Advertisement

ಪೊಲೀಸ್‌ ವ್ಯಾಲೆಟ್‌ನಲ್ಲಿ ಬಿಟ್‌ಕಾಯಿನ್‌ ಸೇಫ್

09:59 AM Nov 19, 2021 | Team Udayavani |

ಬೆಂಗಳೂರು: ಬಿಟ್‌ಕಾಯಿನ್‌ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಕೆಲ ದಿನಗಳ ಹಿಂದಷ್ಟೇ ಪ್ರಕರ ಣದ ರೂವಾರಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯಿಂದ ಯಾವುದೇ ಬಿಟ್‌ಕಾಯಿನ್‌ ಅಥವಾ ಕ್ರಿಪ್ಟೋಕರೆನ್ಸಿ ವಶಕ್ಕೆ ಪಡೆದುಕೊಂಡಿಲ್ಲ ಎಂದಿದ್ದ ನಗರ ಪೊಲೀಸರು, ಇದೀಗ ಶ್ರೀಕಿಯ ಸ್ನೇಹಿತ ಪಶ್ಚಿಮ ಬಂಗಾಳ ಮೂಲದ ರಾಬಿನ್‌ ಖಂಡೆಲ್‌ವಾಲ್‌ನಿಂದ 0.08 ಬಿಟ್‌ಕಾಯಿನ್‌ ಮತ್ತು ಮೂರು ಕ್ರಿಪ್ಟೋ ಕರೆನ್ಸಿಗಳನ್ನು (2,50,438 ರೂ. ಮೌಲ್ಯದ) ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

Advertisement

ಇತ್ತೀಚೆಗೆ ಪೊಲೀಸರು ಶ್ರೀಕಿ ಮತ್ತು ಆತನ ಸ್ನೇಹಿತನಿಂದ ವಶಕ್ಕೆ ಪಡೆದ ಬಿಟ್‌ಕಾಯಿನ್‌ಗಳನ್ನು ಪೊಲೀಸರು ಕಳವು ಮಾಡಿ ದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ. ಪ್ರಮುಖವಾಗಿ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ 0.08 ಬಿಟ್‌ಕಾಯಿನ್‌ ವಂಚನೆ ಪ್ರಕರಣ ಸಂಬಂಧ ಆ ಬಿಟ್‌ ಕಾಯಿನ್‌ಗಳು ಕಣ್ಮರೆಯಾಗಿದೆ ಎಂದು ಸುದ್ದಿಗಳು ಬಿತ್ತರವಾಗುತ್ತಿವೆ. ಆದರೆ, ಅದು ಶುದ್ಧ ಸುಳ್ಳು.

ವಶಕ್ಕೆ ಪಡೆದುಕೊಂಡಿರುವ ಬಿಟ್‌ ಕಾಯಿನ್‌ಗಳು “ಪೊಲೀಸ್‌ ವ್ಯಾಲೆಟ್‌’ನಲ್ಲಿ ಸುರಕ್ಷಿತವಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಸ್ಪಷ್ಟಪಡಿಸಿದ್ದಾರೆ. ಪ್ರಕರಣ ಸಂಬಂಧ ಬಿಟ್‌ಕಾಯಿನ್‌ ಹ್ಯಾಕಿಂಗ್‌ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಸ್ನೇಹಿತ ಪಶ್ಚಿಮ ಬಂಗಾಳದ ರಾಬಿನ್‌ ಖಂಡೆಲ್‌ವಾಲ್‌ನ ಖಾತೆಯಿಂದ ಪಂಚರರ ಸಮಕ್ಷಮದಲ್ಲಿ 0.08 ಬಿಟ್‌ಕಾಯಿನ್‌ ಹಾಗೂ ಮೂರು ಕ್ರಿಪ್ಟೋಕರೆನ್ಸಿಯನ್ನು ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ:- ಚಿತ್ರದುರ್ಗ: ಗೋಡೆ ಕುಸಿತ; ಮೂರು ಜನರ ಸಾವು

ಅದನ್ನು ಆತ ಖಾತೆಯಿಂದ ಪೊಲೀಸ್‌ ವ್ಯಾಲೆಟ್‌ ವರ್ಗಾಯಿಸಲಾಗಿದೆ. ಈ ವಿಷಯವನ್ನು ನ್ಯಾಯಾಲಯಕ್ಕೂ ತಿಳಿಸಲಾಗಿದೆ. ಅಲ್ಲದೆ, ನ್ಯಾಯಾಲಯದ ವ್ಯಾಪ್ತಿಯಲ್ಲಿ ಈ ಕರೆನ್ಸಿಗಳು ಪೊಲೀಸ್‌ ವ್ಯಾಲೆಟ್‌ನಲ್ಲಿ ಸುರಕ್ಷಿತವಾಗಿದ್ದು, ಈ ಎಲ್ಲ ಮಾಹಿತಿಗಳನ್ನು ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮತ್ತೂಂದೆಡೆ ಯುನೋಕಾಯಿನ್‌ ಸಂಸ್ಥೆ ಬಗ್ಗೆ ಕೆಲವೊಂದು ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಆಯುಕ್ತರು, ಭಾರತದಲ್ಲಿ ಬಿಟ್‌ಕಾಯಿನ್‌ ಎಕ್ಸ್‌ಚೇಂಚ್‌ ಮಾಡುವ ಕೆಲವೇ ಕಂಪನಿಗಳ ಪೈಕಿ ಯುನೋಕಾಯಿನ್ ಕೂಡ ಒಂದು.‌

Advertisement

ಈ ಕಂಪನಿಯೂ ಕಾನೂನು ಬದ್ಧವಾಗಿ ತೆರಿಗೆಗಳನ್ನು ಪಾವತಿಸಿದೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಉತ್ತರದಲ್ಲಿ ನೀಡಲಾಗಿದೆ. ಹೀಗಾಗಿ ಈ ಕಂಪನಿಯನ್ನು ಪ್ರಕರಣದ ತನಿಖೆ ವೇಳೆ ಸಹಾಯ ಮಾಡಿ ದ್ದಾರೆ. ಈ ಮಧ್ಯೆ ಈ ಸಂಸ್ಥೆಯ ಖಾತೆ ಯನ್ನು ಹ್ಯಾಕ್‌ ಮಾಡಲಾಗಿದ್ದು, ಸಣ್ಣ ಪ್ರಮಾಣದಲ್ಲಿ ಹಣ ಕಳೆದುಕೊಂಡಿದೆ. ಆ ಕಾರಣಕ್ಕಾಗಿ ತನಿಖೆಗೆ ಸಹಕರಿಸಲು ಈ ಕಂಪನಿ ಅನರ್ಹ ಎಂದು ಹೇಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಯುನೋಕಾಯಿನ್‌ ಕಂಪನಿ ಆರೋಪಿಯಲ್ಲ. ಬಲಿಪಶು ಆಯುಕ್ತರು ವಿವರಿಸಿದ್ದಾರೆ.

ಸಿದ್ಧರಾಮಯ್ಯ ಆರೋಪ ಸಾಬೀತುಪಡಿಸಲಿ

ಬೆಂಗಳೂರು: ಬಿಟ್‌ ಕಾಯಿನ್‌ ವಿಚಾರದಲ್ಲಿ ರಾಜಕೀಯ ಮುಖಂಡರು, ತನಿಖಾಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ಸಿದ್ದರಾಮಯ್ಯ ಅವರು ತಮ್ಮ ಆರೋ ಪಗಳನ್ನು ಸಾಬೀತುಪಡಿಸಲಿ ಎಂದು ಬಿಜೆಪಿ ಶಾಸಕ ಪಿ. ರಾಜೀವ್‌ ಸವಾಲ್‌ ಎಸೆದಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರುತ್ತಿದ್ದಾರೆ ಎಂಬ ತಮ್ಮ ಹೇಳಿಕೆಯಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಬಿಟ್‌ ಕಾಯಿನ್‌ ಕುರಿತು ಟ್ವೀಟ್‌ ಮಾಡಿದ್ದಾರೆ.

ಆದರೆ, ತನಿಖೆ ವಿಚಾರದಲ್ಲಿ ಬಿಜೆಪಿ ಸರ್ಕಾರವು ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಹೇಳಿದರು. ಬಿಟ್‌ ಕಾಯಿನ್‌ ಮತ್ತು ಶ್ರೀಕಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಜನರ ಮುಂದೆ ಬೆತ್ತಲಾಗಿದ್ದು, ಇನ್ನು ಮುಂದೆ ಕಾಂಗ್ರೆಸ್ಸನ್ನು ಜನರು ಯಾವತ್ತೂ ನಂಬುವುದಿಲ್ಲ.

ಇನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಕೇಳಿರುವ ಪ್ರಶ್ನೆ ಅತ್ಯಂತ ಬಾಲಿಶವಾಗಿದೆ.ಎಂದು ಟೀಕಿಸಿದರು. 2018ರಲ್ಲಿ ವಿದ್ವತ್‌ ಮೇಲೆ ಶಾಸಕ ಹ್ಯಾರಿಸ್‌ ಮಗ ಮಹಮ್ಮದ್‌ ನಲಪಾಡ್‌ ನಡೆಸಿದ್ದ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಪ್ರಕರಣದ ಮೂರನೇ ಆರೋಪಿಯಾಗಿದ್ದರು. ಅಂದೇ ಶ್ರೀಕಿಯಿಂದ ಸ್ವ ಇಚ್ಛೆಯಿಂದ ಹೇಳಿಕೆ ಪಡೆದಿದ್ದರೆ, ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಶ್ರೀಕಿಯನ್ನು ಬಿಟ್ಟಿದ್ದರಿಂದಲೇ ಈ ಅಪರಾಧ ಪ್ರಕರಣ ನಡೆಯಲು ಕಾರಣವಾಗಿದೆ ಎಂದು ಟೀಕಿಸಿದರು.

ಅಂದಿನ ಚಾರ್ಜ್‌ಶೀಟ್‌ನಲ್ಲಿ ಶ್ರೀಕಿ ತಲೆಮರೆಸಿ ಕೊಂಡಿದ್ದಾನೆ ಎಂದು ಆತನ ಹೆಸರನ್ನು ಕೈಬಿಡ ಲಾಗಿತ್ತು. ಹಾಗಾದರೆ, ಶ್ರೀಕಿ ಅಷ್ಟು ಪ್ರಭಾವಿ ವ್ಯಕ್ತಿಯೇ ಎಂದು ಪ್ರಶ್ನಿಸಿದ ರಾಜೀವ್‌, ಪೊಲೀಸರ ಮುಂದೆ ಹಾಜರಾಗದೆ, ಖಾಸಗಿ ವಿಮಾನದಲ್ಲಿ ಓಡಾಡಿಸುವ ಅಗತ್ಯವೇನಿತ್ತು ಎಂದು ವಾಗ್ಧಾಳಿ ನಡೆಸಿದರು. ಅಲ್ಲದೆ, ಪ್ರಕರಣದಲ್ಲಿ ಶ್ರೀಕಿ ಷರತ್ತುಬದ್ಧ ಜಾಮೀನು ಪಡೆದಿದ್ದಾನೆ. ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಕೇವಲ 20 ನಿಮಿಷವಿದ್ದ ಶ್ರೀಕಿ ವಿಚಾರಣೆಯನ್ನೇ ನಡೆಸಿರುವುದಿಲ್ಲ. ಅಷ್ಟು ಒತ್ತಡದಿಂದ ಪೊಲೀಸರಿಂದ ವಾಪಸ್‌ ಕರೆಸಲು ಯಾರು ಕಾರಣವೆಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ 2020ರ ನ.4ರಂದು ವಿದೇಶದಿಂದ ಅಕ್ರಮವಾಗಿ ತಂದಿದ್ದ ಹೈಡ್ರೋ ಗಾಂಜಾ ಮಾಹಿತಿ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಲಾಗಿದೆ. ತನಿಖೆ ವೇಳೆ ವೆಬ್‌ಸೈಟ್‌ ಹ್ಯಾಕರ್‌, ಆನ್‌ ಲೈನ್‌ ಗೇಮ್‌ ಹ್ಯಾಕರ್‌, ಕ್ರಿಪ್ಟೋ ಕರೆನ್ಸಿ ಹ್ಯಾಕರ್‌ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನು ಕಾಂಗ್ರೆಸ್‌ನವರು ತಿಳಿದುಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next