Advertisement

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ನಾಳೆಯಂತೆ

12:23 AM Apr 11, 2023 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ 8 ಹಾಗೂ ಉಡುಪಿ ಜಿಲ್ಲೆಯ 5 ಕ್ಷೇತ್ರಗಳಿಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಸೋಮವಾರವೂ ಬಿಡುಗಡೆಯಾಗಲಿಲ್ಲ. ಮಂಗಳವಾರ ತಡರಾತ್ರಿ ಅಥವಾ ಬುಧವಾರ ಪ್ರಕಟವಾಗುವ ನಿರೀಕ್ಷೆಯಿದೆ.

Advertisement

ಉಭಯ ಜಿಲ್ಲೆಗಳಲ್ಲೂ ಕೆಲವು ಹಾಲಿ ಶಾಸಕರಿಗೆ ಅವಕಾಶ ಸಿಗದು ಹಾಗೂ ಹೊಸ ಮುಖಗಳ ಪ್ರಯೋಗ ನಡೆಯಲಿದೆ ಎಂಬ ಅಂಶ ಬಹಳ ಚಾಲ್ತಿಯಲ್ಲಿರುವ ಕಾರಣ ಕುತೂಹಲ ಹೆಚ್ಚಾಗಿದೆ. ಎ.13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇಷ್ಟಾ ದರೂ ಇನ್ನೂ ಅಭ್ಯರ್ಥಿಗಳ ಘೋಷಣೆಯೇ ಆಗದಿರುವುದು ಕಾರ್ಯ ಕರ್ತರ ಪಾಳಯ ದಲ್ಲೂ ಕಳವಳಕ್ಕೆ ಕಾರಣವಾಗಿದೆ.

ಬೆಳಗ್ಗೆ 10 ಗಂಟೆಗೆ ಬರಬಹುದು, ಮಧ್ಯಾಹ್ನ, ಸಂಜೆ ಎಂಬ ಬಹುತೇಕರ ನಿರೀಕ್ಷೆ ಸುಳ್ಳಾಯಿತು. ಇದಕ್ಕೆ ಪೂರಕವಾಗಿ ದಿಲ್ಲಿಯಲ್ಲಿ ಬಿಜೆಪಿ ವರಿಷ್ಠರು ರಾಜ್ಯ ಮುಖಂಡರೊಂದಿಗೆ ಸತತ ಸಭೆಗಳನ್ನು ನಡೆಸಿದರು. ಆದರೂ ಸೋಮವಾರ ತಡರಾತ್ರಿಯವರೆಗೂ ಪಟ್ಟಿ ಹೊರ ಬೀಳಲೇ ಇಲ್ಲ.

ಬೆಳಗ್ಗೆ ಹುರುಪಿತ್ತು !
ಮಂಗಳೂರಿನಲ್ಲಿ ಬೆಳಗ್ಗೆ ಮಂಗಳೂರು ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ವೇಳೆ ಸಂಜೆ ವೇಳೆಗೆ ಟಿಕೆಟ್‌ ಘೋಷಣೆಯಾಗಿರುತ್ತದೆ ಎಂಬ ಹುರುಪಿತ್ತು. ಆದರೆ ನಾಳೆ ಬಿಡುಗಡೆಯ ಸಾಧ್ಯತೆ ಎಂಬ ವರದಿ ಬಂದ ಮೇಲೆ ಉತ್ಸಾಹ ಕುಸಿಯಿತು.

ದಕ್ಷಿಣ ಕನ್ನಡ ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲೆಯೇ ಆಗಿರುವುದು ಒಂದು ಅಂಶವಾದರೆ ಆಂತರಿಕ ಸಮೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಇರುವುದು ಇನ್ನೊಂದು ಅಂಶ.
ಇವೆರಡನ್ನೂ ಅಳೆದು ತೂಗಿ ಯಾವುದೇ ರೀತಿಯಲ್ಲೂ ಹಿನ್ನಡೆಯಾಗಬಾರದೆಂಬ ಲೆಕ್ಕಾಚಾರವೂ ಇದೆ.

Advertisement

ಕಾಂಗ್ರೆಸ್‌ನ ಮತ್ತೂಂದು ಪಟ್ಟಿಯೂ ಇಲ್ಲ
ಕಾಂಗ್ರೆಸ್‌ ನಿರಾಯಾಸವಾಗಿ ಮೊದಲ ಪಟ್ಟಿಯಲ್ಲಿ ಜಿಲ್ಲೆಯ 5 ಅಭ್ಯರ್ಥಿ ಗಳ ಹೆಸರನ್ನು ಘೋಷಿಸಿದ್ದರೆ, ಉಳಿದ ಮೂವರ ಹೆಸರು ಪ್ರಕಟಣೆಗೆ ವಿಳಂಬ ಮಾಡುತ್ತಿದೆ. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಹಾಗೂ ಪುತ್ತೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಬೇಕಿದೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next