Advertisement

ಚುನಾವಣಾ ಕಣಕ್ಕೆ ಬಿಜೆಪಿ ಹುರಿಯಾಳುಗಳ ಘೋಷಣೆ

08:44 AM Nov 18, 2017 | Team Udayavani |

ಹೊಸದಿಲ್ಲಿ  /ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆ ಅಖಾಡ ಈಗಾಗಲೇ ರಂಗೇರಿದೆ. ಅದಕ್ಕೆ ಪೂರಕವೆಂಬಂತೆ ಆಡಳಿತ ಪಕ್ಷ ಬಿಜೆಪಿ ಶುಕ್ರವಾರ ಮುಖ್ಯಮಂತ್ರಿ ವಿಜಯ ರೂಪಾಣಿ ಸೇರಿದಂತೆ 70 ಮಂದಿ ಹುರಿಯಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಮುಖ್ಯಾಂಶವೆಂದರೆ ಕಾಂಗ್ರೆಸ್‌ನಿಂದ ಸಿಡಿದು ಪಕ್ಷಕ್ಕೆ ಸೇರ್ಪಡೆಯಾಗಿರುವ ಐವರು ಸೇರಿದಂತೆ 49 ಹಾಲಿ ಶಾಸಕರಿಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸಲಾಗಿದೆ. ಒಟ್ಟು 16 ಹೊಸಬರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಮೂವರು ಹಾಲಿ ಶಾಸಕರು ಟಿಕೆಟ್‌ ವಂಚಿತರಾದರೆ, ಒಬ್ಬರ ಕ್ಷೇತ್ರ ಬದಲಾವಣೆ ಮಾಡಲಾಗಿದೆ. 

Advertisement

ಸಿಎಂ ವಿಜಯ ರೂಪಾಣಿ ರಾಜ್‌ಕೋಟ್‌ ಪಶ್ಚಿಮ, ಡಿಸಿಎಂ ನಿತಿನ್‌ ಭಾಯ್‌ ಪಟೇಲ್‌ ಮೆಹಸಾನಾದಿಂದ, ಗುಜರಾತ್‌ ಬಿಜೆಪಿ ಅಧ್ಯಕ್ಷ ಜಿತು ಭಾಯಿ ವಘಾನಿ ಭಾವಾನಗರ ಪಶ್ಚಿಮ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಜಾತಿವಾರು ಲೆಕ್ಕ ನೋಡುವುದಾದರೆ 18 ಪಟೇಲ್‌, 16 ಒಬಿಸಿ, 3 ಎಸ್‌ಸಿ, 11 ಎಸ್‌ಟಿ ಸಮುದಾಯದವರಿಗೆ ಟಿಕೆಟ್‌ ನೀಡಲಾಗಿದೆ. 25 ಮಂದಿ ಸಚಿವರ ಪೈಕಿ ಮೊದಲ ಪಟ್ಟಿಯಲ್ಲಿ 15 ಮಂದಿಗೆ ಅದೃಷ್ಟ ಪರೀಕ್ಷೆಯ ಅವಕಾಶ ಸಿಕ್ಕಿದೆ. ಅಮ್ರೇಲಿ ಕ್ಷೇತ್ರದ ಮಾಜಿ ಸಂಸದ ದಿಲಿಪ್‌ಸಂಘನಾನಿಗೆ ಧರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ನಾಲ್ವರು ಮಹಿಳೆಯರೂ ಇದ್ದಾರೆ. 

ಕಾಂಗ್ರೆಸ್‌ನ ಐವರು ಭಿನ್ನಮತೀಯ ನಾಯಕರಾದ ರಾಘವ್‌ಜಿ ಪಟೇಲ್‌, ಧರ್ಮೇಂದ್ರ ಸಿನ್ಹ ಜಡೇಜ, ರಮೇಶ್‌ ಸಿನ್ಹ ಪರ್ಮಾರ್‌, ಮನೀಶ್‌ ಚೌಹಾಣ್‌ ಮತ್ತು ಸಿ.ಕೆ.ರಾಜೋಲಿ ಬಿಜೆಪಿ ಟಿಕೆಟ್‌ ಪಡೆದವರು. ಇತ್ತೀಚೆಗೆ ಮುಕ್ತಾಯವಾದ ರಾಜ್ಯಸಭೆ ಚುನಾವಣೆಯಲ್ಲಿ ಈ ನಾಯಕರು ಕಾಂಗ್ರೆಸ್‌ನ ವಿಪ್‌ ಉಲ್ಲಂ ಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮೊದಲ ಹಂತದ ಪಟ್ಟಿಗೆ ಅನುಮೋದನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next