Advertisement

ಬಿಜೆಪಿ 10ನೇ ಪಟ್ಟಿ ಬಿಡುಗಡೆ: ನಾಲ್ವರು ಹಾಲಿ ಸಂಸದರಿಗೆ ತಪ್ಪಿದ ಟಿಕೆಟ್‌

11:44 PM Apr 10, 2024 | Team Udayavani |

ಹೊಸದಿಲ್ಲಿ: ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ 10ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ 7 ಲೋಕಸಭೆ ಕ್ಷೇತ್ರ , ಚಂಡೀಗಢದ 1 ಹಾಗೂ ಪಶ್ಚಿಮ ಬಂಗಾಲದ 1 ಕ್ಷೇತ್ರಕ್ಕೆ (ಮರು ಘೋಷಣೆ) ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ನಾಲ್ವರು ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪಿದೆ.

Advertisement

ಉತ್ತರ ಪ್ರದೇಶದ ಮೈನ್‌ಪುರಿ, ಕೌಶಂಬಿ, ಫ‌ುಲ್ಪರ್‌, ಅಲಹಾಬಾದ್‌, ಬಲಿಯಾ, ಮಚಿಲ್‌ ಶಹರ್‌, ಘಾಜಿಪುರ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ.

ಬಲಿಯಾದಲ್ಲಿ ಹಾಲಿ ಸಂಸದ ವೀರೇಂದ್ರ ಸಿಂಗ್‌ ಬದಲಿಗೆ ಮಾಜಿ ಪ್ರಧಾನಿ ಚಂದ್ರಶೇಖರ್‌ ಪುತ್ರ ನೀರಜ್‌ ಶೇಖರ್‌ ಕಣಕ್ಕಿಳಿಸಲಾಗಿದೆ. ಅಲಹಾಬಾದ್‌ನಲ್ಲಿ ಸಂಸದೆ ರಿತಾ ಬಹುಗುಣ ಬದಲಿಗೆ ನೀರಜ್‌ ತ್ರಿಪಾಠಿಗೆ ಟಿಕೆಟ್‌ ನೀಡಲಾಗಿದ್ದು, ಫ‌ುಲ್ಪರ್‌ನಲ್ಲಿ ಕೇಶರಿ ದೇವಿಗೆ ಟಿಕೆಟ್‌ ಕೈ ತಪ್ಪಿದೆ.

ಚಂಡೀಗಢದ ಸಂಸದರಾದ ಕಿರಣ್‌ ಖೇರ್‌ಗೆ ಟಿಕೆಟ್‌ ಕೈ ತಪ್ಪಿದ್ದು, ಆ ಕ್ಷೇತ್ರದಿಂದ ಸಂಜಯ್‌ ಟಂಡನ್‌ ಸ್ಪರ್ಧಿ ಸುತ್ತಿದ್ದಾರೆ. ಪ.ಬಂಗಾಲದ ಅಸಾನ್‌ಸೋಲ್‌ ಕ್ಷೇತ್ರಕ್ಕೆ ಈ ಹಿಂದೆ ಘೋಷಿಸಿದ್ದ ಅಭ್ಯರ್ಥಿ ಪವನ್‌ ಸಿಂಗ್‌ ಬದಲಿಗೆ ಎಸ್‌.ಎಸ್‌. ಅಹುವಾಲಿಯಾ ಹೆಸರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next