Advertisement

ಪ್ರೇಮಿಯ ಮಾಂಸದಿಂದ ಬಿರಿಯಾನಿ!

06:00 AM Nov 23, 2018 | Team Udayavani |

ಅಬುಧಾಬಿ: ಅಬ್ಬಬ್ಟಾ.. ಹೀಗೂ ಇರ್ತಾರಾ ಎಂದು ಹುಬ್ಬೇರಿಸಿದ್ದರೆ ಅಚ್ಚರಿಯೇನಿಲ್ಲ. ಅಂಥದ್ದೊಂದು ವಿಲಕ್ಷಣ ಘಟನೆ ಅಬುಧಾಬಿಯಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯತಮನನ್ನು ಹತ್ಯೆಗೈದು, ಆತನ ದೇಹವನ್ನು ಬೇಯಿಸಿ, ಮೊರೊಕ್ಕನ್‌ ಖಾದ್ಯ ತಯಾರಿಸಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಡಿಸಿದ್ದಾಳೆ. 30 ವಯಸ್ಸಿನ ಅಲ್‌ ಅಯ್ನ ಎಂಬಾಕೆಯೇ ಮಾಜಿ ಗೆಳೆಯನನ್ನು ಕೊಂದು ಭಕ್ಷ್ಯ ತಯಾರಿಸಿ ಹಂಚಿದ “ರಾಕ್ಷಸಿ’.

Advertisement

ನನ್ನನ್ನು ನಿರ್ಲಕ್ಷಿಸತೊಡಗಿದ್ದಕ್ಕೆ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿ ಖಾದ್ಯ ತಯಾರಿಸಿದೆ ಎಂದು ಆಕೆ ತಪ್ಪೊಪ್ಪಿಕೊಂಡಿರುವುದಾಗಿ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ. ಆಕೆಯ ಮನೆಯಲ್ಲಿದ್ದ ಮಿಕ್ಸಿ ಜಾರ್‌ನಲ್ಲಿ ಮೃತನ ಹಲ್ಲುಗಳು ಸಿಕ್ಕಿದ್ದು, ಅದರಿಂದಲೇ ಈ ವಿಚಾರ ಬೆಳಕಿಗೆ ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next