Advertisement

ಸಿಲಿಗುರಿ ಬಿಜೆಪಿ ಬೂತ್ ಕಚೇರಿ; ನೇಣಿನಲ್ಲಿ ವ್ಯಕ್ತಿಯ ಶವ ಪತ್ತೆ, ಆತಂಕ ಸೃಷ್ಟಿ!

09:22 AM Apr 05, 2019 | Sathish malya |

ಸಿಲಿಗುರಿ : ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿನ ಭಾರತೀಯ ಜನತಾ ಪಕ್ಷದ ಬೂತ್‌ ಆಫೀಸಿನಲ್ಲಿ ಇಂದು ಗುರುವಾರ ಬೆಳಗ್ಗೆ 42 ವರ್ಷದ ವ್ಯಕ್ತಿಯೊಬ್ಬರ ಶವ ನೇತಾಡುತ್ತಿದ್ದುದು ಕಂಡು ಬಂದಿದ್ದು ಇದರಿಂದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ತೋರಿ ಬಂದಿದೆ.

Advertisement

ಮುನಿಸಿಪಲ್‌ ಕಾರ್ಪೊರೇಶನ್‌ನ ವಾರ್ಡ್‌ ನಂಬ್ರ 36ರಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಿತ್ಯಾ ಮಂಡಲ್‌ ಎಂದು ಗುರುತಿಸಲಾಗಿದೆ. ಈತನ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ.

ಇಂದು ಬೆಳಗ್ಗೆ ಬಿಜೆಪಿ ಬೂತ್‌ ಆಫೀಸ್‌ ಮಾರ್ಗವಾಗಿ ವಾಕಿಂಗ್‌ ಹೋದ ಸ್ಥಳೀಯರು ವ್ಯಕ್ತಿಯ ಶವ ನೇತಾಡುತ್ತಿದ್ದುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಗುರಿಯಲ್ಲಿ ಬೃಹತ್‌ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ತರುವಾಯ ಈ ಘಟನೆ ನಡೆದಿದೆ.

Advertisement

ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯಷ್ಮಾನ್‌ ಭಾರತ, ಪಿಎಂ ಕಿಸಾನ್‌ ಮತ್ತು ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯಿದೆಯಂತಹ ಕೇಂದ್ರದ ಹಲವಾರು ಪ್ರಮುಖ ಯೋಜನೆಗಳಿಗೆ ತಡೆ ಒಡ್ಡುವ ಮೂಲಕ ಅವರು ರಾಜ್ಯದ ಅಭಿವೃದ್ದಿಗೆ ಸ್ಪೀಡ್‌ ಬ್ರೇಕರ್‌ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಆಪಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಮಮತಾ ಅವರು ಪ್ರಧಾನಿ ಮೋದಿ ಎಕ್ಸ್‌ಪೈರಿ ಬಾಬು ಎಂದು ಕೂಚ್‌ ಬೆಹಾರ ರಾಲಿಯಲ್ಲಿ ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next