ತಾಳಿಕೋಟೆ: ಭಾರತೀಯ ಜನತಾ ಪಕ್ಷ ಸ್ಥಾಪನೆಗೊಂದು 39ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವುದರಿಂದ ಪಟ್ಟಣದಲ್ಲಿ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ನನ್ನ ಮನೆ ಬಿಜೆಪಿ ಎಂಬ ಧ್ಯೇಯವಾಕ್ಯ ಪ್ರಕಟಿಸಿ ಸಂಭ್ರಮಿಸಿದರು.
ಈ ಸಮಯದಲ್ಲಿ ವೇಳೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಮಾತನಾಡಿ, ಭಾರತೀಯ ಜನತಾ ಪಕ್ಷ ಉದಯವಾಗಿ ಇಂದಿಗೆ 39 ವರ್ಷಗಳು ಗತಿಸಿವೆ. ಮೊದಲಿಗೆ ರಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ ಸ್ಥಾಪಿಸಿದ ಜನಸಂಘದ ಮೂಲಕ ಜನತಾ ಪಕ್ಷವಾಗಿ ಮಾರ್ಪಟ್ಟಿತ್ತು.
ಅಂದು ಪಕ್ಷದ ಹೊಣೆಗಾರಿಕೆಯನ್ನು ಹೊತ್ತ ಅಜಾತಶತ್ರು ಅಟಲ್‌ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಅವರು ಭಾರತೀಯ ಜನತಾ ಪಕ್ಷವನ್ನಾಗಿ 1982 ಏಪ್ರಿಲ್ 6ರಂದು ಅಸ್ಥಿತ್ವಕ್ಕೆ ತಂದರು. ಅಂದು ಕೇವಲ 2 ಸ್ಥಾನಗಳನ್ನು ಗೆದ್ದು ನಗೆಯನ್ನು ಬೀರಿದ್ದ ಬಿಜೆಪಿ ಇಂದು ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ 303 ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶದಲ್ಲಿ ಬಲಾಡ್ಯ ಪಕ್ಷವಾಗಿ ಹೊರ ಹೊಮ್ಮಿದೆ. ಲಕ್ಷಾಂತರ ಜನ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಪಕ್ಷದ ಕಾರ್ಯಕರ್ತರು ಎಂದು ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ.
ನನ್ನ ಮನೆ ಬಿಜೆಪಿ ಎಂಬ ಧ್ಯೇಯ ವಾಕ್ಯದೊಂದಿಗೆ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ತಾಳಿಕೋಟೆ ಮಹಾಶಕ್ತಿ ಕೇಂದ್ರದ ಬೂತ್‌ನಲ್ಲಿ ಬಿಜೆಪಿ ಧ್ವಜ ಹಾರಿಸಲಾಯಿತು. ನಗರ ಘಟಕ ಅಧ್ಯಕ್ಷ ರಾಘವೇಂದ್ರ ಚವ್ಹಾಣ, ಪುರಸಭೆ ಸದ್ಯಸ್ಯ ಅಣ್ಣಾಜಿ ಜಗತಾಪ, ಮುಖಂಡರಾದ ಶಶಿಧರ ಡಿಸಲೆ, ಶರಣು ಗುಟಗುಣಕಿ, ಈಶ್ವರ ಹೂಗಾರ, ರವಿ ಕಟ್ಟಿಮನಿ, ಬಸವರಾಜ ಸಜ್ಜನ, ಮಂಜುನಾಥ ಕುಲಕರ್ಣಿ, ಸಂಗಮೇಶ ಛಾಯಾಗೋಳ, ರಾಮು ಜಗತಾಪ ಇದ್ದರು.