ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಶವ ಹೂತ ಸ್ಥಳದಲ್ಲಿ ಸಮಾಧಿ ಕಟ್ಟಿ ಅದಕ್ಕೆ ಮಾರ್ಬಲ್ ಹಾಕಿ, ಹೂ ಚೆಲ್ಲಿ, ದೀಪಾಲಂಕಾರ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ:ನರೇಂದ್ರ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ: ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ರಾಮ್ ಕದಮ್, ಯಾಕೂಬ್ ಮೆಮನ್ ಶವ ಹೂತ ಸ್ಥಳವನ್ನು ದೊಡ್ಡ ಸಮಾಧಿಯನ್ನಾಗಿ ಮಾಡಲಾಗಿದೆ. ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾಕೂಬ್ ಸಮಾಧಿಯನ್ನು ಸುಂದರಗೊಳಿಸುವ ಕೆಲಸ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಅಣತಿಯಂತೆ ಉಗ್ರ ಯಾಕೂಬ್ ಮೆಮನ್ 1993ರಲ್ಲಿ ಮುಂಬೈನಲ್ಲಿನ ಸರಣಿ ಬಾಂಬ್ ಸ್ಫೋಟದ ಕೃತ್ಯ ಎಸಗಿದ್ದ. ಭೀಬತ್ಸ ಕೃತ್ಯ ಎಸಗಿದ್ದ ಉಗ್ರನ ಶವದ ಸ್ಥಳವನ್ನು ಬೃಹತ್ ಸಮಾಧಿ ನಿರ್ಮಿಸಿ, ಮಾರ್ಬಲ್ ಹಾಕಿ, ದೀಪಾಲಂಕಾರ ಮಾಡಲಾಗಿತ್ತು. ಇದು ಉದ್ಧವ್ ಠಾಕ್ರೆಯ ಮುಂಬೈ ಮೇಲಿನ ಪ್ರೀತಿ, ಇದು ನಿಮ್ಮ ದೇಶಪ್ರೇಮನಾ? ಈ ಬಗ್ಗೆ ಶರದ್ ಪವಾರ್, ರಾಹುಲ್ ಗಾಂಧಿ ಮತ್ತು ಉದ್ಧವ್ ಮುಂಬೈ ಜನತೆಯ ಕ್ಷಮೆಯಾಚಿಸಬೇಕು ಎಂದು ಕದಮ್ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.