ಮೈಸೂರು: ಕಳೆದ ಅಕ್ಟೋಬರ್ ನಲ್ಲಿ ಮೈಸೂರು ಮೃಗಾಲಯಕ್ಕೆ ಜರ್ಮನಿಯಿಂದ ಆಗಮಿಸಿದ್ದ ಡೆಂಬ ಹೆಸರಿನ ಗೊರಿಲ್ಲಾ ತನ್ನ ಒಂಬತ್ತನೆಯ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಿಕೊಂಡಿತು.
ಮೃಗಾಲಯದ ಸಿಬ್ಬಂದಿ ವಿವಿಧ ತರಕಾರಿಗಳನ್ನು ಇಟ್ಟು ಜನುಮ ದಿನಕ್ಕೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದರೆ, ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ವೀಡಿಯೋ, ಫೋಟೊ ಕ್ಲಿಕ್ಕಿಸಿ ಶುಭ ಹಾರೈಸಿದರು.
ಇದನ್ನೂ ಓದಿ:ಏನಿದು ಬೋರಿಸ್ ವಿವಾದ: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿಗೆ ಬ್ರಿಟನ್ ಪ್ರಧಾನಿ ಹುದ್ದೆ?
7 ವರ್ಷದ ನಂತರ: ಮೈಸೂರು ಮೃಗಾಲಯದಲ್ಲಿ 2014ರಲ್ಲಿ ಸಾವಿಗೀಡಾದ ಪೋಲೋ ಹೆಸರಿನ ಗೊರಿಲ್ಲಾದ ನಂತರ ದೇಶದಲ್ಲಿಯೇ ಯಾವ ಮೃಗಾಲಯದಲ್ಲಿಯೂ ಗೊರಿಲ್ಲ ಇರಲಿಲ್ಲ. ಇದೀಗ 7 ವರ್ಷದ ನಂತರ ಜರ್ಮನಿಯಿಂದ 2 ಗಂಡು ಗೊರಿಲ್ಲಾ ತರಲಾಗಿತ್ತು. ತಾಬೊ (14 ವ) ಹಾಗೂ ಡೆಂಬ (8 ವ) ಎಂಬ ಗೊರಿಲ್ಲಾ ಮೈಸೂರು ಮೃಗಾಲಯದ ಅಥಿತಿಯಾಗಿದ್ದು, ಗೊರಿಲ್ಲಾ ಹೊಂದಿರುವ ದೇಶದ ಏಕೈಕ ಮೃಗಾಲಯ ಎಂಬ ಕೀರ್ತಿ ಮೈಸೂರು ಮೃಗಾಲಯಕ್ಕೆ ಲಭಿಸಿದೆ.