Advertisement

ಕುಷ್ಟಗಿ: ವಿಚಿತ್ರ ಕರು ಜನನ

12:49 PM Oct 07, 2022 | Team Udayavani |

ಕುಷ್ಟಗಿ: ಹಸುವೊಂದು ಎರಡು ಮೂಗಿನ ವಿಚಿತ್ರ ಕರುವಿಗೆ ಜನ್ಮ ನೀಡಿದ ಘಟನೆ ತಾಲೂಕಿನ ಮುದೇನೂರು ಗ್ರಾಮದ ಗ್ರಾ.ಪಂ. ಸದಸ್ಯ ಹುಸೇನಪ್ಪ ಮುದೇನೂರು ಅವರ ಮನೆಯಲ್ಲಿ ಅ.6 ರ ಗುರುವಾರ ನಡೆದಿದೆ.

Advertisement

ಈ ಕರು ಸಾಮಾನ್ಯ ಕರುವಿಗಿಂತ ಭಿನ್ನವಾಗಿದೆ. ಈ ವಿಚಿತ್ರ ಕರುವಿಗೆ ಎರಡು ಮೂಗುಗಳಿದ್ದು, ನಾಲ್ಕು ಹೊಳ್ಳೆಗಳಿವೆ. ಇದು ನಾಲ್ಕು ಹೊಳ್ಳೆಯ ಮೂಲಕ ಉಸಿರಾಡುತ್ತಿರುವುದೇ ವಿಶೇಷ. ಕರು ಲವಲವಿಕೆಯಿಂದ ಇದ್ದು, ವಿಚಿತ್ರ ಕರು ಗಮನಾರ್ಹವೆನಿಸಿದೆ.

ಈ ವಿಚಿತ್ರ ಕರು ನೋಡಿ ಸ್ಥಳೀಯರು ಬೆರಗಾಗಿದ್ದು, ದೈವೀ ಸ್ವರೂಪ ಎಂದು ಬಣ್ಣಿಸುತ್ತಿದ್ದಾರೆ. ಈ ಕುರಿತು ಪಶು ವೈದ್ಯಾಧಿಕಾರಿ ಡಾ.ಚವ್ಹಾಣ್ ಅವರು ನೂರಕ್ಕೆ ಒಂದರಂತೆ ಈ ರೀತಿಯ ವಿಚಿತ್ರ ಕರು ಜನಿಸುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next