Advertisement

ಬರ್ತ್‌ಡೇ ಬಾಯ್‌ ಪ್ರಮೋದ್‌ ಸಿಕ್ಕಾಪಟ್ಟೆ ಬಿಝಿ

03:37 PM Jan 10, 2021 | Team Udayavani |

ಕೆಲವು ನಾಯಕ ನಟರು ಆರಂಭದಲ್ಲೇ ಭರವಸೆ ಮೂಡಿಸುತ್ತಾರೆ. ಆ ತರಹದ ಭರವಸೆ ಮೂಡಿಸಿದ ನವನಟ ಪ್ರಮೋದ್‌. ಯಾರು ಈ ಪ್ರಮೋದ್‌ ಎಂದರೆ “ಪ್ರೀಮಿಯರ್‌ ಪದ್ಮಿನಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ನಟ. ಈಗ ಪ್ರಮೋದ್‌ ಬಿಝಿ ಯುವ ನಟರ ಪಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆಂದರೆ ತಪ್ಪಲ್ಲ. ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ
ಪ್ರಮೋದ್‌ ಕೈಯಲ್ಲಿ ಸದ್ಯ ಎಂಟು ಸಿನಿಮಾಗಳಿವೆ. ಇದರಲ್ಲಿ ಕೆಲವು ಸಿನಿಮಾಗಳು ಇಂದು ಸಿನಿಮಾದ ಫ‌ಸ್ಟ್‌ಲುಕ್‌, ಪೋಸ್ಟರ್‌ ಲಾಂಚ್‌ ಮಾಡುವ ಮೂಲಕ ಚಿತ್ರ ಶುಭಕೋರಲಿವೆ.

Advertisement

ಪ್ರಮೋದ್‌ ಕೈಯಲ್ಲಿರುವ ಸಿನಿಮಾಗಳು ಯಾವ್ಯಾವು ಎಂದು ನೀವು ಕೇಳಬಹುದು. ಧನಂಜಯ್‌ ನಾಯಕರಾಗಿರುವ “ರತ್ನನ್‌ ಪ್ರಪಂಚ’ ಸಿನಿಮಾದಲ್ಲಿ ಸೆಕೆಂಡ್‌ ಲೀಡ್‌ ಮಾಡುತ್ತಿದ್ದಾರೆ. ಮಿಕ್ಕಂತೆ ಎಲ್ಲಾ ಚಿತ್ರಗಳಲ್ಲೂ ಹೀರೋ ಆಗಿ ನಟಿಸುತ್ತಿದ್ದಾರೆ. “ಇಂಗ್ಲೀಷ್‌ ಮಂಜ’, ಡಿಸೈನರ್‌ ಅವೀಸ್‌ ನಿರ್ದೇಶನದ ಚಿತ್ರ, ಗೀತರಚನೆಕಾರ ಸಂತೋಷ್‌ ನಾಯಕ್‌ ನಿರ್ದೇಶನದ ಹೊಸ ಚಿತ್ರ ಜೊತೆಗೆ “ಅಲಂಕಾರ್‌ ವಿದ್ಯಾರ್ಥಿ’, “ಪ್ರೀಮಿಯರ್‌ ಪದ್ಮಿನಿ-2′ ಹಾಗೂ ಇದರ ಜೊತೆಗೆ ಇನ್ನೂ ಎರಡು ಚಿತ್ರಗಳು ಕೈಯಲ್ಲಿವೆ. ಈ ಮೂಲಕ ಪ್ರಮೋದ್‌ ಬಿಝಿ ನವನಟರ ಸಾಲಿಗೆ ಸೇರಿದಂತಾಗಿದೆ. “ತುಂಬಾ ಖುಷಿಯಾಗುತ್ತಿದೆ.

ಇದನ್ನೂ ಓದಿ:ಶ್ರೀನಿಧಿ ಶೆಟ್ಟಿ ಗೆ ಡಬಲ್‌ ಖುಷಿ ಕೋಬ್ರಾ ಟೀಸರ್‌ ರಿಲೀಸ್‌

ವಿಭಿನ್ನವಾದ ಕಥೆಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಈ ಮಟ್ಟಕ್ಕೆ ಸಿನಿಮಾರಂಗ ನನ್ನ ಕೈ ಹಿಡಿಯುತ್ತದೆ ಅಂದುಕೊಂಡಿರಲಿಲ್ಲ. ನನ್ನ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ’ ಎನ್ನುವುದು ಪ್ರಮೋದ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next