ನವದೆಹಲಿ:ಕರ್ತವ್ಯ ನಿರ್ವಹಣೆಯಲ್ಲಿದ್ದ ರೈಲ್ವೆಯ ಸಹಾಯಕ ಸ್ಟೇಷನ್ ಮಾಸ್ಟರ್ (ASM) ಕುಡಿದು ನಿದ್ದೆಗೆ ಶರಣಾದ ಪರಿಣಾಮ ಬುಧವಾರ (ಜುಲೈ 14) ದೆಹಲಿ-ಹೌರಾ ಮಾರ್ಗದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಉತ್ತರ ಸೆಂಟ್ರಲ್ ರೈಲ್ವೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲು ಕಾರಣವಾದ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:
ಅವಕಾಶಕ್ಕಾಗಿ ಅಲೆದ ದಿನಗಳನ್ನು ನೆನೆದು ಕಣ್ಣೀರು ಸುರಿಸಿದ ನಟ ಸೃಜನ್
ರೈಲ್ವೆ ಸಹಾಯಕ ಸ್ಟೇಷನ್ ಮಾಸ್ಟರ್ ಕುಡಿತದ ಪರಿಣಾಮ ಫರಕ್ಕಾ ಮತ್ತು ಮಗಧ ಎಕ್ಸ್ ಪ್ರೆಸ್ ನಂತಹ ಪ್ರಮುಖ ರೈಲುಗಳು ಹಾಗೂ ಸರಕು ಸಾಗಾಟದ ರೈಲುಗಳ ಸಂಚಾರವನ್ನು ವಿವಿಧ ನಿಲ್ದಾಣಗಳಲ್ಲಿ ತಡೆಹಿಡಿಯಲಾಗಿತ್ತು ಎಂದು ವರದಿ
ಹೇಳಿದೆ.
ಮಾಧ್ಯಮ ವರದಿಯ ಪ್ರಕಾರ, ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಅನಿರುದ್ಧ ಕುಮಾರ್ ಹಿರಿಯ ಅಧಿಕಾರಿಗಳು ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಿಲ್ಲವಾಗಿತ್ತು. ಬಳಿಕ ರೈಲ್ವೆ ನಿಲ್ದಾಣದ ಕಚೇರಿಗೆ ಬಂದು ಪರಿಶೀಲಿಸಿದಾಗ ಅನಿರುದ್ಧ ಕುಡಿದು ನಿದ್ದೆಗೆ ಶರಣಾಗಿರುವುದು ಬಯಲಾಗಿತ್ತು ಎಂದು ವರದಿ ವಿವರಿಸಿದೆ.
ಸಹಾಯಕ ಸ್ಟೇಷನ್ ಮಾಸ್ಟರ್ ಕಚೇರಿಯಲ್ಲಿ ಕುಡಿದು ಮಲಗಿರುವುದು ಪತ್ತೆಯಾಗಿದೆ ಎಂದು ಸ್ಟೇಷನ್ ಮಾಸ್ಟರ್ ವಿಶ್ವಂಭರ್ ದಯಾಳ್ ತಿಳಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ದೂರನ್ನು ದಾಖಲಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಅಲ್ಲದೇ ಸಹಾಯಕ ಸ್ಟೇಷನ್ ಮಾಸ್ಟರ್ ಅನಿರುದ್ಧ ಅವರನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.