Advertisement

ಬಿಜೆಪಿ, ಕಾಂಗ್ರೆಸ್ ಒಪ್ಪಂದ ಮಾಡಿಕೊಂಡು ಸ್ಪರ್ಧೆಗಿಳಿದಿವೆ: ಪಕ್ಷೇತರ ಅಭ್ಯರ್ಥಿ ಲೋಣಿ

02:09 PM Nov 27, 2021 | Team Udayavani |

ವಿಜಯಪುರ : ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಮಾಡಿಕೊಂಡು ಸ್ಪರ್ಧೆಗೆ ಇಳಿದಿದ್ದು, ಗ್ರಾಪಂ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ಸ್ಪರ್ಧೆ ಮಾಡಿದ್ದೇನ, ಸೋಲು, ಗೆಲುವು ಮತದಾರರ ತೀರ್ಪಿಗೆ ಬಿಟ್ಟದ್ದು ಎಂದು ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆ ವಿಜಯಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ವಿಜಯಪುರ ಜಿಲ್ಲೆಯ ಜಿ.ಪಂ. ಉಪಾಧ್ಯಕ್ಷನಾಗಿ ನಾನು ಸ್ಥಳೀಯ ಸಂಸ್ಥೆಗಳ, ಅದರಲ್ಲೂ ಗ್ರಾ.ಪಂ. ಸದಸ್ಯರ ನೋವು, ನಲಿವುಗಳ ಅರಿವು ನನಗಿದೆ. ನಾನು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸಗಳನ್ನು ಜನರು ಸ್ಮರಿಸುತ್ತಿದ್ದಾರೆ. ಅವರ ಆಗ್ರಹದ ಮೇರೆಗೆ ಸ್ಪರ್ಧೆಗೆ ಇಳಿದಿರುವ ನನಗೆ ಹೆಚ್ಚು ಬೆಂಬಲ ಸಿಗುವ ವಿಶ್ವಾಸವಿದೆ ಎಂದರು.

ನನ್ನಿಂದಾಗಿ ಚುನಾವಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ನಾನಪತ್ರ ಹಿಂಪಡೆಯುವ ಕುರಿತು ರಾಜಕೀಯ ಒತ್ತಡ ಹೇರಲಾಗಿದೆ. ದೂರವಾಣಿ ಕರೆ ಮೂಲಕ ನನ್ನ ಕುಟುಂಬದವರಿಗೆ ಏನೆಲ್ಲ ಬೆದರಿಕೆ ಹಾಕಲಾಗಿಲುತ್ತಿದೆ. ಜೀವ ಭಯ ಇರುವ ಕಾರಣ ಪೊಲೀಸ ಭದ್ರತೆ ನೀಡುವಂತೆ ಎಸ್ಪಿ ಅವರಿಗೆ ಮನವಿ ಮಾಡುತ್ತೇನೆ ಎಂದರು.

ಎಸ್.ಆರ್.ಪಾಟೀಲ ಅವರಂಥ ಹಿರಿಯರನ್ನು ಕಡೆಗಣಿಸಿ, ಸಾಮಾಜಿಕ ನ್ಯಾಯ ಬದಿಗೊತ್ತಿ, ಈಗಾಗಲೇ ಶಾಸಕರಾಗಿರುವ, ಸಚಿವರಾಗಿ ಸೇವೆ ಸಲ್ಲಿಸಿರುವ ಎಂ.ಬಿ.ಪಾಟೀಲ ಅವರ ಸಹೋದರ ಸುನಿಲಗೌಡ ಪಾಟೀಲ ಅವರಿಗೆ ನೀಡಿದ್ದು, ಬೇಸರ ತರಿಸಿದೆ ಎಂದರು.

ಸ್ಪರ್ಧೆಗೆ ಮುನ್ನ ಗ್ರಾ.ಪಂ. ಸದಸ್ಯರ ಸಭೆ ಕರೆದು ಚರ್ಚಿಸಿದ್ದೇನೆ. ಅವರ ಒತ್ತಾಸೆಯಿಂದ, ಅವರು ನೀಡಿದ ಭರವಸೆಯಿಂದ ಸ್ಪರ್ಧೆಗೆ ಇಳಿದಿದ್ದೇನೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳ ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಎರಡು ಮತ ಹಾಕಲು ಅವಕಾಶ ಇರುವುದರಿಂದ ಎರಡೂ ಪಕ್ಷಗಳ ನಾಯಕರು ನನಗೆ ದ್ವಿತೀಯ ಪ್ರಾಶಸ್ತ್ಯದ ಮತ ಹಾಕಿಸುವಂತೆ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಾಯಕರಿಗೆ ಮನವಿ ಮಾಡುತ್ತೇನೆ ಎಂದರು.

Advertisement

ಕಾಂಗ್ರೆಸ್ ಪಕ್ಷ ಅದರಲ್ಲೂ ನನಗೆ ಸಿದ್ದರಾಮಯ್ಯ ಅವರನ್ನು ಕಳೆದ ಎರಡು ದಶಕದಿಂದ ಬೆಂಬಲಿಸಿದ ನನಗೆ ಯಾವ ಅವಕಾಶವನ್ನು ಕೊಡಿಸಲಿಲ್ಲ. ಪಕ್ಷನಿಷ್ಟನಾದ ನನಗೆ ಪಕ್ಷದಲ್ಲೂ ಕನಿಷ್ಟ ಅವಕಾಶ ಸಿಗಲಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷನನ್ನಾಗಿ ಮಾಡುವ ಭರವಸೆಯನ್ನೂ ಈಡೆರಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಜಕೀಯ ಅಸ್ತಿತ್ವ ಹಾಗೂ ಸ್ವಾಭಿಮಾನಕ್ಕಾಗಿ ಸ್ಪರ್ಧೆ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯರಾದ ಸಿದ್ದು, ಡಿ.ಕೆ.ಶಿ., ಎಸ್.ಆರ್. ಪಾಟೀಲ, ಎಚ್.ವೈ.ಮೇಟಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗಳಾದ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ ಸೇರಿದಂತೆ ಕೂಡ ಕರೆ ಮಾಡಿ, ನಾಮಪತ್ರ ಹಿಂಪಡೆಯುವ ಕುರಿತು ಒತ್ತಡ ಹೇರಿದ್ದರು. ಅಲ್ಲದೇ ಆರ್ಥಿಕ ನಷ್ಟಕ್ಕೆ ಸಿಲುಕುತ್ತಿ ಎಂದು ಸಲಹೆ ನೀಡಿದರೂ ನಾನು ಗ್ರಾ.ಪಂ. ಸದಸ್ಯರಿಗೆ ನೀಡಿದ ಭರವಸೆ ಕಾರಣ ಸ್ಪರ್ಧೆಗೆ ಇಳಿಯುವ ನನ್ನ ನಿರ್ಧಾರಕ್ಕೆ ಬದ್ದನಾಗಿ ಕಣದಲ್ಲಿ ಉಳಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬೀರೇಶ್ವರ ಪೂಜಾರಿ, ಜಾಕೀರ,ಎಂ.ಎಸ್.ಪಠಾಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next