Advertisement

ಬಿಜೆಪಿ ಮತ್ತು ಬಜರಂಗ ದಳಕ್ಕೆ ಪಾಕಿಸ್ಥಾನದಿಂದ ಹಣ: ಕಾಂಗ್ರೆಸ್‌ ನಾಯಕನ ಹೊಸ ವಿವಾದ

09:41 AM Sep 02, 2019 | keerthan |

ಭಿಂಡ್‌: ಭಾರತೀಯ ಜನತಾ ಪಕ್ಷ  ಮತ್ತು ಹಿಂದೂ ಸಂಘಟನೆ ಬಜರಂಗ ದಳಕ್ಕೆ ಪಾಕಿಸ್ಥಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ ಐನಿಂದ ಹಣ ವರ್ಗಾವಣೆಯಾಗುತ್ತಿದೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್‌ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಹೊಸತೊಂದು ವಿವಾದ ಸೃಷ್ಠಿಸಿದ್ದಾರೆ.

Advertisement

ಮುಸ್ಲಿಮರಿಗಿಂತ ಮುಸ್ಲಿಮೇತರರು ಪಾಕಿಸ್ಥಾನದ ಐಎಸ್‌ ಐಗೆ ಸಹಾಯ ಮಾಡುತ್ತಿದ್ದಾರೆಂದ ದಿಗ್ವಿಜಯ್‌ ಸಿಂಗ್, ಬಜರಂಗ ದಳ ಮತ್ತು ಬಿಜೆಪಿ ಪಾಕಿಸ್ಥಾನದ ತನಿಖಾ ಸಂಸ್ಥೆಯಾದ ಐಎಸ್‌ ಐನಿಂದ ಹಣ ಪಡೆಯುತ್ತಿದೆ. ಇದನ್ನು ಜನರು ಗಮನಿಸಬೇಕು ಎಂದು ಹೇಳಿದರು.

ಭಿಂಡ್‌ ನಲ್ಲಿ ಮಹಾರಾಣ ಪ್ರತಾಪ್‌ ಅವರ ಪ್ರತಿಮೆ ಅನಾವರಣಗೊಳಿಸಿ ದಿಗ್ವಿಜಯ್‌  ಸಿಂಗ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next