Advertisement

BJP: ಪ್ರತಾಪ್‌ ಸಿಂಹ, ಪ್ರೀತಂಗೌಡ ನಡುವೆ ವಾಗ್ವಾದ

11:42 PM Feb 11, 2024 | Pranav MS |

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಕ್ಲಸ್ಟರ್‌ ಲೈನ್‌ ಅಪ್‌ ಮಾಡುವ ವಿಚಾರದಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನಡುವೆ ರವಿವಾಟರ ಮುಂಜಾನೆ ವಾಗ್ವಾದ ನಡೆದಿದೆ.

Advertisement

ಕ್ಲಸ್ಟರ್‌ಲೈನ್‌ ಅಪ್‌ ಪಟ್ಟಿ ಮಾಡುವಾಗ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಈ ವಿಚಾರದಲ್ಲಿ ಯಾರೊಂದಿಗೆ ಚರ್ಚಿಸದೆ ತಯಾರಿಸಿದ್ದು ಸರಿಯಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಅವರು ಪ್ರೀತಂ ಗೌಡರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈ ವೇಳೆ ಪಟ್ಟಿಯನ್ನು ಸರಿಯಾಗಿ ಮಾಡಲಾಗಿದೆ. ಯಾರನ್ನೂ ಕಡೆಗಣಿಸಿಲ್ಲ. ಎಲ್ಲರಿಗೂ ಅವಕಾಶ ಕೊಡಲಾಗಿದೆ. ಸ್ಥಳೀಯರು ಹಾಗೂ ಹೊರಗಿನವರು ಎಂಬದನ್ನು ನೋಡಿ ಪಟ್ಟಿ ಮಾಡಿಲ್ಲವೆಂದು ತಮ್ಮ ಕ್ರಮವನ್ನು ಪ್ರೀತಂ ಗೌಡ ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ವಾಗ್ವಾದ ನಡೆಯಲು ಶುರುವಾಗಿದೆ. ಇತರ ನಾಯಕರು ಇಬ್ಬರನ್ನೂ ಸಮಧಾನಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next