Advertisement
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ಕನ್ನಡ ಕಲರವ ಮಕ್ಕಳ 10 ದಿನಗಳ ಬೇಸಿಗೆ ಶಿಬಿರದ ಅಂಗವಾಗಿ ಸಂಪನ್ಮೂಲ ವ್ಯಕ್ತಿಗ ಳಾದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಪರಿಸರ ತಜ್ಞರಾದ ಜಿ.ವಿ.ಗುಂಡಪ್ಪ ಹಾಗೂ ಮಲ್ಲಿಕಾರ್ಜುನ ಎಂ., ಇವರ ನೇತೃತ್ವದಲ್ಲಿ ತುಮಕೂರು ಅಮಾನಿಕೆರೆ ವೀಕ್ಷಣೆಯ ಜೊತೆಗೆ ಅಲ್ಲಿಗೆ ಬರುವ ಪಕ್ಷಿಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.
Related Articles
Advertisement
ಉಪಯುಕ್ತ: ಶಿಬಿರದಲ್ಲಿ ತಮ್ಮ ಮಗ ಳೊಂದಿಗೆ ಭಾಗವಹಿಸಿದ್ದ ಪಾಲಿಕೆ ಸದಸ್ಯೆ ಗಿರಿಜಾ ಮಾತನಾಡಿ, ಕಸಾಪ ವತಿಯಿಂದ ಒಳ್ಳೆಯ ಕಾರ್ಯ ಕ್ರಮ ಆಯೋಜಿಸಿದ್ದಾರೆ. ಮಕ್ಕಳ ವಿಕಾಸ ಕ್ಕೆ ಬೇಕಾದ ನೃತ್ಯ, ಜಾನಪದ ಗೀತೆ, ಕನ್ನಡ ಗೀತೆಗಳ ಗಾಯನ, ಚಿತ್ರಕಲೆ, ನಾಟಕಗಳ ಪರಿಚಯವನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಡಿಸುತ್ತಿ ರುವುದು ಉಪಯುಕ್ತವಾಗಿದೆ ಎಂದರು.
ಪರಿಸರ ತಜ್ಞರಾದ ಗುಂಡಪ್ಪ, ಮಲ್ಲಿಕಾರ್ಜುನ್ ಅವರು ಮಕ್ಕಳಿಗೆ ಅಮಾನಿಕೆರೆಗೆ ಬರುವ ಪಕ್ಷಿಗಳ ಪರಿಚಯ, ಅವುಗಳ ಗುಣಲಕ್ಷಣ, ಜೀವನ ಕ್ರಮದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಹಾಗಾಗಿ ಅವರಿಗೆ ಮತ್ತು ಕಸಾಪ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕೆರೆ ಸುತ್ತಮುತ್ತ ಹಣ್ಣಿನ ಗಿಡ ಬೆಳೆಸಿ : ಕನ್ನಡ ಕಲರವ ಬೇಸಿಗೆ ಶಿಬಿರದ ಸಂಚಾಲಕರಲ್ಲಿ ಒಬ್ಬರಾದ ಧನಿಯಕುಮಾರ್ ಮಾತನಾಡಿ, ಪರಿಸರ ತಜ್ಞರಾದ ಗುಂಡಪ್ಪ ಅವರು ತಮ್ಮ ಉಪನ್ಯಾಸ ಮೂಲಕ ನಮ್ಮ ಕಣ್ಣು ತೆರೆಸಿದ್ದಾರೆ. ಈಗಾಗಲೇ ನಾವು ಗುಬ್ಬಚ್ಚಿ ಸಂತತಿಯನ್ನು ಕಳೆದುಕೊಂಡಿ ದ್ದೇವೆ. ಉಳಿದ ಪಕ್ಷಿಗಳನ್ನಾದರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯವರು ಕೆರೆಯ ಸುತ್ತಮುತ್ತ ಪಕ್ಷಿಗಳಿಗೆ ಅನುಕೂಲವಾಗುವಂತಹ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದು ಒತ್ತಾಯಿಸುತ್ತೇನೆ. ಹಾಗೆಯೇ ಸಾರ್ವಜನಿಕರು ಮನೆಯ ಮೇಲ್ಭಾಗದಲ್ಲಿ ಒಂದು ಟಬ್ ಅಥವಾ ಪಾತ್ರೆಯಲ್ಲಿ ನೀರು ಇಟ್ಟು ದಾಹದಿಂದ ಬರುವ ಪಕ್ಷಿಗಳಿಗೆ ನೀರು ಸಿಗುವಂತೆ ಮಾಡಬೇಕೆಂದು ಮನವಿ ಮಾಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಕ್ರಮ ಮಾಡಿದೆ. ಇದಕ್ಕಾಗಿ ಎಲ್ಲಾ ಪದಾಧಿಕಾರಿಗಳಿಗೂ, ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.