Advertisement

ನರಕ ಯಾತನೆಗೆ ಸುಪ್ರೀಂ ಮುಕ್ತಿ

12:08 PM Oct 14, 2020 | Suhan S |

ಬೆಂಗಳೂರು: ನಕಲಿ ಮತದಾರರ ಗುರುತಿನ ಚೀಟಿ ಹೆಸರಿನಲ್ಲಿ ಎರಡು ವರ್ಷಗಳಿಂದ ಕೇಳಿಬಂದಿದ್ದಆರೋಪಗಳಿಂದ ನೊಂದಿದ್ದ ನನಗೆ ಸುಪ್ರೀಂಕೋರ್ಟ್‌ ತೀರ್ಪು ಮುಕ್ತಿ ನೀಡಿದೆ. ಕ್ಷೇತ್ರದ ಜನರ ಋಣದಲ್ಲಿದ್ದು, ಅವರ ಋಣ ತೀರಿಸಬೇಕಿದೆ. ಅಭಿವೃದ್ಧಿ ಮಂತ್ರದೊಂದಿಗೆ ಮತ ಯಾಚಿಸುತ್ತೇನೆ. – ಇದು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾತು.

Advertisement

­ಸುಪ್ರೀಂ ತೀರ್ಪಿನ ಬಗ್ಗೆಏನುಹೇಳುವಿರಿ? :

“ನಕಲಿ ಮತದಾರರ ಗುರುತಿನ ಚೀಟಿ ಪತ್ತೆ, ನನಗೆ ಆ 25,000 ಮತಗಳು ಬರಬೇಕಿತ್ತು, ಅನ್ಯಾಯವಾಗಿದೆ,’ ಎಂಬ ಆರೋಪಗಳಿಂದ ಕಳೆದ ಎರಡು ವರ್ಷ ನರಕ ಯಾತನೆ ಅನುಭವಿಸಿದ್ದೇನೆ. ಆರಂಭದಲ್ಲಿ ಹೈಕೋರ್ಟ್‌ ನ್ಯಾಯ ಒದಗಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ನನ್ನ ನೋವಿಗೆ ಮುಕ್ತಿ ನೀಡಿದ್ದು, ನನ್ನ ಜೀವನದಲ್ಲಿ ದೊಡ್ಡ ಸಂತೋಷ ನೀಡಿದೆ.

­ಕಾಂಗ್ರೆಸ್‌ ಅಭ್ಯರ್ಥಿ ನಿಮಗೆ ಪ್ರತಿಸ್ಪರ್ಧಿಯೇ ? :  ಕಾಂಗ್ರೆಸ್‌ನಿಂದ ಹೆಣ್ಣು ಮಗಳು ಸ್ಪರ್ಧಿಸಿದ್ದಾರೆ. ಪಾಪ ಅವರ ಬಗ್ಗೆ ನಾನು ಏನೂ ಮಾತಾಡುವುದಿಲ್ಲ. ಈವರೆಗೆ ಪಂಚಾಯ್ತಿಗೂ ಸ್ಪರ್ಧಿಸದ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ, ನಾನು ಬಿಜೆಪಿಯಿಂದ ಸ್ಪರ್ಧಿಸಿದ್ದು,ಅವರ ಬಗ್ಗೆ ಏನೂ ಮಾತನಾಡುವುದಿಲ್ಲ.

­ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ಹಾಗೂ ಮುನಿರತ್ನ ನಡುವಿನ ಚುನಾವಣೆ ಅಂತಾರಲ್ಲಾ? :

Advertisement

ಚುನಾವಣೆ ಎಂದ ಮೇಲೆ ಪ್ರತಿಷ್ಠೆಯ ಪ್ರಶ್ನೆ ಇಲ್ಲ. ಕ್ಷೇತ್ರದ ಜನ ಯಾವ ತೀರ್ಮಾನ ನೀಡುತ್ತಾರೋ ಅದೇ ಅಂತಿಮ. ಅದಕ್ಕೆ ಎಲ್ಲರೂ ತಲೆಬಾಗಬೇಕು.  ಟಿಕೆಟ್‌ಆಕಾಂಕ್ಷಿಯಾಗಿದ್ದ ಮುನಿರಾಜುಗೌಡ ಅವರು ನಿಮ್ಮ ಪರ ಪ್ರಚಾರ ನಡೆಸುವರೇ? ಮುನಿರಾಜುಗೌಡಅವರಿಗೆಕರೆ ಮಾಡಿ ಮಾತನಾಡಿ ದ್ದ, ಅವರು ಅಭಿನಂದನೆ ಸಲ್ಲಿಸಿದ್ದಾರೆ. ಬುಧವಾರ ನಾಮಪತ್ರ ಸಲ್ಲಿಸುತ್ತಿದ್ದು, ಜೊತೆಗೆ ಬರುವಂತೆ ಆಹ್ವಾನ ನೀಡಿದ್ದೇನೆ. ಬುಧವಾರ ಅವರು ನನ್ನ ಜತೆ ಖಂಡಿತ ಬರಲಿದ್ದು, ನಾಮಪತ್ರ ಸಲ್ಲಿಸುತ್ತೇನೆ. ಹಿರಿಯ ರಾದ ಅವರಿಗೂ ಒಳ್ಳೆಯದಾಗಬೇಕೆಂಬುದೇ ನನ್ನ ಆಶಯ.

­ಕ್ಷೇತ್ರದಲ್ಲಿ ನಿಮಗೆ ಎದುರಾಳಿ ಯಾರು ? :

ಕ್ಷೇತ್ರದಲ್ಲಿಹಿಂದಿನಿಂದಲೂ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ‌ ಇರುತ್ತಿತ್ತು. ನಾನು ಎರಡು ಬಾರಿ ಶಾಸಕನಾಗಿದ್ದೆ. ಹಿಂದೆ ಸಚಿವ ಆರ್‌. ಅಶೋಕ್‌ ಅವರು ಮೂರು ಬಾರಿ, ಎಂ. ಶ್ರೀನಿವಾಸ್‌ ಅವರು ಒಂದು ಬಾರಿ ಗೆದ್ದಿದ್ದರು. ಕ್ಷೇತ್ರದ ಜನ ಅಭಿವೃದ್ಧಿಗೆ ಮತ ನೀಡುತ್ತಾರೆಯೇ ಹೊರತು ಬೇರೆ ಯಾವುದಕ್ಕೂ ಮರುಳಾಗುವ ಪ್ರಶ್ನೆಯೇ ಇಲ್ಲ.

 ಗೆದ್ದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೀರಾ? :

ಮುಖ್ಯಮಂತ್ರಿಗಳು, ವರಿಷ್ಠರು ಈ ಬಗ್ಗೆ ತೀರ್ಮಾನಿಸಲಿದ್ದು, ನಾನು ಈಗ ಏನೂ ಹೇಳುವುದಿಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಹಿಂದಿನ ಸರ್ಕಾರ, ಮುಖ್ಯಮಂತ್ರಿಗಳಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಯಾವ ಚಿಂತನೆ ನಡೆಸಿದ್ದೆನೋ ಅದನ್ನೇ ಮುಂದುವರಿಸುತ್ತೇನೆ. ಅದನ್ನು ಬಿಟ್ಟು ಬೇರೆ ಏನೂ ವ್ಯತ್ಯಾಸ ಇರುವುದಿಲ್ಲ.

­ಪಕ್ಷ ಬದಲಾವಣೆಯಿಂದ ಹಿಂದೆ ಬೆಂಬಲಿಸಿದ್ದ ಎಲ್ಲ ವರ್ಗದವರು ಮತ್ತೆ ಬೆಂಬಲಿಸುವ ವಿಶ್ವಾಸವಿದೆಯೇ? :  ನಾನು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇನೆ, ಒಳ್ಳೆಯ ಶಾಸಕ ಎಂಬ ನಂಬಿಕೆಯಿಂದ ಕ್ಷೇತ್ರದ ಜನ ನನ್ನನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಇಂದಿಗೂ ಅದೇ ಅಭಿಮಾನವಿದ್ದು ಮುಂದೆಯೂ ನನ್ನ ಕೈ ಹಿಡಿಯುವ ವಿಶ್ವಾಸವಿದೆ.

 

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next