Advertisement

ಶ್ರೀ ಮುರಳಿಗೆ ಬರ್ತ್‌ಡೇ ಸಂಭ್ರಮ

12:07 PM Dec 17, 2020 | Adarsha |

ಸಂಭ್ರಮ ನಟ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಅವರಿಗೆ ಇಂದು ಬರ್ತ್‌ಡೇ ಸಂಭ್ರಮ. ಜನ್ಮದಿನದ ಆಚರಿಸಿಕೊಳ್ಳುತ್ತಿರುವ ಶ್ರೀಮುರಳಿ ಅವರಿಗೆ ಚಿತ್ರರಂಗ ಮತ್ತು ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿವರ್ಷ ಶ್ರೀಮುರಳಿ ತಮ್ಮ ಹುಟ್ಟುಹಬ್ಬವನ್ನುಕುಟುಂಬ ವರ್ಗದವರು ಮತ್ತು ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಅಂಥ ಅದ್ಧೂರಿ ಆಚರಣೆಗೆ ಕೊರೊನಾ ಬ್ರೇಕ್‌ ಹಾಕಿದೆ.

Advertisement

ಹೌದು, ಕೊರೊನಾ ಆತಂಕದ ಛಾಯೆ ಇನ್ನೂ ಇರುವುದರಿಂದ ಈ ಬಾರಿ ಶ್ರೀಮುರಳಿ ಆದಷ್ಟು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು ತಮ್ಮ ಬರ್ತ್‌ಡೇ ಆಚರಣೆಗೆ ಅಭಿಮಾನಿಗಳು ಜೋರಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ಸೋಶಿಯಲ್‌ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿರುವ ಶ್ರೀಮುರಳಿ ಆದಷ್ಟು ಜನಜಂಗುಳಿ ಸೇರದಂತೆ ನೋಡಿಕೊಂಡು ಸರಳವಾಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ಅಭಿಮಾನಿಗಳು ಇದಕ್ಕೆ ಸಹಕರಿಸುವಂತೆ ಕೋರಿಕೊಂಡಿದ್ದಾರೆ.

ಇದನ್ನೂ ಓದಿ:ಏ.2ಕ್ಕೆ ರಾಬರ್ಟ್‌ ತೆರೆಗೆ?

ಫ‌ಸ್ಟ್‌ಲುಕ್‌, ಟೀಸರ್‌ ರಿಲೀಸ್‌

ಶ್ರೀಮರಳಿ ಅವರ ಜನ್ಮದಿನದ ಪ್ರಯುಕ್ತ ಇಂದು ಬೆಳಗ್ಗೆ 9.09 ಗಂಟೆಗೆ “ಮದಗಜ’ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ರಿಲೀಸ್‌ ಆಗಲಿದೆ. ವಿಶೇಷವೆಂದರೆ, “ಕೆಜಿಎಫ್’ಖ್ಯಾತಿಯ ಪ್ರಶಾಂತ್‌ ನೀಲ್ ಇದನ್ನು ರಿಲೀಸ್‌ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಮುರಳಿ, “ನನ್ನ ಗಾಡ್‌ಫಾದರ್‌ ನಿರ್ದೇಶಕ ಪ್ರಶಾಂತ್‌ ನೀಲ್‌”ಮದಗಜ’ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ರಿಲೀಸ್‌ ಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ. ಉಳಿದಂತೆ ರಮೇಶ್‌ ರೆಡ್ಡಿ ನಿರ್ಮಾಣದ ಹೊಸಚಿತ್ರ ಮತ್ತು ಹೊಂಬಾಳೆ ಫಿಲಂಸ್‌ ನಹೊಸಚಿತ್ರ ಗಳು ಇದೇ ವೇಳೆ ಅನೌನ್ಸ್‌ ಆಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next