತ, ಎಂ.ಎಸ್‌. ಹೆಗಡೆ ಕಣ್ಣಿ, ಪ್ರದೀಪ ಮೇಸ್ತ, ಸುರೇಶ ಖಾರ್ವಿ, ದತ್ತಾತ್ರೇಯ ಮೇಸ್ತ, ವಿಜಯ ಕಾಮತ್‌, ಸುರೇಶ ಹರಿಕಂತ್ರ, ಉಲ್ಲಾಸ ನಾಯ್ಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next