ಪಟನಾ: ತಾಂತ್ರಿಕ ದೋಷದಿಂದ ಬಿಹಾರದ ಮುಜಫ್ಫರ್‌ಪುರ ಜಿಲ್ಲೆ ಸಿಂಗಾರಿ ಗ್ರಾಮದ ರೈತ ರಾಮ್ ಬಹದ್ದೂರ್ ಶಾ ಅವರ ಬ್ಯಾಂಕ್ ಖಾತೆಗೆ 52 ಕೋಟಿ ರೂ. ಜಮೆಯಾಗಿದ್ದು, ಇದರಲ್ಲಿ ಸ್ವಲ್ಪ ಹಣ ನನಗೆ ನೀಡಿ ಎಂದು ಸರ್ಕಾರಕ್ಕೆ ಆತ ಮನವಿ ಮಾಡಿದ್ದಾನೆ.
ತಮ್ಮ ಪಿಂಚಣಿ ಖಾತೆಗೆ ಇಷ್ಟೊಂದು ಹಣ ಜಮಾ ಆಗಿರುವುದು ನೋಡಿ ಖುದ್ದು ಶಾ ಅಚ್ಚರಿಕೊಂಡಿದ್ದಾರೆ. ಕಾತ್ರಾ ಗ್ರಾಮದಲ್ಲಿ ಶಾ ಅವರ ಬ್ಯಾಂಕ್ ಖಾತೆ ಇದೆ. ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಜಮೆಯಾಗಿರುವ ಕುರಿತು ಮಾಹಿತಿ ಪಡೆಯಲು ಇವರು ಬ್ಯಾಂಕ್‌ಗೆ ತೆರಳಿದ್ದು, ಈ ವೇಳೆ ಖಾತೆಯಲ್ಲಿ 52 ಕೋಟಿ ರೂ. ಇದೆ ಎಂದು ಬ್ಯಾಂಕ್ ಅಧಿಕಾರಿ ತಿಳಿಸಿದ್ದನ್ನು ಕೇಳಿ ರೈತನಿಗೆ ಒಂದು ಕ್ಷಣ ಆಘಾತವಾಗಿದೆ.
ನಾವು ಗ್ರಾಮಗಳಲ್ಲಿ ವಾಸಿಸುವ ಬಡ ರೈತರಾಗಿದ್ದೇವೆ. ಹಣ ಹೇಗೆ ಬಂದಿದೆ ಎಂಬುದರ ಬಗ್ಗೆ ಗೊತ್ತಿಲ್ಲ. ಸರಕಾರ ನಮಗೆ ಹಣಕಾಸು ನೆರವು ನೀಡಿದರೆ ಸುಗಮವಾಗಿ ಜೀವನ ಸಾಗಿಸಬಹುದಾಗಿದೆ,” ಎಂದು ರಾಮ್ ಬಹದ್ದೂರ್ ಶಾ ತಿಳಿಸಿದ್ದಾರೆ.
ನಾನು ಕೃಷಿ ಮಾಡಿಕೊಂಡು ಇದುವರೆಗೆ ಕಷ್ಟದಲ್ಲಿಯೇ ಜೀವನ ನಡೆಸಿದ್ದೇನೆ. ಸದ್ಯ ನನ್ನ ಖಾತೆಗೆ ಬಂದ ಹಣದಲ್ಲಿ ಸ್ವಲ್ಪವನ್ನಾದರೂ ನನಗೆ ನೀಡಿ. ಅದರಿಂದ ಮುಂದಿನ ಜೀವನವನ್ನು ಸುಖ-ನೆಮ್ಮದಿಯಿಂದ ಕಳೆಯುತ್ತೇನೆ ಎಂದು ರೈತ ಶಾ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.
ಇನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಹಾರದ ಕಟಿಹಾರ್ ಜಿಲ್ಲೆಯ ಪಸ್ತಿಯಾ ಎಂಬ ಗ್ರಾಮದಲ್ಲಿ ನಡೆದಿತ್ತು ಇಂತಹದೇ ಘಟನೆ ನಡೆದಿತ್ತು. ಆ ಊರಿನ ಇಬ್ಬರು ಶಾಲಾ ಮಕ್ಕಳ ಖಾತೆಗೆ 900 ಕೋಟಿ ರೂಪಾಯಿಗೂ ಅಧಿಕ ಹಣ ಜಮೆಯಾಗಿತ್ತು. ಇದೀಗ ಮತ್ತೆ ರೈತನ ಖಾತೆಗೆ ಹಣ ಬಂದಿದೆ.