Advertisement
ಬೇಕಾಗುವ ಸಾಮಗ್ರಿಗಳುಹಾಗಲಕಾಯಿ-1, ಬೇಯಿಸಿದ ಆಲೂಗಡ್ಡೆ (ಬಟಾಟೆ)-2 , ತುರಿದ ಕ್ಯಾರೆಟ್-ಅರ್ಧ ಕಪ್, ಬೇಯಿಸಿದ ಹಸಿ ಬಟಾಣಿ-5ಚಮಚ, ಅಮ್ಚೂರ್ ಪುಡಿ-1ಟೀ ಸ್ಪೂನ್, ಖಾರದ ಪುಡಿ-1ಚಮಚ, ಧನಿಯಾ ಪುಡಿ-ಅರ್ಧ ಚಮಚ, ಹಸಿಮೆಣಸು-2. ಬಾಂಬೆ ರವೆ-ಸ್ವಲ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು.
ಹಾಗಲಕಾಯಿ ತಿರುಳು ತೆಗೆದು ತುರಿದುಕೊಳ್ಳಿ. ತದನಂತರ ಒಂದು ಬೌಲ್‌ಗೆ ಹಾಗಲಕಾಯಿಯ ತುರಿ ಮತ್ತು ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಮತ್ತೊಂದು ಪಾತ್ರೆಗೆ ಬೇಯಿಸಿದ ಬಟಾಟೆ, ತುರಿದಿಟ್ಟ ಕ್ಯಾರೆಟ್, ಬೇಯಿಸಿದ ಹಸಿ ಬಟಾಣಿ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ತುರಿದಿಟ್ಟ ಹಾಗಲಕಾಯಿ, ಧನಿಯಾ ಪುಡಿ, ಅಮ್ಚೂರ್ ಪುಡಿ, ಖಾರದ ಪುಡಿ, ಹಸಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿ. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆ ಕಟ್ಟಿ, ತುಸು ಒತ್ತಿ ಚಪ್ಪಟೆ ಮಾಡಿ ರವೆಯಲ್ಲಿ ಹೊರಳಿಸಿ ತೆಗೆಯಿರಿ. ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಎಣ್ಣೆ ಸವರಿ ಕಾದ ನಂತರ 4ರಿಂದ 5 ಕಟ್ಲೆಟ್ ಗಳನ್ನಿಟ್ಟು ಎರಡೂ ಬದಿ ಹುರಿಯಿರಿ ನೀವು ಇದನ್ನು ಎಣ್ಣೆಯಲ್ಲಿಯೂ ಸಹ ಕರಿದು ತೆಗೆಯಬಹುದು). ಟೊಮೆಟೋ ಸಾಸ್ ಜೊತೆಗೆ ಬಿಸಿ ಬಿಸಿಯಾದ ಹಾಗಲಕಾಯಿ ಕಟ್ಲೆಟ್ ಸವಿಯಿರಿ. ಸೂಚನೆ: ಕಟ್ಲೆಟ್ ಕೋಟಿಂಗ್ ಗೆ ರವೆ ಬದಲಿಗೆ ಬ್ರೆಡ್ ಕ್ರಂಬ್ಸ್ ಸಹ ಬಳಸಬಹುದು.