ರಾಮನಗರ: ಬಿಡ್ ಕಾಯಿನ್ ಆಸೆ ತೋರಿಸಿ 1.93 ಲಕ್ಷ ರೂ. ಹಣವನ್ನು ಆನ್‌ಲೈನ್ ವಂಚಕರು ಎಂಜಿನಿಯರ್ ಒಬ್ಬರಿಗೆ ವಂಚಿಸಿರುವ ಘಟನೆ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದ ಸುಧಾರಾಣಿ ಎಂಬುವರಿಗೆ ಆನ್‌ಲೈನ್ ವಂಚಕರು ವಾಟ್ಸಪ್‌ನಲ್ಲಿ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡುವಂತೆ ಮೆಸೇಜ್ ಕಳುಹಿಸಿದ್ದಾರೆ. ಇವರು 1000 ರೂ. ಹಣವನ್ನು ಹೂಡಿಕೆ ಮಾಡಿ ದ್ದಾರೆ. ನಿಮ್ಮ ಹಣಕ್ಕೆ 10 ಲಕ್ಷ ರೂ. ಲಾಭ ಬಂದಿ ದೆ. ಈ ಹಣವನ್ನು ತೆಗೆದುಕೊಳ್ಳಲು ಶೇ.12ರಷ್ಟು ಹಣವನ್ನು ಶುಲ್ಕವಾಗಿ ಪಾವತಿ ಸಬೇಕು ಎಂದು ನಂಬಿಸಿ ಇವರಿಂದ ವಿವಿಧ ಕಂತುಗಳಲ್ಲಿ 1.93 ಲಕ್ಷ ರೂ. ಹಣವನ್ನು ಪೇಟಿಎಂ ಮೂಲಕ ಪಾವತಿ ಮಾಡಿಸಿ ಕೊಂಡಿ ದ್ದಾರೆ. ಕೆಲ ದಿನಗಳ ಬಳಿಕ ಹಣ ಹಾಕಿಸಿಕೊಂಡ ದೂರ ವಾಣಿ ಸಂಖ್ಯೆ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆ ಯಲ್ಲಿ ಮೋಸ ಹೋಗಿರುವುದು ಅರಿವಿಗೆ ಬಂದ ಸುಧಾರಾಣಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕುದೂರು: 75 ಸಾವಿರ ರೂ. ವಂಚನೆ:
ರಾಮನಗರ: ನಿಮ್ಮ ಪಾನ್ ಕಾರ್ಡ್ ಬ್ಲಾಕ್ ಆಗಿದೆ ಎಂದು ಹೇಳಿ ಮೊಬೈಲ್ ಫೋನ್‌ಗೆ ಲಿಂಕ್ ಕಳುಹಿಸಿ ಗ್ರಾಹಕರ ಖಾತೆಯಲ್ಲಿದ್ದ 75,000 ರೂ. ನಗದನ್ನು ಡ್ರಾ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಕುದೂರಿನಲ್ಲಿ ನಡೆದಿದೆ.
ಕುದೂರಿನ ನಿವಾಸಿ ರೇಣುಕಾರಾಧ್ಯ ಎಂಬುವರಿಗೆ ಅನಾಮಿಕ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಪಾನ್ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ಸರಿಪಡಿಸುತ್ತೇವೆ. ಈ ಕೆಳಗೆ ಕಳುಹಿಸಿರುವ ಲಿಂಕ್ ಅನ್ನು ಒತ್ತಿ ಎಂದು ಹೇಳಿದ್ದಾರೆ. ಅವರು ಹೇಳಿದಂತೆ ಲಿಂಕ್ ಹೊತ್ತುತ್ತಿದ್ದಂತೆ ರೇಣುಕಾರಾಧ್ಯ ಅವರ ಖಾತೆಯಲ್ಲಿದ್ದ 75 ಸಾವಿರ ರೂ. ನಗದನ್ನು ಡ್ರಾ ಮಾಡಿಕೊಂಡಿ ದ್ದಾರೆ. ಈ ಸಂಬಂಧ ರೇಣುಕಾರಾಧ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದೆ.