Advertisement

ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಕಟಿಬದ್ಧರಾಗಿ: ನಳಿನ್‌

07:10 AM Apr 14, 2018 | Team Udayavani |

ಕಾರ್ಕಳ: ವಿರೋಧ ಪಕ್ಷದ ಶಾಸಕರಾಗಿದ್ದರೂ ಕಾರ್ಕಳ ಕ್ಷೇತ್ರದಲ್ಲಿ ರಾಜ್ಯದ ಬೇರೆ ಎಲ್ಲ  ಕ್ಷೇತ್ರಗಳಿಗೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿಯೂ ಸುನಿಲ್‌ ಕುಮಾರ್‌ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಕಟಿಬದ್ಧರಾಗಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

Advertisement

ಎ. 13ರಂದು ಮಂಜುನಾಥ ಪೈ ಸಭಾಭವನದಲ್ಲಿ ಚುನಾವಣಾ ಪೂರ್ವಭಾವಿಯಾಗಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಮಾತನಾಡಿ, ಸರಕಾರದ ಯೋಜನೆಗಳು, ಅಭಿವೃದ್ಧಿ, ಜನರ ಸಮಸ್ಯೆ, ಭವಿಷ್ಯದ ಚಿಂತನೆ ಇವೆಲ್ಲ ಇಲ್ಲದೇ ಶಾಸಕ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ ಸುನಿಲ್‌ ಕುಮಾರ್‌ ಅವರು ಅದೆಲ್ಲವನ್ನೂ ಮೈಗೂಡಿಸಿಕೊಂಡಿದ್ದಾರೆ ಎಂದರು.

ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕಾರ್ಯಕರ್ತರು ಶ್ರಮ ಪಡಬೇಕಾಗಿದೆ. ಬಹು ಸಂಖ್ಯಾತರಿಗಾಗುವ ಸಮಸ್ಯೆ, ಲವ್‌ ಜಿಹಾದ್‌ ವಿರುದ್ಧ ಹೋರಾಟ, ಗೋಸಂಕ್ಷಣೆ, ರಾಷ್ಟ್ರಭಕ್ತಿ ಪ್ರತಿಯೊಬ್ಬರ ಧ್ಯೇಯವಾಗಬೇಕು. ಅಂತಹಾ ಧ್ಯೇಯವುಳ್ಳ ಶಾಸಕರನ್ನು ನಾವು ಬೆಂಬಲಿಸಬೇಕು ಎಂದರು.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮುಂಬಯಿಯ ಉದ್ಯಮಿ ಮಹೇಶ್‌ ಶೆಟ್ಟಿ ಅವರ ಹೆಸರನ್ನು ಘೋಷಿಸಲಾಯಿತು.ಸಮಾವೇಶದಲ್ಲಿ ಶುಕ್ರವಾರ ನಿಧನ ಹೊಂದಿದ ಪುರಸಭೆಯ ಮಾಜಿ ಸದಸ್ಯೆ ರತ್ನಾ ಯು. ಪೈ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಕ್ಷೇತ್ರಾಧ್ಯಕ್ಷ ಮಣಿರಾಜ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಳ ಪ್ರಭಾಕರ ಕಾಮತ್‌ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಹಾಲಿ ಶಾಸಕ ವಿ. ಸುನಿಲ್‌ ಕುಮಾರ್‌, ಎಂ.ಕೆ. ವಿಜಯ ಕುಮಾರ್‌, ಗುರುಪ್ರಸಾದ್‌ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ, ಅನಂತಕೃಷ್ಣ ಶೆಣೈ, ಮುಟ್ಲುಪಾಡಿ ಸತೀಶ್‌ ಶೆಟ್ಟಿ , ಸೋಜನ್‌ ಪಿ. ಜೇಮ್ಸ್‌, ಯುವಮೋರ್ಚಾದ ಅಧ್ಯಕ್ಷ ಕರುಣಾಕರ, ರೇಶ್ಮಾ ಉದಯ ಶೆಟ್ಟಿ ಇನ್ನಾ , ಅನಿತಾ ಆರ್‌. ಅಂಚನ್‌, ಮಾಲಿನಿ ಜೆ. ಶೆಟ್ಟಿ, ಪ್ರಮಿಳಾ ಉಪಸ್ಥಿತರಿದ್ದರು.ರವೀಂದ್ರ ಕುಮಾರ್‌ ಸ್ವಾಗತಿಸಿ, ಸಾಣೂರು ನರಸಿಂಹ ಕಾಮತ್‌ ನಿರೂಪಿಸಿದರು.

ನಿದ್ದೆಯಲ್ಲಿರುವ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ದೆಯಲ್ಲಿದ್ದೇ ಆಡಳಿತ ನಡೆಸಿದ್ದಾರೆ. ರಾಜ್ಯದ ಜನತೆಗೆ ಸುರಕ್ಷತೆ ಇಲ್ಲದಂತಾಗಿದೆ. ಕಳೆದ 5 ವರ್ಷಗಳಲ್ಲಿ  ದೇಶದಲ್ಲಿಯೇ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯ ಕರ್ನಾಟಕ. ಅಧಿಕಾರಿಗಳ ಆತ್ಮಹತ್ಯೆ, ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಕೂಡ ನಡೆದಿದೆ. ಕೇರಳವನ್ನೂ ಮೀರಿಸಿ ದೇಶದಲ್ಲಿಯೇ ಹಿಂದೂ ಕಾರ್ಯಕರ್ತರ ಹತ್ಯೆಯಾಗಿರುವುದು ಕೂಡ ಕರ್ನಾಟಕದಲ್ಲಿ.  ಕಳೆದ 5 ವರ್ಷಗಳಿಂದ ರಾ ಜ್ಯವನ್ನು ಹಂತಕರ ನಾಡನ್ನಾಗಿ ಸಿದ್ಧರಾಮಯ್ಯನವರು ಮಾಡಿದ್ದಾರೆ ಎಂದು ಟೀಕಿಸಿದ ಅವರು, ಈ ಬಾರಿ ಕಾಂಗ್ರೆಸ್‌ ಸರಕಾರವನ್ನು ಕಿತ್ತೂಗೆದು ಕಮಲ ಅರಳಿಸಬೇಕಾಗಿದೆ ಎಂದು ನಳಿನ್‌ ಕುಮಾರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next