Advertisement

ಬಿಟ್ಟಿ ಚಾಕ್ರಿ ಪದ್ಧತಿ’ಇನ್ನೂ ಜೀವಂತ

01:18 AM Feb 24, 2019 | |

ಬೆಂಗಳೂರು: ಜೀತ ಪದ್ಧತಿಯಂತಹ ಕೂರ್ರ ವ್ಯವಸ್ಥೆ “ಬಿಟ್ಟಿ ಚಾಕ್ರಿ ಪದ್ಧತಿ’ ರಾಜ್ಯದಲ್ಲಿ ಇನ್ನೂ ಜೀವಂತವಾಗಿದೆ ಎಂದು ಜೀತ ವಿಮುಕ್ತ ಕರ್ನಾಟಕ (ಜೀವಿಕಾ) ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

Advertisement

ಸಗಣಿ ಬಳಿಯುವುದು, ಹೆಂಡಿ (ಕೊಟ್ಟಿಗೆ) ಕಸ ಬಳಿಯುವುದು, ಹೆಂಡಿ ಕಸ ಎತ್ತುವುದು ಮುಂತಾದ ಪರ್ಯಾಯ ಪದಗಳಿಂದ ಕರೆಯಲಾಗುವ ವ್ಯವಸ್ಥೆ ಶನಿವಾರ ಶಾಸಕ ಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಚಾರ ಸಂಕಿರಣದಲ್ಲಿ ಬೆಳಕಿಗೆ ಬಂದಿತು. ಉ.ಕ. ಭಾಗದಲ್ಲಿ ದಲಿತರು ಮೇಲ್ಜಾತಿಯ ಮನೆಗಳಲ್ಲಿ ಸ್ವತ್ಛತೆಗೆ ಸಂಬಂಧಿಸಿದ ಕೆಲಸ ಮಾಡಿ ಸಂಬಳವಿಲ್ಲದೆ ಅಥವಾ ಕಡಿಮೆ ಸಂಬಳಕ್ಕೆ ಬದುಕುವ ಹೀನಾಯ ಪರಿಸ್ಥಿತಿಯೇ ಬಿಟ್ಟಿ ಚಾಕ್ರಿ.

ದಿನ ನಿತ್ಯದ ಸ್ವತ್ಛತಾ ಕಾರ್ಯಗಳೊಂದಿಗೆ ದೇವರ ಕಾರ್ಯ ಗಳಲ್ಲಿ ಹಲಿಗೆ ಬಡಿಯುವುದು, ಮದುವೆ ಸಮಯದಲ್ಲಿ ಮದು ಮಗನಿಗೆ ತಾವೇ ಖುದ್ದಾಗಿ ಚಪ್ಪಲಿ ಹೊಲಿದು ಕೊಡುವುದು, ಇಲ್ಲ ದಿದ್ದರೆ ಅಂಗಡಿಯಿಂದ ಚಪ್ಪಲಿ ತಂದು ಪೂಜೆ ಮಾಡಿ ಕೊಡುವುದು, ಸಾವಿನ ಸಮಯದಲ್ಲಿ ಪಂಜು ಹಿಡಿಯುವುದು, ದಾನದ ಬುಟ್ಟಿ ಹೊರುವುದು, ಶವ ಎತ್ತಿಕೊಂಡು ಹೋದ ಮೇಲೆ ಶವ ಇಟ್ಟ ಜಾಗ ತೊಳೆದು ಸಗಣಿಯಿಂದ ಸಾರಿಸಿ ಸ್ವತ್ಛಗೊಳಿಸುವಂತಹ ಕಾರ್ಯಗಳನ್ನು ಇವರು ಮಾಡಬೇಕಾಗುತ್ತದೆ. ಇದಕ್ಕೆ ತಿಂಗಳಿಗೆ ಪುರುಷರಿಗೆ 200 ರೂ. ಹಾಗೂ ಮಹಿಳೆಯರಿಗೆ 100 ರಿಂದ 150 ರೂ. ಕೂಲಿ ನೀಡಲಾಗುವುದು. 10 ದಿನಗಳು ಸರಿ ಯಾಗಿ ಕೆಲಸ ಮಾಡಿದರೆ ಒಂದು ಚೀಲ ಬಿಳಿ ಜೋಳ ಸಂಪಾದಿಸ ಬಹುದು. ರಾತ್ರಿ ಒಂದು ಹೊತ್ತಿನ ಊಟ ದೊರೆಯಲಿದೆ.

ಸಮೀಕ್ಷೆಯಿಂದ ಬೆಳಕಿಗೆ ಬಂದ ಅಂಶ: ರಾಜ್ಯದ 15 ಜಿಲ್ಲೆಗಳಲ್ಲಿ ಒಟ್ಟು 964 ಹಳ್ಳಿಗಳಲ್ಲಿ 3387 ಬಿಟ್ಟಿ ಚಾಕ್ರಿ ಮಾಡುವ ಕುಟುಂಬಗಳನ್ನು ಗುರುತಿಸಲಾಗಿದೆ. ಉ.ಕ.ದ ಎಲ್ಲ ಜಿಲ್ಲೆಗಳಲ್ಲಿ 15 ಸಾವಿರ ದಲಿತ ಕುಟುಂಬಗಳು ಈ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿವೆ. 11 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳು ಈಗಲೂ ವಿಶೇಷ ಸಂದರ್ಭದಲ್ಲಿ ಬಿಟ್ಟಿ ಚಾಕ್ರಿ ಮಾಡುತ್ತಿದ್ದಾರೆ.

ಬೀದರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ (682 ಮಂದಿ) ಬಿಟ್ಟಿ ಚಾಕ್ರಿ ಮಾಡುವವರಿದ್ದಾರೆ. ದಾವಣಗೆರೆಯಲ್ಲಿ ಅತಿ ಕಡಿಮೆ (39 ಮಂದಿ) ಸಂಖ್ಯೆಯಲ್ಲಿದ್ದಾರೆ. ಬೆಳಗಾವಿಯಲ್ಲಿ 424, ಹಾವೇರಿಯಲ್ಲಿ 409, ಬಾಗಲಕೋಟೆಯಲ್ಲಿ 388, ಧಾರವಾಡದಲ್ಲಿ 314,ಗದಗದಲ್ಲಿ 241, ಚಿತ್ರದುರ್ಗದಲ್ಲಿ 164, ಕಲಬುರಗಿಯಲ್ಲಿ 155,ರಾಯಚೂರಿನಲ್ಲಿ 117 ಮಂದಿ ಬಿಟ್ಟಿ ಚಾಕ್ರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಬೇಡಿಕೆಗಳು: ಸಮಾಜ ಕಲ್ಯಾಣ, ಕಾರ್ಮಿಕ ಹಾಗೂ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌ ಇಲಾಖೆ ಬಿಟ್ಟಿ ಚಾಕ್ರಿ ಬಗ್ಗೆ ಸೂಕ್ತ ನಿಲುವು ತಾಳಿ, ಇದಕ್ಕಾಗಿ ಕ್ರಿಯಾಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಇದನ್ನು ಜೀತಪದಟಛಿತಿ ರದಟಛಿತಿ ಕಾನೂನಿನಡಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಬಿಟ್ಟಿ ಚಾಕ್ರಿ ಮಾಡುವವರಿಗಾಗಿ ಪ್ರತ್ಯೇಕ ಯೋಜನೆ ರೂಪಿಸಬೇಕು.

ಬಿಟ್ಟಿ ಚಾಕ್ರಿ ಮಾಡುವವರಿಗೆ 5 ಎಕರೆ ಕೃಷಿ ಭೂಮಿಯನ್ನು ನೀಡಿ, ಅಗತ್ಯ ಪರಿಕರಗಳನ್ನು ಒದಗಿಸಬೇಕು. ಸ್ವ ಉದ್ಯೋಗ ನೆರವು ನೀಡಬೇಕು. ಕುಟುಂಬದ ಎಲ್ಲ ವಯಸ್ಕರರಿಗೆ ಎನ್‌ಆರ್‌ಇಜಿಎ
ಅಡಿ 200 ದಿನ ಉದ್ಯೋಗ ನೀಡಬೇಕು. ಪ್ರತಿ ಕುಟುಂಬಕ್ಕೆ ಸಮಾನ ಧಾನಕರ ವಸತಿ ನಿರ್ಮಾಣಕ್ಕೆ ಸಹಾಯ ಮಾಡಬೇಕು. ಈ ಸಮು ದಾಯದ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ವಸತಿ
ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಬೇಕು. ಅನಕ್ಷರಸ್ಥರಿಗೆ ವಯಸ್ಕರ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಬಿಟ್ಟಿ ಚಾಕ್ರಿ ವ್ಯವಸ್ಥೆಯಲ್ಲಿರುವ ಸಂತ್ರಸ್ತರು ಬೇಡಿಕೆಗಳನ್ನಿಟ್ಟರು.

ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಟ್ಟಿ ಚಾಕ್ರಿ ಪದ್ಧತಿಯನ್ನು ವಿಮುಕ್ತಿಗೊಳಿಸಲು ಕಾನೂನಿನ ಅಗತ್ಯವಿದ್ದರೆ ಅದನ್ನೂ ರೂಪಿಸಲಾಗುವುದು.
● ಎಲ್‌.ಕೆ.ಅತೀಕ್‌, ಗ್ರಾಮೀಣಾಭಿವೃದ್ಧಿ , ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ

ಬೆಳಗಾವಿಯ ಜಾನುಕೊಪ್ಪ ಎಂಬ ಗ್ರಾಮದಿಂದ ಬಿಟ್ಟಿ ಚಾಕ್ರಿ ಮಾಡುವ ವ್ಯಕ್ತಿಯನ್ನು ಅದರಿಂದ ಹೊರ ತರಲು ಸಾಧ್ಯವಾಗಿಲ್ಲ. ಆ ಊರಿನಲ್ಲಿ ಬಹುತೇಕ ಮಾಜಿ ಶಾಸಕರ ಮನೆಯಲ್ಲಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರ ಮನೆಗಳಲ್ಲಿ ಬಿಟ್ಟಿ ಚಾಕ್ರಿ ಮಾಡುತ್ತಿದ್ದಾರೆ. ಇದಕ್ಕೆ ಅಲ್ಲಿನ ರಾಜಕಾರಣಿಗಹ್ಯಾರೂ ಆಕ್ಷೇಪ ಎತ್ತಿಲ್ಲ ಎಂಬುದು ದುರದೃಷ್ಟಕರ.
● ನಾಗಪ್ಪ ಮಾದಿಗ, ಬಿಟ್ಟಿ ಚಾಕ್ರಿ ವ್ಯವಸ್ಥೆಗೆ ಒಳಗಾದವರು

Advertisement

Udayavani is now on Telegram. Click here to join our channel and stay updated with the latest news.

Next