Advertisement
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ರುದ್ರೇಶ್ ಕೊಲೆ ಪ್ರಕರಣದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡವಿದ್ದು, ರಾಜ್ಯ ಸರ್ಕಾರ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆ ಸಂಘಟನೆಗಳನ್ನು ನಿಷೇಧಿಸಲು ಹಿಂದೇಟು ಹಾಕುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ, ಆರ್‌ಎಸ್‌ಎಸ್, ಭಜರಂಗದಳದವರಲ್ಲೂ ಉಗ್ರಗಾಮಿಗಳಿದ್ದಾರೆ. ಯಾರೇ ಆಗಲಿ, ಉಗ್ರಗಾಮಿಗಳಾಗಿ ಕೆಲಸ ಮಾಡುತ್ತಿದ್ದರೆ, ಸಮಾಜದ ಸಾಮರಸ್ಯ ಕೆಡಿಸಲು ಯತ್ನಿಸುತ್ತಿದ್ದರೆ, ಅಂಥವರನ್ನು ಸರ್ಕಾರ ಸಹಿಸಲ್ಲ. ಅದು ಪಿಎಫ್ಐ, ಎಸ್‌ಡಿಪಿಐ ಅಥವಾ ಆರ್‌ಎಸ್‌ಎಸ್ ಯಾರೂ ಆಗಿರಬಹುದು. ಸಾಮರಸ್ಯ ಕದಡಿದರೆ ಕ್ರಮ ಕೈಗೊಳ್ಳುತ್ತೆàವೆ. ಆದರೆ, ಈಗ ಈ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದರು.
Related Articles
Advertisement
ನಾನು ಯಾವಾಗಲೂ ಹಿಂದು: “ನಾನು ಯಾವಾಗಲೂ ಹಿಂದೂ ಆಗಿದ್ದೇನೆ. ಆದರೆ, ಅದನ್ನು ರಾಜಕೀಯಕ್ಕೆ ಬಳಸಿಲ್ಲ. ಧರ್ಮ ಮತ್ತು ಜಾತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಬಿಜೆಪಿಯವರಿಗೆ ಜನರಿಗಾಗಿ ಇಂಥ ಅಭಿವೃದಿಟಛಿ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಏನೂ ಇಲ್ಲ. ಅದಕ್ಕೆ ಈಗ ಹಿಂದುತ್ವ ಅಂಥ ಶುರು ಮಾಡಿಕೊಂಡಿದ್ದಾರೆ.
ಹಿಂದು ಅವರು ಮಾತ್ರವಲ್ಲ. ನಾನೂ ಹಿಂದೂನೇ. ಆದರೆ, ಮನುಷ್ಯತ್ವ ಇರುವ ಹಿಂದು. ಆದರೆ, ಅವರು ಮನುಷ್ಯತ್ವ ಇಲ್ಲದ ಹಿಂದೂಗಳು. ಅಷ್ಟೇ ನನಗೂ, ಅವರಿಗೂ ಇರೋ ವ್ಯತ್ಯಾಸ’ ಎಂದರು.”ಇಲ್ಲಿ ಕೂತಿರೋರೆಲ್ಲ ಹಿಂದೂಗಳಲ್ವಾ? ಏನ್ ಅವರು ಮಾತ್ರ ಹಿಂದೂಗಳಾ? ನನ್ನ ಹೆಸರೇನಪ್ಪಾ? ಸಿದ್ದರಾಮಯ್ಯ. ಧ್ರುವ. ನಾರಾಯಣ. ಹೆಸರಲ್ಲೇ ನಾರಾಯಣ ಇದೆ. ನಾವೆಲ್ಲ ಹಿಂದೂಗಳೇ ಅಲ್ವಾ’ ಎಂದು ಸೇರಿದ್ದ ಪ್ರೇಕ್ಷಕರಿಗೇ ಪ್ರಶ್ನೆ ಕೇಳಿದರು.