Advertisement
ನಗರದ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಡೀಡ್ ಸಂಸ್ಥೆಯು ಟ್ಯಾಲೆಂಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಬಿರ್ಸಾಮುಂಡರ 147 ನೇ ಜಯಂತಿಯಲ್ಲಿ ಮಾತನಾಡಿದ ಅವರು ಆದಿವಾಸಿಗಳು ಬಿರ್ಸಾಮುಂಡರ ಜೀವನ, ಹೋರಾಟದ ಬದುಕನ್ನು ಅರಿಯಬೇಕು. ಅತ್ತ ಕಾಡು ಇಲ್ಲದೆ ಇತ್ತ ನಾಡು ಇಲ್ಲದೆ ಕಷ್ಟದ ಜೀವನ ಸಾಗಿಸುತ್ತಿರುವ ಆದಿವಾಸಿಗಳನ್ನು ಅರಣ್ಯ ಇಲಾಖೆಯು ತನ್ನದೆ ರೀತಿಯ ಕಾನೂನುಗಳನ್ನು ತಂದು ಆದಿವಾಸಿಗಳನ್ನು ಕಾಡಿನಿಂದ ಹೊರಹಾಕಿ ಅವರ ಬದುಕನ್ನು ಅತಂತ್ರಗೊಳಿಸಿದ್ದು, ಬಿರ್ಸಾಮುಂಡರ ಮಾದರಿಯಲ್ಲಿ ಹೋರಾಟ ನಡೆಸಿ ತಮ್ಮ ಹಕ್ಕು ಹಾಗೂ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತೆ ಸಲಹೆ ನೀಡಿದರು.
ಒಡನಾಡಿ ಸಂಸ್ಥೆಯ ಪರಶುರಾಮ್ ಮಾತನಾಡಿ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಬ್ರಿಟಿಷರು ತಂತ್ರಗಾರಿಕೆ ಮಾಡುತ್ತಾರೆ. ಬಿರ್ಸಾಮುಂಡರವರು ಬ್ರಿಟಿಷರ ವಿರುದ್ಧ ಗೆರಿಲ್ಲಾ ಮಾದರಿ ಯುದ್ಧನೀತಿಯನ್ನು ಜಾರಿಗೆ ತರುವ ಮೂಲಕ ಬ್ರಿಟಿಷರಿಗೆ ಭಯವನ್ನು ಹುಟ್ಟಿಸಿ ಹೋರಾಟ ನಡೆಸಿದರೂ ಅವರ ಕುತಂತ್ರಕ್ಕೆ ಬಿರ್ಸಾಮುಂಡ ಬಲಿಯಾದರೆಂದರು.
Related Articles
Advertisement
ಕಾಡು ಪ್ರವೇಶ ಎಚ್ಚರಿಕೆಬುಡಕಟ್ಟು ಕೃಷಿಕರ ಸಂಘದ ಪಿ.ಕೆ.ರಾಮು ಮತ್ತು ಗಿರಿಜರವರು ಮಾತನಾಡಿ ೭೫ನೇಅಮೃತ ಮಹೋತ್ಸವದಲ್ಲಿ ಜನಜಾತಿ ಗೌರವ ದಿವಸ್ ಘೋಷಿಸಿರುವುದು, ಆದಿವಾಸಿ ಮಹಿಳೆ ದ್ರೌಪತಿ ಮುರ್ಮುರನ್ನು ರಾಷ್ಟçಪತಿಯನ್ನಾಗಿಸಿರುವುದು ಆದಿವಾಸಿಗಳಿಗೆ ಗೌರವ ತಂದಿದೆ. ಆದಿವಾಸಿಗಳ ಪಾರಂಪರಿಕ ಅರಣ್ಯ ಹಕ್ಕುಗಳನ್ನು ಮಾನ್ಯಮಾಡಿ ಹಕ್ಕುಪತ್ರ ನೀಡದಿದ್ದರೆ ನಾವು ಕಾಡು ಪ್ರವೇಶ ಮಾಡುತ್ತೇವೆ. ನಮ್ಮ ಅರಣ್ಯ ಸಂಪತ್ತನ್ನು ನಾವೇ ಉಳಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಇದೇ ವೇಳೆ ಕಳೆದ ೪೨ವರ್ಷಗಳಿಂದ ಹೋರಾಟ ನಡೆಸಿರುವ ಭರತವಾಡಿ ಹಾಡಿಯ ಸಣ್ಣಮ್ಮ, ನೇರಳಕುಪ್ಪೆ ಹಾಡಿಯ ಕೆಂಪಮ್ಮರನ್ನು ಗೌರವಿಸಲಾಯಿತು. ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕೆಲಸಕಾರ್ಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಡೀಡ್‌ನ ತಾಲೂಕು ಸಂಯೋಜಕರಾದ ಪ್ರಕಾಶ್, ಜಯಪ್ಪ, ಬೊಮ್ಮಿ, ವಿಠಲ್, ರಕ್ಷಿತ, ಶಿಕ್ಷಕರು ಹಾಗೂ ವಿವಿಧ ಹಾಡಿ ಮಂದಿ ಭಾಗವಹಿಸಿದ್ದರು.