ಮಂಡ್ಯ: ಜಿಲ್ಲೆಯಲ್ಲಿ ಜನನ-ಮರಣಗಳ ನೋಂದ ಣಿ ಕಡ್ಡಾಯವಾಗಿ ನಡೆಯುವಂತೆ ನೋಡಿ ಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಎಸ್.ಅಶ್ವಥಿ ಅ ಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಧಿಕಾರಿ ಗಳ ಕಚೇರಿ ಸಭಾಂಗಣದಲ್ಲಿ ಜನನ-ಮರಣ ನೋಂದಣಿ ಕುರಿತು ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗರಿಕ ಜನನ-ಮರಣ ನೋಂದಣಿ ಕಡ್ಡಾಯವಾಗಿದೆ.
ಇದನ್ನೂ ಓದಿ:- ಯುಎಸ್ ಮ್ಯೂಸಿಕ್ ಫೆಸ್ಟ್ ನಲ್ಲಿ ಭಾರಿ ಘರ್ಷಣೆ: 8 ಬಲಿ
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಗುವ ಜನನ-ಮರಣಗಳ ಬಗ್ಗೆ ತಪ್ಪದೇ ನೋಂದಣಿ ಮಾಡಿಕೊಳ್ಳುವುದರ ಜತೆಗೆ ಸಂಬಂಧಪಟ್ಟವರಿಗೆ ತಕ್ಷಣ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಯಲ್ಲಿ ವಿಳಂಬ ನೋಂದಣಿಯನ್ನು ತಪ್ಪಿಸ ಬೇಕು. ನೋಂದಣಿ ಕಾರ್ಯ ಸಮರ್ಪಕ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕು ಎಂದರು.
ದೃಢೀಕರಣ: ಗ್ರಾಮಗಳಲ್ಲಿ ಆಗುವ ಜನನ ಮರಣಗಳ ಬಗ್ಗೆ ಅಧಿ ಕೃತ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತೆಯರ ಮತ್ತು ಆರೋಗ್ಯ ಸಹಾಯಕಿಯರ ದೃಢೀಕರಣ ಪಡೆದು ಆಯಾ ಗ್ರಾಮ ಲೆಕ್ಕಿಗರು ನೋಂದಣಿ ಮಾಡಿಸಿಕೊಳ್ಳಬೇಕು. ಜನನ-ಮರಣ ನೋಂದಣಿ ಮಾಹಿತಿಯು ಪ್ರಮು ಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಶೇ.100ರಷ್ಟು ನೋಂದಣಿಯಾಗುವಂತೆ ಎಚ್ಚರ ವಹಿಸುವಂತೆ ನೋಂದಣಾಧಿ ಕಾರಿಗಳಿಗೆ ಸಲಹೆ ನೀಡಿದರು.
ಸಮನ್ವಯತೆ: ನಾಗರಿಕ ಜನನ-ಮರಣ ಬಗ್ಗೆ ಸಮರ್ಪಕವಾಗಿ ನೋಂದಣಿಯಾಗಲು ಅನುಕೂಲ ವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅ ಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ನಗರಸಭೆ, ಪುರಸಭೆ ಅಧಿ ಕಾರಿಗಳು, ತಹಶೀಲ್ದಾರರು, ಖಾಸಗಿ ಮತ್ತು ಸರ್ಕಾರಿ ವೈದ್ಯಾ ಧಿಕಾರಿಗಳು, ಗ್ರಾಮಲೆಕ್ಕಿಗರು, ತಾಲೂಕು ಆರೋಗ್ಯ ಅಧಿ ಕಾರಿಗಳು ಪರಸ್ಪರ ಸಮನ್ವಯತೆ ಸಾ ಧಿಸಿಕೊಂಡು ಜನನ ಮರಣಗಳ ಬಗ್ಗೆ ಅ ಧಿಕೃತ ಅಂಕಿ ಅಂಶ ಪಡೆದು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಾಗೃತಿ ಮೂಡಿಸಿ: ಸಂಬಂಧಪಟ್ಟ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯಾಗಾರಗಳ ಮೂಲಕ ಈ ಕುರಿತು ಸಂಪೂರ್ಣ ಜಾಗೃತಿ ಹೊಂದಿ ಸಾರ್ವ ಜನಿಕರಲ್ಲಿ ಅರಿವು ಮೂಡಿಸಬೇಕು. ಐಇಸಿ ಚಟುವ ಟಿಕೆಯಡಿ ಕ್ರಿಯಾ ಯೋಜನೆ ತಯಾರಿಸಿ ಸಾರ್ವಜನಿಕರಿಗೆ ಜನನ-ಮರಣ ನೋಂದಣಿ ಬಗ್ಗೆ ಅರಿವು ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಸಾಂಖ್ಯೀಕ ಮಾಹಿತಿ ಸಂಗ್ರಹಿಸಿ: ಪ್ರತಿ ತಿಂಗಳಲ್ಲಿ ಸಂಭವಿಸುವ ಜನನ-ಮರಣ ಘಟನೆಗಳ ಸಾಂಖ್ಯೀಕ ಮಾಹಿತಿಯನ್ನು ಆಯಾ ತಿಂಗಳು ಮುಗಿದ ತಕ್ಷಣ ಸಂಬಂಧಿಸಿದ ನೋಂದಣಾ ಧಿಕಾರಿಗಳಿಗೆ ಸಲ್ಲಿಸ ಬೇಕು. ಸಾರ್ವಜನಿಕರು ಕೂಡ ಜನನ- ಮರಣವಾದ ತಕ್ಷಣ ನೋಂದಣಿ ಮಾಡಿಸಿ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಸಕಾಲಕ್ಕೆ ತಪ್ಪದೇ ಪಡೆಯಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ.ಸಂಜಯ್, ಸಾಂಖ್ಯೀಕ ಅಧಿಕಾರಿ ಶಿವಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜುಮೂರ್ತಿ, ನಗರಸಭೆ ಆಯುಕ್ತ ಲೋಕೇಶ್ ಸೇರಿದಂತೆ ಮತ್ತಿತರರಿದ್ದರು.