Advertisement

ಭಾರೀ ಪ್ರಮಾಣದ ಕುಸಿತ ಕಂಡ ಬಿಟ್‌ಕಾಯಿನ್‌ ಮೌಲ್ಯ

10:13 PM Jun 19, 2022 | Team Udayavani |

ವಾಷಿಂಗ್ಟನ್‌: ಪ್ರಸಿದ್ಧ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್‌ಕಾಯಿನ್‌ ಬೆಲೆಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡುಬಂದಿದೆ.

Advertisement

ಕ್ರಿಪ್ಟೋ ಮಾರಾಟ ಹೆಚ್ಚಾಗಿರುವ ಹಿನ್ನೆಲೆ ಶನಿವಾರ ಬಿಟ್‌ಕಾಯಿನ್‌ ಬೆಲೆ 20,000 ಡಾಲರ್‌(15.59 ಲಕ್ಷ ರೂ.)ಗಿಂತ ಕೆಳಗಿಳಿದಿದೆ.

2020ರ ನವೆಂಬರ್‌ನಲ್ಲಿ 19,000 ಡಾಲರ್‌(14.82 ಲಕ್ಷ ರೂ.) ಮೌಲ್ಯದಲ್ಲಿದ್ದ ಬಿಟ್‌ಕಾಯಿನ್‌ ಅದಾದ ನಂತರ ಗಣನೀಯ ಪ್ರಮಾಣದಲ್ಲಿ ಮೌಲ್ಯ ಏರಿಸಿಕೊಂಡಿತ್ತು.

ಒಂದು ಬಿಟ್‌ಕಾಯಿನ್‌ ಮೌಲ್ಯ 69,000 ಡಾಲರ್‌(53.78 ಲಕ್ಷ ರೂ.)ವರೆಗೂ ತಲುಪಿತ್ತು. ಇದೀಗ ಬಿಟ್‌ಕಾಯಿನ್‌ ಜತೆಯಲ್ಲಿ ಎಥೆರಂ ಕ್ರಿಪ್ಟೋ ಬೆಲೆಯಲ್ಲೂ ಕುಸಿತ ಉಂಟಾಗಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next