Advertisement
ಕಳೆದ ಕೆಲವು ತಿಂಗಳಿನಿಂದ ರೇಚಕ ಸ್ಥಾವರದ ದುಃಸ್ಥಿತಿ ವಿರುದ್ಧ ಪಾಲಿಕೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ನಾಲ್ಕು ತಿಂಗಳ ಹಿಂದೆ ಪಾಲಿಕೆ ಸಭೆಯಲ್ಲಿ ಇಲ್ಲಿನ ತುಕ್ಕು ಹಿಡಿದ ಪೈಪಿನ ಪ್ರದರ್ಶನ ಮಾಡಿ ಮೇಯರ್ ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದೆ. ಬಳಿಕ ಮೇಯರ್ ಮತ್ತು ಅಧಿಕಾರಿಗಳು ವೀಕ್ಷಿಸಿದರೂ ಫಲಿತಾಂಶ ಶೂನ್ಯ. ನ.28ರ ಸಭೆಯಲ್ಲೂ ಒಳಚರಂಡಿ ಸಮಸ್ಯೆ, ಪಂಪ್ ಹಾಳಾದಕುರಿತು ಗಮನ ಸೆಳೆದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಬಾವಿ ನೀರು ಮಲಿನಗೊಂಡಿದ್ದು, ಇದಕ್ಕೆ ಅಧಿಕಾರಿಗಳು ನೇರ ಜವಾಬ್ದಾರರು ಎಂದರು.
ಮಂಗಳೂರು ಉತ್ತರ ಬಿಜೆಪಿ ಮಂಡಲ ಅಧ್ಯಕ್ಷ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಕಾಂಗ್ರೆಸ್ ಸಾರ್ವಜನಿಕರ ಆರೋಗ್ಯದ ಬಗ್ಗೆ ಗಂಭೀರವಾಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಇದೇ ಒಳಚರಂಡಿ ವ್ಯವಸ್ಥೆ ಶಾಸಕರ ಮನೆ ಬಳಿ ಆಗಿದ್ದರೆ ತತ್‌ಕ್ಷಣ ದುರಸ್ತಿ ಮಾಡಲಾಗುತ್ತಿತ್ತು. ಇಲ್ಲಿನ ರೇಚಕ ಸ್ಥಾವರದ ಸ್ಥಿತಿ ಕುರಿತು ಪಾಲಿಕೆ ಆಡಳಿತಕ್ಕೆ ತಿಳಿಸಿದ್ದರೂ ದುರಸ್ತಿ ಆಗಿಲ್ಲ. ವೆಟ್‌ವೆಲ್ ಕೆಲಸ ಮಾಡದಿದ್ದರೆ ನೇರವಾಗಿ ತೋಡಿನ ಮೂಲಕ ಹರಿದು ಪರಿಸರ ಮಾಲಿನ್ಯಕ್ಕೆ ಪಾಲಿಕೆ ಆಡಳಿತ ನೇರ ಕಾರಣವಾದೀತು ಎಂದರು. ರಜನಿ ದುಗ್ಗಣ್ಣ, ಪ್ರೇಮಾನಂದ ಶೆಟ್ಟಿ, ವಿಟ್ಠಲ ಸಾಲ್ಯಾನ್, ರೂಪಾ ಡಿ.ಬಂಗೇರ, ರಾಜೇಂದ್ರ, ಗುಣಶೇಖರ ಶೆಟ್ಟಿ, ಸುಮಿತ್ರಾ ಕರಿಯ, ರಘುವೀರ್ ಪಣಂಬೂರು, ರಣ್‌ದೀಪ್ ಕಾಂಚನ್, ಮಧುಕಿರಣ್, ಅಶೋಕ್ ಕೃಷ್ಣಾಪುರ, ವರುಣ್ ಚೌಟ, ವಸಂತ್, ಜಯರಾಮ್ ಉಪಸ್ಥಿತರಿದ್ದರು.
Related Articles
ಕೇವಲ ಹೊಸಬೆಟ್ಟು ರೇಚಕ ಸ್ಥಾವರದ ಪಂಪ್ ಜತೆಗೆ ಶಾರ್ಟ್ ಸರ್ಕ್ನೂಟ್ ಮೂಲಕ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಲಕ್ಷಾಂತರ ರೂಪಾಯಿ ಬೇಕಾಗಿದೆ. ಜತೆಗೆ ಕುಳಾಯಿ, ಹೊಸಬೆಟ್ಟು ರೇಚಕ ಸ್ಥಾವರಗಳ ಪಂಪ್‌ಗ್ಳೂ ಕೆಟ್ಟು ನಿಂತಿದ್ದು, ಒಳಚರಂಡಿ ಸಂಸ್ಕರಣ ಘಟಕಕ್ಕೆ ತಲುಪದೆ ಮಧ್ಯೆಯೇ ಮಳೆ ನೀರು ಹರಿಯುವ ತೋಡು ಪಾಲಾಗಿ ಬಾವಿ ನೀರು ಕಲುಷಿತವಾಗುತ್ತಿದೆ. ಇದು ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಕೇವಲ ಎರಡು ವರ್ಷಗಳ ಹಿಂದೆ ಈ ರೇಚಕ ಸ್ಥಾವರ ನಿರ್ಮಾಣವಾಗಿದ್ದು, ಈಗ ಕೆಟ್ಟು ಹೋಗಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
– ಗಣೇಶ್ ಹೊಸಬೆಟ್ಟು, ಮಹಾನಗರ ಪಾಲಿಕೆಯ ವಿಪಕ್ಷ ನಾಯಕ
Advertisement