Advertisement

ಗುಜರಾತ್ ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ, “ಕೈ” ತಪ್ಪಿದ ಹಿಮಾಚಲ

09:46 AM Dec 18, 2017 | Sharanya Alva |

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯ ಮುನ್ನೋಟ ಎಂದೇ ಪರಿಗಣಿಸಲಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಮತಎಣಿಕೆ ಸೋಮವಾರ ಬೆಳಗ್ಗೆ ಆರಂಭಗೊಂಡಿತ್ತು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 105ಕ್ಕೂ ಹೆಚ್ಚು ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 74 ಸ್ಥಾನ ಪಡೆಯುವ ಮೂಲಕ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ.

Advertisement

ಆರಂಭಿಕ ಫಲಿತಾಂಶಲ್ಲಿ ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಮುಂದುವರಿದಿತ್ತು. ಬಿಜೆಪಿ ಮುನ್ನಡೆ ಸಾಧಿಸಿತ್ತು.

ಆದರೆ 9 ಗಂಟೆಯ ಬಳಿಕ ದಿಢೀರನೇ ಕಾಂಗ್ರೆಸ್ ಪಕ್ಷ ಭಾರೀ ಮುನ್ನಡೆ ಸಾಧಿಸಿತ್ತು. ಅದೇ ರೀತಿ ಹಿಮಾಚಲ ಪ್ರದೇಶದಲ್ಲಿಯೂ ಕಾಂಗ್ರೆಸ್, ಬಿಜೆಪಿ ಸಮಬಲದ ಹೋರಾಟದಲ್ಲಿ ಮುನ್ನಡೆ ಸಾಧಿಸಿದ್ದವು.

ಬಳಿಕ ಹಿಮಾಚಲ ಪ್ರದೇಶದಲ್ಲಿ 40ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಸರಳ ಬಹುಮತ ಪಡೆದಿದೆ. ಕಾಂಗ್ರೆಸ್ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಹೈಲೈಟ್ಸ್:

Advertisement

*ಎರಡೂ ರಾಜ್ಯಗಳಲ್ಲಿ ಸರಳ ಬಹುಮತದತ್ತ ಬಿಜೆಪಿ ದಾಪುಗಾಲು

*ರಾಜ್ ಕೋಟ್ ಕ್ಷೇತ್ರಗಳಲ್ಲಿ ಗುಜರಾತ್ ಬಿಜೆಪಿ ಸಿಎಂ ಅಭ್ಯರ್ಥಿ ವಿಜಯ್ ರೂಪಾನಿ ಕಾಂಗ್ರೆಸ್ ಪಕ್ಷದ ಇಂದ್ರನಿಲ್ ರಾಜ್ ಗುರು ವಿರುದ್ಧ ಮುನ್ನಡೆ

*ಗುಜರಾತ್ ನಲ್ಲಿ ಬಿಜೆಪಿ 94 ಸ್ಥಾನಗಳಲ್ಲಿ, ಕಾಂಗ್ರೆಸ್ 84 ಸ್ಥಾನಗಳಲ್ಲಿ ಮುನ್ನಡೆ

*ಹಿಮಾಚಲ ಪ್ರದೇಶದಲ್ಲಿ 40 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

*ಹಿಮಾಚಲ ಪ್ರದೇಶ ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ 540 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next