Advertisement

BJP 2ನೇ ಪಟ್ಟಿಗೆ ಇಂದು ಸಭೆ: ನಾಳೆ ಫೈನಲ್‌

12:38 AM Mar 07, 2024 | Team Udayavani |

ಹೊಸದಿಲ್ಲಿ: ಕರ್ನಾಟಕದ 28 ಕ್ಷೇತ್ರಗಳು ಸೇರಿ ದೇಶದ ಉಳಿದ ರಾಜ್ಯಗಳ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ­ಗೊಳಿಸಲು ಬಿಜೆಪಿಯ ಗುರುವಾರ ಸಭೆ ನಡೆಸುವ ಸಾಧ್ಯತೆ ಇದೆ. ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಚರ್ಚಿಸಿ, ಶುಕ್ರವಾರ ಪಟ್ಟಿಯನ್ನು ಪ್ರಕಟಿಸ­ಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ಶನಿವಾರ ಬಿಜೆಪಿಯ 16 ರಾಜ್ಯ­ಗಳ 195 ಅಭ್ಯರ್ಥಿಗಳ ಮೊದಲ ಪಟ್ಟಿ­ಯನ್ನು ಪ್ರಕಟಿಸಿತ್ತು. 370 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಕಷ್ಟು ಸಮಾಲೋ­ಚನೆಗಳನ್ನು ಬಿಜೆಪಿ ನಡೆಸುತ್ತಿದೆ.

Advertisement

ಮೊದಲ ಹಂತದಲ್ಲಿ ಬಿಜೆಪಿ ಅಧ್ಯಕ್ಷ ಜ.ೆ ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜತೆಗೆ ಚರ್ಚಿಸಿದ ಬಳಿಕ ಪ್ರಧಾನಿಯೊಂದಿಗೆ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಲಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಈ ವಾರ ಬಿಜೆಪಿಯ ಎರಡನೇ ಪಟ್ಟಿಯನ್ನು ನಿರೀಕ್ಷಿಸಬಹುದು. ಇದರಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಘೋಷಣೆ ಮಾಡುತ್ತಾರೆಯೇ ಕಾದು ನೋಡ­ಬೇಕಿದೆ.

ಜೆಡಿಯು 14, ಚಿರಾಗ್‌ ಪಕ್ಷಕ್ಕೆ 6 ಕ್ಷೇತ್ರ ಬಿಹಾರದಲ್ಲೂ ಎನ್‌ಡಿಎ ಕೂಟದ ಸೀಟು ಹಂಚಿಕೆ ಬಹುತೇಕ ಅಂತಿಮ­ಗೊಂಡಿದೆ. ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿ ಯು 14 ಮತ್ತು ಚಿರಾಗ್‌ ಪಾಸ್ವಾನ್‌ ಹಾ ಗೂ ಪಶುಪತಿ ಪರಾಸ್‌ ನೇತೃತ್ವದ ಪ್ರತ್ಯೇಕ ಲೋಕ ಜನಶಕ್ತಿ ಪಾರ್ಟಿಗೆ ಆರು ಸೀಟು ಗಳನ್ನು ಬಿಟ್ಟುಕೊಡಲು ಬಿಜೆಪಿ ನಿರ್ಧ ರಿಸಿದೆ. ಒಟ್ಟು 40 ಕ್ಷೇತ್ರಗಳಿರುವ ಬಿಹಾರ ದಲ್ಲಿ ಬಿಜೆಪಿ ಅತೀದೊಡ್ಡ ಪಕ್ಷವಾಗಿದ್ದು 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ.

ಅಜಿತ್‌ 3, ಶಿಂಧೆ ಬಣಕ್ಕೆ 10 ಸೀಟು ಹಂಚಿಕೆ
ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆಯು ಬಹುತೇಕ ಅಂತಿಮ ಗೊಂಡಿದೆ ಎಂದು ತಿಳಿದು ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಡ ರಾತ್ರಿಯವರೆಗೆ ಸಿಎಂ ಏಕನಾಥ್‌ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫ‌ಡ್ನವೀಸ್‌ ಮತ್ತು ಅಜಿತ್‌ ಪವಾರ್‌ ಜತೆಗೆ ನಡೆಸಿದ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಒಮ್ಮತಕ್ಕೆ ಬರಲಾಗಿದೆ. ಈಗ ಗೊತ್ತಾಗಿರುವ ಪ್ರಕಾರ, ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ಬಿಜೆಪಿ 32, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣ 3 ಮತ್ತು ಶಿಂಧೆ ನೇತೃತ್ವದ ಶಿವಸೇನೆಯು 10ರಿಂದ 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next