ನರಗುಂದ: ಬಾಗಲಕೋಟೆ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರವಾಗಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು.
ಪಟ್ಟಣದ 11 ಮತ್ತು 12ನೇ ವಾರ್ಡ್ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿದ ಕಾರ್ಯಕರ್ತರು ಮತದಾರರಿಗೆ ಕರಪತ್ರ
ವಿತರಿಸಿ ಮತಯಾಚಿಸಿದರು.
ಬಿಜೆಪಿ ಮುಖಂಡ ಬಸು ಪಾಟೀಲ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನ
ಸೇವಕರನ್ನಾಗಿ ಆಯ್ಕೆಗೊಳಿಸುವ ಮೂಲಕ ಮತದಾರರು ಬೆಂಬಲಿಸಬೇಕು ಎಂದರು. ಈ ಸಂದರ್ಭದಲ್ಲಿ ಸಿದ್ದೇಶ ಹೂಗಾರ, ಶರಣಪ್ಪ ನವಲಗುಂದ, ಸುರೇಶ ಪೂಜಾರ, ಎಫ್.ಸಿ.ಹೂಗಾರ, ಬಸವರಾಜ ಘಾಟಗೆ, ಶರಣಪ್ಪ ಬೋವಿ, ಚನ್ನಬಸಪ್ಪ ಪೂಜಾರ, ಶರಣಪ್ಪ ತಳವಾರ, ಮಾರುತಿ ಕೊಳ್ಳೂರ, ಬಸಪ್ಪ ಚಿಕ್ಕನರಗುಂದ, ಹನುಮಂತ ಬೋವಿ, ಬಸು ಕಳಸದ, ಸಿದ್ದಪ್ಪ ಆಯಟ್ಟಿ ಮುಂತಾದವರಿದ್ದರು.