ರಾಮನಗರ: ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ, ದೇಶದ ರೈತರ ಪರಿ ಸ್ಥಿತಿ ಅರಿತು ನಾಡಿಗೆ ವಾಪಸಾಗಿ ಮಣ್ಣಿನ ಮಕ್ಕಳ ಪರ ನಿಂತ ಮಹಾನ್ ಚೇತನ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭೈರೇಗೌಡ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಎಂ.ಡಿ.ನಂಜುಂಡ ಸ್ವಾಮಿ ಜನ್ಮ ದಿನಾಚರಣೆ ಕಾರ್ಯ ಕ್ರ ಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರು ರಾಜ್ಯ ರೈತ ಸಂಘ (ಕೆಆರ್‌ಆರ್ ಎಸ್) ಕಟ್ಟಿ ಹೋರಾಟಕ್ಕೆ ಇಳಿಯದಿದ್ದರೇ, ಇಂದು ರೈತರ ಪರಿ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು. ರೈತ ಮಹಾ ನಾಯಕನ ಸ್ಮರಣೆ ಮಾಡುವುದೇ ಇಂದುರೈತರ ಸುದೈವ ಎಂದರು.
ಪ್ರೊ.ಎಂ. ಡಿ. ನಂಜುಂಡ ಸ್ವಾಮಿ ಬುದ್ಧ, ಲೋಹಿಯಾ ವಿಚಾರ ಧಾರೆ ಅರಿತಿದ್ದರು. ಮಹಾತ್ಮ ಗಾಂಧಿ ಅನುಯಾಯಿಯಾಗಿದ್ದರೂ, ರೈತ ಚಳು ವ ಳಿ ಹುಟ್ಟು ಹಾಕಿದ ಮಹಾತ್ಮ ಅವರ ರೈತ ಚಳುವಳಿಯಿಂದಾಗಿಯೇ ಇಂದು ರೈತರು ಕಾಯಕದಲ್ಲಿದ್ದಾರೆ. ಹೋರಾಟದ ಹಾದಿ ತುಳಿಯದಿದ್ದರೆ , ಈ ಸರ್ಕಾರಗಳು ರೈತ ರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಿದ್ದರು ಎಂದು ಬೇಸರಿಸಿದರು.
ಡಬ್ಲ್ಯೂಟಿಒ ವಿರು ದ್ಧ ಪ್ರತಿಭಟನೆ: ವಿಶ್ವ ವಾಣಿಜ್ಯ ಸಂಘ ಸ್ಥಾಪನೆ, ಅದರ ಮೂಲ ಉದ್ದೇ ಶಗಳಿಂದ ಕೃಷಿ ಕ್ಷೇತ್ರದ ಮೇಲಾಗುವ ಪರಿಣಾಮ ಅಧ್ಯಯನ ಮಾಡಿದ ಪ್ರೊ.ನಂಜುಂಡ ಸ್ವಾ ಮಿ ಡಬ್ಲ್ಯೂಟಿಒ ವಿರುದ್ಧ ಧ್ವನಿ ಎತ್ತಿದ್ದ ಮೊದಲ ರೈತ ಮುಖಂಡ. ಅವರು ಕಟ್ಟಿದ ರಾಜ್ಯ ರೈತ ಸಂಘ ಇಂದು ರೈತರ ಹೋರಾಟಕ್ಕೆ ಮಾರ್ಗದರ್ಶಕ ಸಂಸ್ಥೆಯಾಗಿದೆ. ಪ್ರೊ. ಎಂ. ಡಿ. ನಂಜುಂಡ ಸ್ವಾಮಿ ವಿಚಾರಧಾ ರೆ ಗಳು ಇಂದಿಗೂ ಪ್ರಸ್ತು ತ ಎಂದರು.
ರೈತನಿಗೆ ಸರ್ಕಾರವೇ ಬಾಕಿದಾರ?: ರೈತ ಸಾಲಗಾರನಲ್ಲ. ಸರ್ಕಾ ರವೇ ಬಾಕಿ ದಾರ ಎಂದು ಸಾರಿ ಹೇಳಿದ್ದು ನಂಜುಂಡಸ್ವಾ ಮಿ. ಸ್ವಾಮಿ ನಾಥನ್ ವರದಿ ಪ್ರಕಾರ ಕ್ವಿಂಟಲ್ ರಾಗಿಗೆ 6 ಸಾವಿ ರ ರೂ. ದರ ನಿಗದಿ ಮಾಡ ಬೇಕು ಎಂದು ರೈತರು ಆಗ್ರ ಹಿಸಿದ್ದಾರೆ. ಆದರೆ, ರೈತರಿಗೆ ಸದ್ಯ ಸಿಗುತ್ತಿರುವುದು ಕ್ವಿಂಟಲ್‌ಗೆ 3,300 ರೂ. ಅಂದರೆ 2,700 ರೂ. ನಷ್ಟ ರೈತ ರಿಗೆ. ನಷ್ಟದ ನಡುವೆಯೂ ರೈತರು ಆಹಾವನ್ನು ನಾಡಿನ ಜನರಿ ಗಾಗಿ ಬೆಳೆಯುತ್ತಿದ್ದಾರೆ. ಹೀಗಾ ಗಿಯೇ ನಂಜುಂಡ ಸ್ವಾಮಿ ಸರ್ಕಾ ರವೇ ಬಾಕೀದಾರ ಎಂದು ಹೇಳಿದ್ದಾರೆ. ಅವರು ಕಟ್ಟಿದ ರೈತ ಸಂಘ ನಾಡಿನ ರೈತರಿಗೆ ಕೊಟ್ಟ ಕೊಡುಗೆ ಎಂದು ಸ್ಮರಿಸಿದರು.
ರೈತರು ಪ್ರೊ.ಎಂ. ಡಿ. ನಂಜುಂಡಸ್ವಾಮಿ ಭಾವಚಿ ತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ರೈತ ಪ್ರಮುಖರಾದ ಸೀಬ ಕಟ್ಟೆ ಕೃಷ್ಣಪ್ಪ, ನಾಗಮ್ಮ, ಲಾಯರ್ ಚಂದ್ರು, ಗಂಗಣ್ಣ ಭತ್ತೆಂಗೆರೆ, ಪಾದರ ಹಳ್ಳಿ ಕೃಷ್ಣಪ್ಪ ಹಾಜರಿದ್ದರು.