Advertisement

ಬಿಜೆಪಿ ಕಲೆ-ಸಾಂಸ್ಕೃತಿಕ ಪ್ರಕೋಷ್ಠಕ್ಕೆ ಚಾಲನೆ

05:12 PM Apr 13, 2017 | Harsha Rao |

ಮಡಿಕೇರಿ: ಕಲಾವಿದರುಗಳನ್ನು ರಾಜಕೀಯವಾಗಿ ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಮಹತ್ತರ ಕಾರ್ಯವನ್ನು ಬಿಜೆಪಿ ಪ್ರಕೋಷ್ಠ ಮಾಡುತ್ತಿದ್ದು, ಕಲಾವಿದರುಗಳಿಗೂ ರಾಜಕೀಯ ನೆಲೆ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ ತಿಳಿಸಿದ್ದಾರೆ.

Advertisement

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಿಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಭಾರತೀಯ ಜನತಾಪಕ್ಷ ಕಲಾವಿದರಿಗಾಗಿ ಪ್ರತ್ಯೇಕ ಪ್ರಕೋಷ್ಟವನ್ನು ರಚಿಸಿದೆ ಎಂದರು.

ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಯಲಿದೆ. ಕಾರ್ಯಕರ್ತರು ಜನಪರ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸುವ ಮೂಲಕ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕಾರ್ಯವಾಗಬೇಕು. ಜನಸೇವೆಗಾಗಿ ಹೆಚ್ಚು ಸಮಯ ಮೀಸಲಿಡಬೇಕು ಎಂದು ಹೇಳಿದರು. 

ಜಿಲ್ಲೆ ವಿವಿಧತೆಯಲ್ಲಿ ಏಕತೆ ಕಾಣುತ್ತಿದೆ, ಕೊಡಗಿನ ಪ್ರತಿಯೊಂದು  ಭಾಗದ  ಪ್ರತಿ ಜನಾಂಗದಲ್ಲಿ ಒಂದೊಂದು ಕಲೆ, ಸಂಸ್ಕೃತಿ ಅಡಗಿದೆ. ಆದ್ದರಿಂದ ಪ್ರಕೋಷ್ಠದಿಂದ ಪ್ರತಿಯೊಬ್ಬರಿಗೆ ಪ್ರಯೋಜನವಿದೆ ಎಂದು ಅಪ್ಪಚ್ಚುರಂಜನ್‌ ತಿಳಿಸಿದರು. 

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್‌ ಮಾತನಾಡಿ, ಕಾರ್ಯಕರ್ತರು ವಿವಿಧ ಪ್ರಕೋಷ್ಠ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಬಲ ವರ್ಧನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್‌ ಮಾತನಾಡಿ, ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಸಂಚಲನ  ಮೂಡಿಸುತ್ತಿರುವ ಪ್ರಧಾನಿ ಮೋದಿ ಅವರ ಜನಪರ ಕಾರ್ಯಕ್ರಮ ಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರಕ್ಕೆ ಮುಂದಾಗಬೇಕಿದೆ. ರಾಜ್ಯ ಸರಕಾರದ ಜನವಿರೋಧಿ ನೀತಿಗಳ ಕುರಿತು ರಾಜ್ಯದ ಜನತೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲೆಯ ಕಲಾವಿದರಾದ ವಿದ್ಯಾರ್ಥಿನಿ ಕುಮಾರಿ ಮೌನ, ಹಿರಿಯ ಕಲಾವಿದರುಗಳಾದ ರಾಣಿ ಮಾಚಯ್ಯ, ಕಿಗ್ಗಾಲು ಗಿರೀಶ್‌ ಹಾಗೂ  ಈ.ರಾಜು ಅವರನ್ನು ಪ್ರಕೋಷ್ಟದ ವತಿಯಿಂದ ಗಣ್ಯರು ಸಮ್ಮಾನಿಸಿದರು.
ಜಿಲ್ಲಾ ಸಂಚಾಲಕಿ ಭಾರತೀ ರಮೇಶ್‌, ವಿದ್ವಾನ್‌ ಬಿ.ಸಿ. ಶಂಕರಯ್ಯ, ಜಿಲ್ಲಾ ಪಂಚಾಯತ್‌ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ತಾಲ್ಲೂಕು ತೆಕ್ಕೆಡ ಶೋಭಾ ಮೋಹನ್‌, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಜೈನ್‌, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್‌.ರಮೇಶ್‌, ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ಸವಿತಾ ರಾಕೇಶ್‌,  ಪಕ್ಷದ ಪ್ರಮುಖರಾದ  ಸಹ ಸಂಚಾಲಕ ಮಿಟ್ಟು ಪೂಣಚ್ಚ, ರಾಜು, ಸಂತೋಷ್‌, ನಳಿನಿ ಗಣೇಶ್‌, ಕವಿತಾ ಬೆಳ್ಯಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next