Advertisement

BJP; ಇಂದು 2ನೇ ಪಟ್ಟಿ ಬಿಡುಗಡೆ?: ಮಹಿಳೆಯರಿಗೆ ಹೆಚ್ಚಿನ ಸ್ಥಾನ?

12:58 AM Mar 10, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ವಾರದ ಹಿಂದೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಜೆಪಿ, ಮಾ.10, ರವಿವಾರ‌ 150 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಪಟ್ಟಿಯಲ್ಲಿ ಮಹಾ­ರಾಷ್ಟ್ರ ಮತ್ತು ಬಿಹಾರದ ಹೆಚ್ಚಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಜತೆಗೆ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಹಿಮಾ­ಚಲ ಪ್ರದೇಶ, ಹರಿಯಾಣ, ಒಡಿಶಾ ಅಭ್ಯರ್ಥಿ­ಗಳ ಹೆಸರು ಪ್ರಕಟವಾಗುವ ನಿರೀಕ್ಷೆಯಿದೆ.

Advertisement

ರವಿವಾರ‌ ಬಿಜೆಪಿಯ ಸಿಇಸಿ ಸಭೆ ನಡೆ ಯಲಿದೆ. ಬುಧವಾರದಿಂದಲೇ ಈ ಎಲ್ಲ ರಾಜ್ಯ ಗಳ ಅಭ್ಯರ್ಥಿಗಳ ಸಂಬಂಧ ಚರ್ಚೆ ನಡೆ ಸಲಾ ಗಿದೆ. ಹೈಕಮಾಂಡ್‌ ರಾಜಸ್ಥಾನ, ತಮಿಳು  ನಾಡು, ಆಂಧ್ರ, ಕರ್ನಾಟಕ, ಒಡಿಶಾ ಘಟಕಗಳ ಕೋರ್‌ ಕಮಿಟಿ ಜತೆಗೆ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿ ಸಿದೆ, ಪಟ್ಟಿ ಸಿದ್ಧಪಡಿಸಲಾಗಿದೆ.

ಬಿಜೆಪಿ ಸೇರಿರುವ ಕಾಂಗ್ರೆಸ್‌ನ ಮಾಜಿ ಸಿಎಂ ಅಶೋಕ್‌ ಚವಾಣ್‌ ಸೊಸೆ ಮಿನಲ್‌ ಖಠಗಾ ವಂಕರ್‌(ನಾಂದೆಡ್‌), ಧರತಿ ದೇವಾರೆ(ಧುಲೆ), ಸ್ಮಿತಾ ವಾದಲ್‌(ಜಲಗಾಂವ್‌), ಪುತ್ರಿ ಪಂಕಜಾ ಮುಂಢೆ, ಪಕ್ಷೇತರ ಸಂಸದೆ ನವನೀತ ರಾಣಾ ಬಿಜೆಪಿಯಿಂದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ. ಗುಜರಾತ್‌ನ ಬಿಜೆಪಿ ಅಧ್ಯಕ್ಷ ಸಿ .ಆರ್‌. ಪಾಟೀಲ್‌ ಪುತ್ರಿ ಅವರಿಗೆ ಸ್ಪರ್ಧಿಸಲು ಅವಕಾಶ ದೊರೆಯುವ ಸಾಧ್ಯತೆ ಇದೆ.

ಮಧ್ಯಪ್ರದೇಶ, ರಾಜಸ್ಥಾನದಲ್ಲಿ “ಕೈ’ಗೆ ಹೊಡೆತ: ಬಿಜೆಪಿ ಸೇರಿದ ಪ್ರಮುಖರು
ಭೋಪಾಲ್‌: ಮಧ್ಯ ಪ್ರದೇಶದ ಪ್ರಮುಖ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಸುರೇಶ್‌ ಪಚೌರಿ, ಮಾಜಿ ಸಂಸದ ಗಜೇಂದ್ರ ಸಿಂಗ್‌ ರಾಜುಖೇಡಿ ಬಿಜೆಪಿ ಸೇರಿ ದ್ದಾರೆ. ಮತ್ತೂಂದೆಡೆ ರಾಜಸ್ಥಾನದ ಮಾಜಿ ಸಿಎಂ ಅಶೋಕ್‌ ಗೆಹೊÉàಟ್‌ ಬೆಂಬಲಿಗರಾದ ಲಾಲ್‌ಚಂದ ಕಟಾರಿಯಾ ಹಾಗೂ ರಾಜೇಂದ್ರ ಯಾದವ್‌ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ. ಮ.ಪ್ರ. ಸಿಎಂ ಮೋಹನ್‌ ಯಾದವ್‌ ಸಮ್ಮುಖದಲ್ಲಿ ಪಚೌರಿ, ರಾಜುಖೇಡಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದಾರೆ. ಪಚೌರಿ ಗಾಂಧಿ ಕುಟುಂಬಕ್ಕೆ ತುಂಬಾ ಹತ್ತಿರ ವಾಗಿದ್ದರು. ರಾಜುಖೇಡಿ ಕೂಡ ಬುಡಕಟ್ಟು ಸಮುದಾಯದ ಪ್ರಮುಖ ನಾಯಕರಾಗಿದ್ದರು.

ಆಂಧ್ರದಲ್ಲಿ ಬಿಜೆಪಿಗೆ 6 ಕ್ಷೇತ್ರಗಳು!
ಹೊಸದಿಲ್ಲಿ: ಟಿಡಿಪಿ ಮತ್ತು ನಟ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷ (ಜೆಎಸ್‌ಪಿ) ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಆಂಧ್ರ ಪ್ರದೇಶದಲ್ಲಿ 6 ಪ್ಲಸ್‌ 2 ಸೂತ್ರ ಮುಂದಿಡಲಾಗಿದೆ. ಅದರ ಅನುಸಾರ 25 ಕ್ಷೇತ್ರಗಳ ಪೈಕಿ ಬಿಜೆಪಿ 6, ಜೆಎಸ್‌ಪಿ 2 ಹಾಗೂ ಉಳಿದ 17ರಲ್ಲಿ ಟಿಡಿಪಿ ಸ್ಪರ್ಧಿಸಲಿದೆ.

Advertisement

ಅದೇ ರೀತಿ 175 ವಿಧಾನಸಭೆ ಕ್ಷೇತ್ರಗಳ ಪೈಕಿ, ಬಿಜೆಪಿ-ಜೆಎಸ್‌ಪಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, 145ರಲ್ಲಿ ಟಿಡಿಪಿ ಕಣಕ್ಕಿಳಿಯಲಿದೆ.

ದಿಲ್ಲಿಯಲ್ಲಿ ಚರ್ಚೆ: ಈ ನಡುವೆ ಚಂದ್ರಬಾಬು ನಾಯ್ಡು ಶನಿವಾರ ಗೃಹ ಸಚಿವ ಅಮಿತ್‌ ಶಾ ಜತೆಗೆ ಸ್ಥಾನ ಹೊಂದಾಣಿಕೆ ಮತ್ತು ರಾಜಕೀಯ ಮೈತ್ರಿ ಬಗ್ಗೆ 2ನೇ ಸುತ್ತಿನ ಮಾತುಕತೆ ನಡೆಸಿದರು. ಮೈತ್ರಿ ಬಗ್ಗೆ ಒಂದೆರಡು ದಿನದಲ್ಲಿ ಅಧಿಕೃತ ಘೋಷಣೆ ಹೊರ ಬೀಳಲಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್‌ ಮಾಡಿ ಎನ್‌ಡಿಎ ಬಳಗಕ್ಕೆ ಚಂದ್ರಬಾಬು, ಪವನ್‌ ಕಲ್ಯಾಣ್‌ ಅವರನ್ನು ಸ್ವಾಗತಿಸುವುದಾಗಿ ಘೋಷಿಸಿದ್ದಾರೆ. 2018ರಲ್ಲಿ ಚಂದ್ರಬಾಬು ಎನ್‌ಡಿಎ ತೊರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next