ಕೋಲ್ಕತ್ತಾ: ಬಿಜೆಪಿ ಹೊರಗಿನವರ ಪಕ್ಷ. ಬಿಜೆಪಿಯನ್ನು ಬಂಗಾಳದಲ್ಲಿ ಬೇರೂರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಗಾಳವನ್ನು ಗಲಭೆ ಪೀಡಿತ ಗುಜರಾತ್ ಆಗಿ ಮಾಡಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದ ಮಮತಾ,ದೇಶದ ಗಡಿಭಾಗದ ಪರಿಸ್ಥಿತಿ ಹದಗೆಟ್ಟಿರುವ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿರುವುದು ಸಮಂಜಸವಲ್ಲ. ನನ್ನ ವೃತ್ತಿ ಜೀವನದಲ್ಲಿ ಇಂಥ ಗೃಹ ಸಚಿವರನ್ನು ಎಂದೂ ನೋಡಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳವನ್ನು ಗುಜರಾತ್ ಆಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳವನ್ನು ಗಲಭೆ ಪೀಡಿತ ಗುಜರಾತ್ ಆಗಿ ಪರಿವರ್ತಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿಹಿ ಸುದ್ದಿ:2020ರ ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?
ಬಂಗಾಳದಲ್ಲಿ ಹೊರಗಿನವರಿಗೆ ಯಾವುದೇ ಸ್ಥಾನ ನೀಡಲಾಗುವುದಿಲ್ಲ. ಚುನಾವಣೆ ಬಂದಾಗ ಇಲ್ಲಿಗೆ ಆಗಮಿಸಿ ಇಲ್ಲಿನ ಶಾಂತಿಯನ್ನು ಕದಡುವವರನ್ನು ಎಂದಿಗೂ ಸ್ವಾಗತಿಸಲು ಇಲ್ಲಿಯ ಜನ ತಯಾರಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.